ನೀನಾ ನಾನಾ ಎಂದು ಕುಸ್ತಿ ಅಖಾಡದಲ್ಲಿ ಸೆಣಸಾಡಿದ ಪೈಲ್ವಾನರು!

Wrestling tournament- Karwar news

ಮುಂಡಗೋಡ 10: ಇಲ್ಲಿಯ ಬಸವಣ್ಣ ಹಾಗೂ ವೀರಭದ್ರೇಶ್ವರ ಜಾತ್ರೆ ನಿಮಿತ್ತ ಕುಸ್ತಿ ಪಂದ್ಯಾವಳಿ ದೇವಸ್ಥಾನದ ಆಡಳಿತ ಕಮೀಟಿ ವತಿಯಿಂದ ಬುಧವಾರ ದೇವಸ್ಥಾನದ ಮೈದಾನದಲ್ಲಿ ಅದ್ದೂರಿಯಾಗಿ ಕುಸ್ತಿ ಪಂದ್ಯಾವಳಿ ನಡೆದವು.  

20 ಕ್ಕೂ ಹೆಚ್ಚು ಕುಸ್ತಿ ಪಟ್ಟುಗಳು ವಿಭಿನ್ನ ರೀತಿಯಲ್ಲಿ ಟಾಂಗ್ ಗಳನ್ನು ಹಾಕಿ ಕುಸ್ತಿ ಯಾಡಿ ನೆರೆದ್ ನೀನಾ ನಾನಾ ಎಂದು ಕುಸ್ತಿ ಅಖಾಡದಲ್ಲಿ ಸೆಣಸಾಡಿದ ಪೈಲ್ವಾನರು ಜನರನ್ನು ರಂಜಿಸಿದ್ದರು.ಹಾಗೂ ಬಾಲಕರು ಸಹಿತ ಕುಸ್ತಿ ಆಡುವಂತ ಮನೋಬಾವನುಳ್ಳವರು ಆಗಿದ್ದಾರೆ. ಎನ್ನುವುದನ್ನು ನಡೆದ ಕುಸ್ತಿಪಂದ್ಯಗಳಲ್ಲಿ ಕೆಲ ಬಾಲಕರು ಅತ್ಯಂತ ಉತ್ಸಾಹದಿಂದ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಆದರೆ ಕುಸ್ತಿಪಂದ್ಯಗಳು ನಡೆಯುವುದು ಅಪರೂಪದಲ್ಲಿ ಅಪರೂಪ. ಆದ್ದರಿಂದ ಕುಸ್ತಿ ಪಂದ್ಯಗಳನ್ನು ವೀಕ್ಷಿಸಲು ಅನೇಕ ಹಳ್ಳಿಗಳಿಂದ ಅಪಾರ್ ಪ್ರಮಾಣದ್ ಜನಸಾಗರ ಹರಿದು ಬಂದಿತ್ತು.