ವಿಶ್ವ ಮಾದಕ ದಿನಾಚರಣೆ

ಲೋಕದರ್ಶನವರದಿ

ರಾಣೇಬೆನ್ನೂರು 27: ಕಾಲೇಜ ವಿಧ್ಯಾಥರ್ಿಗಳು ದಾರಿ ತಪ್ಪುವ ಹಂತಗಳ ಹೆಚ್ಚಾಗಿದ್ದು ದುಷ್ಚಟಗಳಾದ ಮಧ್ಯಪಾನ, ಬೀಡಿ, ಸಿಗರೇಟು, ಗುಟಕಾ, ತಂಬಾಕು, ಗಾಂಜಾ, ಸೇವನೆಯಿಂದ ಆರೋಗ್ಯ ಹದಗೆಡುತ್ತಿದೆ. ಇದರಿಂದ ತಮ್ಮ ಉತ್ತಮ ಜೀವನವನ್ನೇ ಕಳೆದುಕೊಳ್ಳುತ್ತೀರಿ ಎಂದು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಸತೀಶ ಶೇಟ್ ಹೇಳಿದರು.

   ಇಲ್ಲಿನ ಮಾರುತಿ ನಗರದ ಸರಕಾರಿ ಸ್ವತಂತ್ರ ಪದವಿ ಪೂರ್ವ ಮಹಾ ವಿಧ್ಯಾಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಮಾದಕ ವಸ್ತುಗಳ ವಿರೋದಿ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

  ದುಶ್ಚಟಗಳಿಂದ ವಿಧ್ಯಾಥರ್ಿಗಳು ದಾರಿ ತಪ್ಪುವ ಸಾಧ್ಯತೆ ಇತ್ತೀಚಿನ ದಿನಗಳಲ್ಲಿ ಅಧಿಕವಾಗಿದೆ. ಈ ಬಗ್ಗೆ ಪಾಲಕರು ಈ ಎಚ್ಚರ ವಹಿಸುವುದು ಸೂಕ್ತ ಎಂದರು.

   ಪ್ರಾಚಾರ್ಯ ಬಸವರಾಜ, ಗೀತಾ ಅಜ್ಜೋಡಿಮಠ, ವಲಯ ಮೇಲ್ವಿಚಾರಕ ಮಂಜುನಾಥ.ವಿ, ವೀಣಾ ಪಾಟೀಲ, ಸೇವಾಪ್ರತಿನಿಧಿಗಳು, ಒಕ್ಕೂಟದ ಅಧ್ಯಕ್ಷರು, ಉಪನ್ಯಾಸಕರು  ಸೇರಿದಂತೆ ಮತ್ತಿತರರು ಇದ್ದರು.