ಯಕ್ಷಗಾನ ಪ್ರದರ್ಶನ ಕಾರ್ಯಕ್ರಮ


ರಾಣಿಬೆನ್ನೂರ25: ಅತಿಯಾದ ವಿದೇಶಿ ಸಂಸ್ಕೃತಿ ಹಾಗೂ ಆಧುನಿಕ ಭರಾಟೆಯ ಮಧ್ಯದಲ್ಲಿ ಇಂದು ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ ಪರಂಪರಾಗತವಾಗಿ ಮುನ್ನಡೆದುಕೊಂಡು ಬಂದಿರುವ  ಜನಪದ ಕಲೆಗಳ ಜೊತೆಗೆ ಯಕ್ಷಗಾನ ಕಲೆಯೂ ಸಹ ನಶಿಸುತ್ತಿವೆ. ಅವುಗಳನ್ನು ಉಳಿಸಿ ಬೆಳಸಬೇಕಾದ ಗುರುತರ ಜವಾಬ್ದಾರಿ ಸರ್ವರ ಮೇಲಿದೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಡಾ.ಬಸವರಾಜ ಕೇಲಗಾರ ಹೇಳಿದರು.

ನಗರದ ನಗರಸಭೆಯ ಗುಡ್ಡದಸ್ಮಾರಕ ಸಭಾಭವನದಲ್ಲಿ ದಕ್ಷಿಣ ಕನ್ನಡ ಕರಾವಳಿ ಅಭಿಮಾನಿಗಳ ಬಳಗ, ಬಂಟರ ಸಂಘ, ಸ್ವಾಕರವೇ, ಬಂಟ್ಸ ಕ್ರೆಡಿಟ್ ಸೊಸೈಟಿ, ಜಿಲ್ಲಾ ಮೊಗವೀರ ಸಂಘಗಳ ಆಶ್ರಯದಲ್ಲಿ ಕುಂದಾಪುರ ಶ್ರೀಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿಯ ಕಲಾವಿದರಿಂದ ನಡೆದ ರಂಗನಾಯಕಿ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಾಡು ನುಡಿ, ಜಲ ನೆಲ ಸಂಸ್ಕೃತಿಯನ್ನು ಉಳಿಸುವುದರ ಜೊತೆಗೆ ಇತಿಹಾಸ ಪರಂಪರೆಯಿಂದ ಬಂದಿರುವ ಗ್ರಾಮೀಣ ಜನರ ಬದುಕಿನ ಒಂದು ಭಾಗವಾಗಿ ಸಾಗಿರುವ ಇಂತಹ ಕಲೆ ಮತ್ತು ಕಲಾವಿದರನ್ನು ಉಳಿಸಿಕೊಳ್ಳದೇ ಹೋದರೆ ನಮ್ಮ ತನವನ್ನು ಕಳೆದುಕೊಂಡಂತಾಗುತ್ತದೆ. ಅದಕ್ಕಾಗಿ ಇಂತಹ ಕಲೆಗಳು ಜೀವಂತವಾಗಿರಿಸಲು ನಾವೆಲ್ಲರೂ ಪ್ರಯತ್ನಿಸಬೇಕೆಂದರು.

     ಗಂಗಾ ವಿವಿದೋಧ್ದೇಶ ಸಹಕಾರಿ ಸಂಘದ ಅಧ್ಯಕ್ಷ ರತ್ನಾಕರ ಕುಂದಾಪುರ ಮಾತನಾಡಿ   ಕಲೆ, ಸಂಸ್ಕೃತಿಯನ್ನು ಅನಾವರಣಗೊಳಿಸಲು ಸರಕಾರ ವಿವಿಧ ಇಲಾಖೆಗಳ ಮೂಲಕ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಕಲಾವಿದರು ಅವುಗಳನ್ನು ಸದುಪಯೋಗಪಡಿಸಿಕೊಂಡು ತಮ್ಮಲ್ಲಿರುವ ಬಹುಮುಖ ಪ್ರತಿಭೆಗಳನ್ನು ಹೊರಸೂಸುವದರ ಜೊತೆಗೆ ಗ್ರಾಮೀಣ ಕಲೆಗಳನ್ನು ಉಳಿಸಿ ಮುನ್ನಡೆಸುವ ಕಾರ್ಯದಲ್ಲಿ ಮುಂದಾಗಬೇಕೆಂದರು.

   ಅಧ್ಯಕ್ಷತೆ ವಹಿಸಿದ್ದ ಸ್ವಾಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಮಾತನಾಡಿ ಜನಪದ ಸಂಸ್ಕೃತಿಯ ಕಲೆಗಳು ಅಂದು, ಇಂದು ಮತ್ತು ಮುಂದೆ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿ ಇಂದು ಇಂತಹ ಕಲೆಗಳನ್ನು ಉಳಿಸಲು ಶೃಮಿಸದೇ ಹೋದರೆ ಮುಂದಿನ ಪೀಳಿಗೆಯ ಮಕ್ಕಳು ಮೊಬೈಲ್, ಕಂಪ್ಯೂಟರ್ ಮತ್ತಿತರ ಮಾಧ್ಯಮಗಳ ಮೂಲಕ ಜನರಿಗೆ ತೋರಿಸುವಂತಹ ಪರಿಸ್ಥಿತಿ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಶಿವಾನಂದ ಕುಂದಾಪುರ, ಎಂ.ಅಪ್ಪುಶೆಟ್ಟಿ, ಕರಬಸಣ್ಣ ಮಾಕನೂರ, ಕೆ.ಎಸ್.ನಾಗರಾಜ, ಚಂದ್ರಣ್ಣ ಚಳಗೇರಿ, ಜಯರಾಮ ಶೆಟ್ಟಿ, ಹನುಮಂತಪ್ಪ ಚಳಗೇರಿ, ಡಾ ಸಂಜೀವ ಮುದ್ರಿ, ಅರುಣ ಶೆಟ್ಟಿ, ಮಧು ದೇವಾಡಿಗ, ಮಂಜುನಾಥ ದುಗ್ಗತ್ತಿ, ಎಚ್ ಬಿ ಬಡಕರಿಯಪ್ಪನವರ, ಚಂದ್ರಣ್ಣ ಶೆಟ್ಟಿ, ಗೋಪಾಲ ಶೆಟ್ಟಿ, ಶಿವಕುಮಾರ ಜಾಧವ, ಶ್ರೀನಿವಾಸ ಮೊಗವೀರ, ಜಯರಾಮ ದೇವಾಡಿಗ, ಕೊಟ್ರೇಶ ಎಮ್ಮಿ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಮತ್ತಿತರರು ಇದ್ದರು.