ಬೆಟಗೇರಿ: ಸಮೀಪದ ಮಮದಾಪೂರ ಗ್ರಾಮದ ಜಿವಿವಿ ಸಂಘದ ಚಿಂತಾಮಣಿ ಪಾವಟೆ ಪ್ರೌಢ ಶಾಲೆಯಲ್ಲಿ ಶುಕ್ರವಾರ ನ.15 ರಂದು ನಡೆದ ಭಕ್ತ ಕನಕದಾಸರ ಜಯಂತಿ ಆಚರಣೆ ಕಾರ್ಯಕ್ರಮ ನಡೆಯಿತು.
ಕನಕದಾಸರ ಭಾವ ಚಿತ್ರಕ್ಕೆ ಪೂಜೆ, ಪುಷ್ಪಾರ್ಪನೆ, ಶಾಲಾ ಮಕ್ಕಳಿಗೆ ಸಿಹಿ ವಿತರಣೆ ಬಳಿಕ ಶಾಲಾ ವಿದ್ಯಾಥರ್ಿಗಳಿಗೆ ಭಾಷಣ, ವೇಷಭೂಷಣ ಹಾಗೂ ಮತ್ತೀತರ ಸ್ಫಧರ್ೆ ಆಯೋಜಿಸಿ, ವಿಜೇತ ವಿದ್ಯಾಥರ್ಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಯ ಅಶೋಕ ತೋಟಗಿ ಅವರು, ಕನಕದಾಸರ ಬದುಕು, ಬರಹ ಹಾಗೂ ದಾಸ ಸಾಹಿತ್ಯದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ಶಿಕ್ಷಕರು, ಸಿಬ್ಬಂದಿ, ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು, ಶಿಕ್ಷಣಪ್ರೇಮಿಗಳು, ಸ್ಥಳೀಯರು, ಇತರರು ಇದ್ದರು.