ಭವನ ಕಮಗಾರಿಗೆ ಪೂಜೆ

ರಾಯಬಾಗ 25: ಮತಕ್ಷೇತದ ಎಲ್ಲ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿಗಳ ಸಮುದಾಯದ ಜನರ ಅನುಕೂಲಕ್ಕಾಗಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಂ ಅವರ ಹೆಸರಿನಲ್ಲಿ ಭವನಗಳನ್ನು ನಿಮರ್ಿಸಲಾಗುತ್ತಿದೆ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.

ಬುಧವಾರ ತಾಲೂಕಿನ ಭೆಂಡವಾಡ ಮತ್ತು ದೇವನಕಟ್ಟೆ ಗ್ರಾಮಗಳಲ್ಲಿ ಸಮಾಜ ಕಲ್ಯಾಣ ಇಲಾಖೆ ಯೋಜನೆಯಡಿ ಮಂಜೂರಾದ ತಲಾ 12 ಲಕ್ಷರೂ. ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಂ ಭವನಗಳ ನಿಮರ್ಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಭವನಗಳನ್ನು ಸಾಂಸ್ಕೃತಿಕ ಚಟುವಟಿಕೆ, ಮದುವೆ, ಮುಂಜಿ ಸೇರಿದಂತೆ ಒಳ್ಳೆ ಕಾರ್ಯಗಳಿಗೆ ಉಪಯೋಗಿಸಿಕೊಳ್ಳಬೇಕು ಮತ್ತು ಭವನಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕೆಂದು ಸೂಚಿಸಿದರು. 

ಇಂಚಗೇರಿ ಮಠದ ಪ್ರಭು ಮಹಾರಾಜ, ಜಿ.ಪಂ.ಸದಸ್ಯ ನಿಂಗಪ್ಪ ಪಕಾಂಡಿ, ಜಿ.ಪಂ.ಅಭಿಯಂತರರಾಜೇಶಡಂಗ, ಸದಾಶಿವ ಘೋರ್ಪಡೆ, ಸದಾನಂದ ಹಳಿಂಗಳಿ, ರೇವಣು ಶಿವಾಪೂರೆ, ಬಸವರಾಜ ಡೊಣವಾಡೆ, ಈಶ್ವರ ನಿಂಬಾಳ್ಕರ್, ಸದಾಶಿವ ಬಂಡಿ, ಸದಾಶಿವ ಹುಂಜ್ಯಾಗೋಳ, ಗಿರೀಪ್ಪ ನಾಯಿಕ, ಮಾರುತಿ ನಾಯಿಕ, ಕಲ್ಲಪ್ಪ ಮೇಗಾಡೆ, ಸಂಗಪ್ಪ ಬೆನ್ನಾಳೆ, ಯಲ್ಲಾಲಿಂಗ ನಾಯಿಕ, ಲಲಿತಾ ಸಣ್ಣಕ್ಕಿ, ಪಾರವ್ವ ಮಾಂಗ, ಸಾವಂತ ನಾಯಿಕ ಸೇರಿದಂತೆಅನೇಕರು ಉಪಸ್ಥಿತರಿದ್ದರು.