ಎಲ್ಲ ವಲಯಗಳಲ್ಲಿ ಕಾಡುತ್ತಿದೆ ನಿರುದ್ಯೋಗ ಸಮಸ್ಯೆ: ಹೊರಟ್ಟಿ


ಧಾರವಾಡ, ಕೆಲಗೇರಿ-19, ಎಲ್ಲ ವಲಯಗಳಲ್ಲಿ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಗ್ರಾಮೀಣ ಭಾಗದ ಎಲ್ಲ ಜನರೂ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗದ ಕಾರಣ ಆ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರವಾಗಿದೆ ಎಂದು ವಿಧಾನ ಸಭೆಯ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಕನರ್ಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರ, ಧಾರವಾಡ ಜಿಲ್ಲಾ ಸಹಕಾರ ಯೂನಿಯನ್ ಧಾರವಾಡ, ಕೆ.ಸಿ.ಸಿ. ಬ್ಯಾಂಕ ಧಾರವಾಡ, ನವಲಗುಂದ ಮತ್ತು ಅಣ್ಣಿಗೇರಿ ತಾಲೂಕಿನ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮತ್ತು ಸಹಕಾರ ಇಲಾಖೆ ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ 65ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ "ಸಹಕಾರ ಸಂಸ್ಥೆಗಳ ಮೂಲಕ ಸರಕಾರಿ ಯೋಜನೆಗಳು ಮತ್ತು ಆದಾಯೋತ್ಪನ್ನ ಕುರಿತು ಜಾಗೃತಿ ಮೂಡಿಸುವುದು" ದಿನದ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಈ ಹಂತದಲ್ಲಿ ಸಹಕಾರ ಸಂಸ್ಥೆಗಳು ಹೊಸ ಹೊಸ ಆಯಾಮಗಳತ್ತ ಗಮನಹರಿಸಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕಾಗಿದೆ. ಆದಾಯೋತ್ಪನ್ನಕ್ಕೆ ಹೊಸ ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಅವರು ಸಹಕಾರ ಸಂಸ್ಥೆಗಳು ಲಕ್ಷಾಂತರ ಉದ್ಯೋಗಗಳನ್ನು ಸೃಷ್ಠಿಸಿವೆ. ಅದರಲ್ಲಿ ಬಹುಪಾಲು ಸ್ವಉದ್ಯೋಗದಲ್ಲಿ ನಿರತರಾದವರಿದ್ದಾರೆ. ಸಹಕಾರ ಸಂಸ್ಥೆಗಳು ಸದಸ್ಯರಲ್ಲಿ, ನೌಕರರಲ್ಲಿ ಆಥರ್ಿಕ ಸಾಮಥ್ರ್ಯವನ್ನು ಹೆಚ್ಚಿಸುವ ಮೂಲಕ ಉದ್ಯೋಗ ಸೃಷ್ಠಿಗೆ ಇಂಬು ನೀಡುತ್ತಿವೆ ಎಂದರು.

ಯೂನಿಯನ್ ಉಪಾಧ್ಯಕ್ಷ ಪ್ರತಾಪ ಎ. ಚವ್ಹಾಣ ಅವರು ಸಹಕಾರ ತತ್ವಗಳಲ್ಲಿ ನಂಬಿಕೆಯನ್ನಿಟ್ಟು ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಶಕ್ತಿ ನೀಡಿ ಸಹಕಾರ ಸಂಘಗಳು ಸ್ವತಂತ್ರವಾಗಿ ಪ್ರಜಾ ಸತ್ತಾತ್ಮಕ ನಿಯಂತ್ರಣ ಹೊಂದಿ ಮತ್ತು ವೃತ್ತಿ ಪರತೆಯಿಂದ ಕಾರ್ಯನಿರ್ವಹಿಸುವ ಸಂಘಗಳಾದಾಗ ಮಾತ್ರ ಸಹಕಾರ ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯವೆಂದರು.

ಧಾರವಾಡ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಕೆ.ಸಿ.ಸಿ. ಬ್ಯಾಂಕಿನ ಅಧ್ಯಕ್ಷ  ಬಾಪುಗೌಡ ಡಿ. ಪಾಟೀಲ ಅವರು "ಸಹಕಾರ" ರಾಜ್ಯ ಸರಕಾರಗಳ ವಿಷಯವಾಗಿರುವುದರಿಂದ ಸಹಕಾರ ಚಳುವಳಿಯ ಬೆಳವಣಿಗೆಯ ಅವಲೋಕನವನ್ನು ಕರಾರುವಕ್ಕಾಗಿ ಮಾಡಲು ಸಾಧ್ಯವಾಗುತ್ತಿಲ್ಲ. ರಾಜ್ಯ ಸರಕಾರಗಳ ನೀತಿಗಳು ಸಹಕಾರ ವ್ಯವಸ್ಥೆಯ ಬೆಳವಣಿಗೆಗೆ ಮಾನದಂಡಗಳಾಗಿರುತ್ತವೆ. ಈ ಎಲ್ಲ ಮಾನ ದಂಡಗಳನ್ನು ಅರಿತು ನಡೆಯಬೇಕೆಂದು ಅವರು ಕರೆ ನೀಡಿದರು

ಸಭೆಯ ಅಧ್ಯಕ್ಷತೆ ವಹಿಸಿದ ಕೆಲಗೇರಿ ಶಿವಶಕ್ತಿ ಮಹಿಳಾ ವಿವಿಧೋದ್ದೇಶಗಳ ಸಹಕಾರ ಸಂಘ ಅಧ್ಯಕ್ಷ ವಿಜಯಲಕ್ಷ್ಮೀ ಲೂತಿಮಠ ಅವರು ಸಹಕಾರಿ ಸಪ್ತಾಹದ ಮಹತ್ವವನ್ನು ವಿವರಿಸುತ್ತ, ಗ್ರಾಮೀಣ ಅಥರ್ಿಕವಾಗಿ ಸ್ವಾವಲಂಬಿಗಳಾಗಲು ಸಹಕಾರಿ ಸಂಘಗಳು ದಾರಿದೀಪವಾಗಿವೆ. ಗ್ರಾಮೀಣ ಮಹಿಳೆಯರನ್ನು ಸಂಘಟಿಸಿ ಸ್ವ_ಸಹಾಯ ಗುಂಪುಗಳನ್ನು ರಚಿಸಿ, ಸಾಲ ಮತ್ತು ಇತರ ಸವಲತ್ತುಗಳನ್ನು ಒದಗಿಸಿ ಅವರನ್ನು ಕೂಡಾ ಅಥರ್ಿಕವಾಗಿ ಸ್ವಾವಲಂಬಿಯಾಗಲು ಸಹಕಾರಿ ಸಂಘಗಳ ಪಾತ್ರ ಬಹು ಮುಖ್ಯವಾಗಿದೆ ಎಂದರು.

ಕಲ್ಮೇಶ್ವರ ಟ್ರಸ್ಟ ಕಮೀಟಿ ಅಧ್ಯಕ್ಷ ರುದ್ರಗೌಡ ವ್ಹಿ. ಪಾಟೀಲ, ಕಲ್ಮೇಶ್ವರ ಸೌಹಾರ್ದ ಸಹಕಾರಿ ಅಧ್ಯಕ್ಷ ಮಹಾದೇವಪ್ಪ ಹಂಪಣ್ಣವರ, ಹಿರಿಯ ಸಹಕಾರಿಗಳಾದ ಶಿವಪುತ್ರಯ್ಯ ಗುಡ್ಡದಮಠ, ಬಸನಗೌಡ ಎಸ್. ಸಿದ್ದಾಪೂರ, ಶಿವಪ್ಪ ಎಂ. ಸಾದರ, ಸಹಕಾರ ಸಂಘಗಳ ನಿವೃತ್ತ ಅಪರ ನಿಬಂಧಕಿ ಹನುಮಾಕ್ಷಿ ಗೋಗಿ, ಸಹಕಾರಿಗಳಾದ ಪಂಚಯ್ಯ ಹೊಂಗಲಮಠ, ಕರಬಸಯ್ಯ ಸಿ. ಕಡ್ಲಿ, ಕರಬಸಯ್ಯ ಸಿ. ಕಡ್ಲಿ, ಕಲ್ಲಪ್ಪ ದಾಳಿ, ಬಸನಗೌಡ ಪಾಟೀಲ, ದೇವೇಂದ್ರ ಹಂಚಿನಮನಿ, ಮಂಜು ವ್ಹಿ. ಪಾಟೀಲ, ನಾಗೇಶ ತಲವಾಯಿ, ಶಿವಪ್ಪ ಮಾಳಗಿ, ಲೀಲಾವತಿ ಎಸ್. ಗುಡ್ಡದಮಠ, ಅನ್ನಪೂಣರ್ಾ ಹೊಸಮಠ, ಎಂ.ಜಿ. ಹಿರೇಮಠ ಅವರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು.

ಕೆ.ಸಿ.ಸಿ. ಬ್ಯಾಂಕಿನ ಎಸ್.ವ್ಹಿ. ಹೂಗಾರ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.  ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ನಿವೃತ್ತ ಉಪನಿದರ್ೇಶಕ ಪಿ.ಪಿ. ಗಾಯಕವಾಡ ಉಪನ್ಯಾಸ ನೀಡಿದರು.