ಉಳ್ಳಾಗಡ್ಡಿ-ಖಾನಾಪೂರ:-ಸಮೀಪದ ಕುರಣಿ ಗ್ರಾಮದ ಶ್ರೀ ಅಡವಿಸಿದ್ದೇಶ್ವರ ಸುಕ್ಷೇತ್ರದಲ್ಲಿ ವಿಜಯದಶಮಿಯ ನಿಮಿತ್ಯ ಶ್ರೀ ಭಾವೇಶ್ವರಿ ದೇವಿಯ ಅಮ್ಮನ ಸನ್ನಿಧಿಯಲ್ಲಿ ಪ್ರತಿಷ್ಠಾಪಿಸಿದ ದುಗರ್ಾದೇವಿಯ ಮೂತರ್ಿಯನ್ನು ಪ್ರತಿಷ್ಠಾಪಿಸಿದ್ರಿಂದ ದಸರಾ ಮುಕ್ತಾಯದ ವರೆಗೆ ಶ್ರೀಮಲ್ಲಿಕಾಜರ್ುನ ದೇವರು ನಿತ್ಯ ದೇವಿ ಆರಾದನೆ, ಉಪವಾಸ ಮತ್ತು ಮೌನಾನುಷ್ಠಾನ ವೃತ್ತ ಕೈಗೊಂಡಿದ್ದು ಅ.8ರಂದು ಸಂಜೆ 8 ಗಂಟೆಗೆ ಭಾವೇಶ್ವರಿ ದೇವಿಯ ಸನ್ನಿಧಿಯಲ್ಲಿ ಮೌನಾನುಷ್ಠಾನ ವೃತ ಮುಕ್ತಾಯವಾಗುವುದು ಮತ್ತು ಅಂದು ಶ್ರೀಗಳಿಂದ ದಾನಿಗಳಿಗೆ ಸತ್ಕಾರ ಸಮಾರಂಭ ನಡೆಯಲಿದೆ, ಶ್ರೀಗಳಿಂದ ಭದ್ರಕಾಳಿ ಮೂತರ್ಿ ಪ್ರತಿಷ್ಠಾಪಣೆ, ಹಾಗೂ ಮುತೃದೆಯರ ಉಡಿತುಂಬುವ ಕಾರ್ಯಕ್ರಮ ಸಂಜೆ ಬನ್ನಿ ಮುಡಿಯುವ ಕಾಯ್ಕ್ರಮ ನಡೆಯಲಿದೆ ಎಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.