ವೈ.ಬಿ.ಜೂಡಿಯವರು ಸೃಜನಶೀಲ ಕವಿ: ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಂಡಗಿ

ಲೋಕದರ್ಶನ ವರದಿ

ಕೊಪ್ಪಳ 29: ವೈ.ಬಿ.ಜೂಡಿಯವರಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲವಿದೆ, ಧೈರ್ಯವಿದೆ. ರಂಗಭೂಮಿಯಲ್ಲಿ ತರಬೇತಿ ಪಡೆದು 'ಅಪೂರ್ಣ, 'ಸಂಕ್ರಾಂತಿ', 'ರಕ್ತರಾತ್ರಿ ಮುಂತಾದ ನಾಟಕಗಳಲ್ಲಿ ನಟಿಸಿ, ರಂಗಭೂಮಿ ಕ್ಷೇತ್ರದಲ್ಲಿ ಸೈ ಎನಿಸಿಕೊಂಡು ಒಳ್ಳೆಯ ರಂಗನಟರಾಗಿ ಹೊರಹೊಮ್ಮಿದ್ದಾರೆ. ಸಾಹಸಿ ಸಂಘಟಕರಾದ ಇವರು ಹಲವಾರು ಕನ್ನಡಪರ ಸಂಘಟನೆಗಳಲ್ಲಿ ತೊಡಗಿ ನಾಡು-ನುಡಿಗಾಗಿ ಹೋರಾಟ ಮಾಡಿದ್ದಾರೆ. ಪ್ರಸ್ತುತ 'ಗಣ್ಯರ ಪ್ರಭುತ್ವ ಕವನ ಸಂಕಲನವನ್ನು ಹೊರತರುವ ಮೂಲಕ ಸೃಜನಶೀಲ ಕವಿಗಳಾಗಿದ್ದಾರೆ. ಇವರ ಕವನಗಳು ಧ್ವನಿಪೂರ್ಣವಾಗಿವೆ, ಲಯಬದ್ಧವಾಗಿವೆ. ಇವರು ತಮ್ಮ ಕವನ ಸಂಕಲನದಲ್ಲಿ ಜನ ಸಾಮಾನ್ಯರ ಶೋಷಣೆ, ರಾಜಕೀಯ ಪ್ರಜ್ಞೆ, ಸಮಕಾಲೀನ ಪ್ರಜ್ಞೆ ಮತ್ತು ಉಳ್ಳವರ ಪ್ರಭುತ್ವದ ಕಪಟ ನಾಟಕಗಳ ಬಗ್ಗೆ ಬರೆದಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಹೇಳಿದರು.

ಅವರು ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಇಟಗಿಯಲ್ಲಿ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ವತಿಯಿಂದ ಇಟಗಿ ಉತ್ಸವದ ಅಂಗವಾಗಿ ಹಮ್ಮಿಕೊಂಡ 8ನೇ ಕವಿ ಸಮ್ಮೇಳನದಲ್ಲಿ ವೈ.ಬಿ.ಜೂಡಿಯವರ 'ಗಣ್ಯರ ಪ್ರಭುತ್ವ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಕವಿ ವೈ.ಬಿ.ಜೂಡಿ ಮಾತನಾಡುತ್ತಾ, ಬದುಕಿನ ಅನುಭವ ಕಲಿಸುವ ವಿದ್ಯೆಯನ್ನು ಯಾವ ವಿಶ್ವವಿದ್ಯಾಲಯವು ಕಲಿಸದು ಬಡತನ ಇದರೊಂದಿಗೆ ಬೆರೆತರೆ ಸಾಕು ಮನುಷ್ಯನನ್ನು ಚಿಂತನೆಗೆ ಹಚ್ಚುತ್ತದೆ. ನಾನು ಅನುಭವಿಸಿದ ಜೀವನಾನುಭವದ ಕ್ಷಣಗಳೇ ಕವನಗಳ ರೂಪದಲ್ಲಿ ಹೊರಬಂದಿವೆ. ಇದರಲ್ಲಿ ನನ್ನ ವಿದ್ಯಾಥರ್ಿ ದಿನಗಳನ್ನು ನೆನಪಿಸುವ ಕವನಗಳಿವೆ. ನನ್ನ ಹದಿ ಹರೆಯದ ವೈಯಸ್ಸಿನ ಎಲ್ಲರ ಭಾವನೆಗಳು ಇವೆ ಆಗಿರಲು ಸಾಧ್ಯ ಎಂದರು. 

ರೈತರ ಸಮ್ಮೇಳನದ ಅಧ್ಯಕ್ಷರಾದ ಎಂ.ಬಿ.ಅಳವಂಡಿ, 8ನೇ ಕವಿ ಸಮ್ಮೇಳದ ಅಧ್ಯಕ್ಷರಾದ ಡಾ.ಶಿವರಾಜ ಗುರಿಕಾರ, ಸಾಹಿತಿಗಳಾದ ವಿಮಲಾ ಇನಾಮದಾರ, ಎ.ಪಿ.ಅಂಗಡಿ, ಸುನೀಲ ಮಾಲಿಪಾಟೀಲ, ಶಾಂತಾ ಯಮನೂರ, ಅನುಸೂಯ ಮಿಟ್ಟಿ, ನಿಂಗಮ್ಮ ಪಟ್ಟಣಶೆಟ್ಟ, ಜಿ.ಆರ್.ಕಲ್ಮಠ, ಎಸ್.ಎಸ್.ಮುದ್ಲಾಪೂರ, ಶ್ರೀಕಾಂತ ಪೂಜಾರ, ಬಸವರಾಜ ಉಪ್ಪಿನ, ವಿರೂಪಾಕ್ಷಪ್ಪ ಕಾಮನೂರು, ವೀರಯ್ಯ ಪೂಜಾರ, ಗವಿಸಿದ್ಧಪ್ಪ ಬಾರಕೇರ, ಎಸ್.ಕೆ.ದಾನಕೈ, ಶಾಂತಪ್ಪ ಪಟ್ಟಣಶೆಟ್ಟಿ, ರಾಜಶೇಖರ ಪಾಟೀಲ, ಹಿರಿಯ ಪತ್ರಕರ್ತರಾದ ಸ.ಶರಣಪ್ಪ ಪಾಟೀಲ, ಉಪನ್ಯಾಸಕ ಮಹಾಂತೇಶ ನೆಲಾಗಣಿ, ಹಿರಿಯರಾದ ಮಾರುತಿರಾವ್ ಸುವರ್ೆ, ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ಮಹೇಶಬಾಬು ಸುರ್ವೇ, ಶಿಕ್ಷಕ ಉಮೇಶ ಸುವರ್ೆ ಮುಂತಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಅನ್ನಪೂರ್ಣ ಮನ್ನಾಪೂರ ಪ್ರಾರ್ಥಿಸಿದರು. ಸುನೀಲ ಮಾಲಿಪಾಟೀಲ ನಿರೂಪಿಸಿದರು.  ಮೈಲಾರಪ್ಪ ಉಂಕಿ ಸ್ವಾಗತಿಸಿದರು. ಗವಿಸಿದ್ಧಪ್ಪ ಕೊನಸಾಗರ ವಂದಿಸಿದರು.