ನವದೆಹಲಿ: ಇದೇ ಮೊದಲ ಬಾರಿಗೆ, ಭಾರತೀಯ ಕುಸ್ತಿ ಫೆಡರೇಶನ್ ಗೆ ಟಾಟಾ ಮೋಟಾಸರ್್ ಪ್ರಾಯೋಜನೆ ದೊರೆತಿದೆ.
ಕ್ರೀಡೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮೂರು ವರ್ಷಗಳ ಕಾಲ ಟಾಟಾ ಮೋಟಾಸರ್್ ಕುಸ್ತಿ ಫೆಡರೇಶನ್ ಜೊತೆಗೆ ಸಹಭಾಗಿತ್ವಕ್ಕೆ ಮುಂದಾಗಿದೆ. ಒಲಂಪಿಕ್ಸ್ ನಲ್ಲಿ ಪದಕ ಗೆದ್ದಿದ್ದ ಕುಸ್ತಿ ವಿಭಾಗದ ಕ್ರೀಡಾಪಟುಗಳಾದ ಸುಶೀಲ್ ಕುಮಾರ್, ಯೋಗೇಶ್ವರ್ ದತ್, ಸಾಕ್ಷಿ ಮಲ್ಲಿಕ್ ಸಮ್ಮುಖದಲ್ಲಿ ಪ್ರಾಯೋಜನೆ ಕುರಿತು ಘೋಷಣೆ ಮಾಡಲಾಗಿದೆ.
ಈ ಬಗ್ಗೆ ಮಾತನಾಡಿರುವ ಟಾಟಾ ಮೋಟಾಸರ್್ ನ ವಾಣಿಜ್ಯ ವಾಹನ ಉದ್ದಿಮೆಗಳ ವಿಭಾಗದ ಮುಖ್ಯಸ್ಥರಾದ ಗಿರೀಶ್ ವಾಘಾ, "ಕ್ರಿಕೆಟೇತರವಾಗಿ ಅಸ್ತಿತ್ವದಲ್ಲಿರುವ ದೊಡ್ಡ ಒಕ್ಕೂಟಗಳಲ್ಲಿ ಕುಸ್ತಿ ಫೆಡರೇಶನ್ ಸಹ ಒಂದಾಗಿದೆ ಎಂದು ಹೇಳಿದ್ದಾರೆ.
ಡಬ್ಲ್ಯೂಎಫ್ಐ ನ ಅಧ್ಯಕ್ಷ ಬ್ರಿಜುಭೂಷಣ್ ಶರಣ್ ಸಿಂಗ್ ಪ್ರಾಯೋಜಕತ್ವದ ಬಗ್ಗೆ ಮಾತನಾಡಿದ್ದು, ಭಾರತದ ಪುರಾತನ ಕ್ರೀಡೆಗೆ ಇದೇ ಮೊದಲ ಬಾರಿಗೆ ಪ್ರಾಯೋಜಕತ್ವ ದೊರೆಯುತ್ತಿದ್ದು, ಪ್ರಾಯೋಜಕತ್ವ 3 ವರ್ಷಗಳು ಮುಂದುವರೆಯಲಿದೆ ಎಂದಿದ್ದಾರೆ.ಪ್ರಾಯೋಜಕತ್ವದ ಭಾಗವಾಗಿ ಟಾಟಾ ಮೋಟಾಸರ್್ ವಿವಿಧ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ 50 ಪುರುಷರು ಹಾಗೂ 50 ಮಹಿಳೆಯರಿಗೆ ಉತ್ತೇಜನ ನೀಡಲಿದೆ.