ಜನಮನಗೆದ್ದ ಕುಸ್ತಿ ಪಂದ್ಯ

ಗುಳೇದಗುಡ್ಡ09: ಸಮೀಪದ ಕೋಟೆಕಲ್ ಗ್ರಾಮದ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ಹುಚ್ಚೇಶ್ವರ ಸ್ವಾಮಿಗಳ ಜಾತ್ರಾ ಮಹೋತ್ಸವ ನಿಮಿತ್ಯ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯ ಜನಮನ ರಂಜಿಸಿತು. ಅಂತಿಮ ಕುಸ್ತಿಯಲ್ಲಿ ಅಥಣಿಯ ಧರಿಯಪ್ಪ ಪ್ರಥಮ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.

   ಪಂದ್ಯ ಗೆಲ್ಲಲು ಕುಸ್ತಿ ಪಟುಗಳು ನಾನಾ ತರಹದ ಕಸರತ್ತು ಹಾಗೂ ಪಟ್ಟುಗಳನ್ನು ಪ್ರದಶರ್ಿಸಿದರು. ಕಮತಗಿ, ಬೇವಿನಮಟ್ಟಿ, ಶಿರೂರ, ಬೆಳಗಾವಿ, ಅಥಣಿ, ಮುಧೋಳ, ಬೇವೂರ, ಮುದ್ದೇಬಿಹಾಳ, ತುಳಸಿಗೇರಿ ಸೇರಿದಂತೆ ನಾನಾ ಕಡೆಗಳಿಂದ ಸುಮಾರು 63ಕ್ಕೂ ಹೆಚ್ಚು  ಕುಸ್ತಿಪಟುಗಳು ಸ್ಪಧರ್ೆಯಲ್ಲಿ ಭಾಗವಹಿಸಿದ್ದರು. ಧರಿಯಪ್ಪ ಮತ್ತು ಅಯ್ಯಪ್ಪನ್ನವರ್ ಇವರಿಬ್ಬರ ಮಧ್ಯ ನಡೆದ ಅಂತಿಮ ಕಾಳಗ ಬಹಳ ರೋಚಕವಾಗಿತ್ತು. ಅಥಣಿಯ ಧರಿಯಪ್ಪ ಪ್ರಥಮ ಸ್ಥಾನ ಪಡೆದರೆ, ಮುಧೋಳದ ಅಯ್ಯಪ್ಪ ದ್ವಿತೀಯ ಸ್ಥಾನ ಪಡೆದು ತೃಪ್ತಿ ಪಟ್ಟುಕೊಳ್ಳುವಂತಾಯಿತು.

  ಈ ಸಂದರ್ಭದಲ್ಲಿ  ಗ್ರಾಮದ ಹಿರಿಯರಾದ ಶ್ರೀಮಂತ ಭುಜಂಗರಾವ್ ದೇಸಾಯಿ, ಶಶಿಧರ ದೇಸಾಯಿ, ಸಂಗಪ್ಪ ಆಲೂರ, ಸಿದ್ದಪ್ಪ ಮಾವಿನಮರದ, ಶೇಖಪ್ಪ ಕಡಪಟ್ಟಿ, ಮಲ್ಲಪ್ಪ ತಳವಾರ, ಕರಿಯಪ್ಪ ಸೀತಿಮನಿ, ಮಹಾಗುಂಡಪ್ಪ ಕಮತರ, ಪರಸುರಾಮ, ನಾಗಪ್ಪ ವಾಲೀಕಾರ, ಹುಚ್ಚಪ್ಪ ಮೇಟಿ ಮತ್ತು ಯಲ್ಲಪ್ಪ ತಳವಾರ ಸೇರಿದಂತೆ ಇತರರು ಇದ್ದರು.