ನೀರು ಶುದ್ದಿಕರಣ ಘಟಕದಲ್ಲಿ ವಿಶ್ವ ಜಲ ದಿನಾಚರಣೆ ನೀರು ಹಿತ - ಮಿತ ಬಳಕೆ ಇಂದಿನ ಅಗತ್ಯ- ನ್ಯಾಯಾಧೀಶ ಭೂಸಗೋಳ

World Water Day celebrated at water purification plant - Water conservation is the need of the hour

  ನೀರು ಶುದ್ದಿಕರಣ  ಘಟಕದಲ್ಲಿ ವಿಶ್ವ ಜಲ ದಿನಾಚರಣೆ ನೀರು ಹಿತ - ಮಿತ  ಬಳಕೆ ಇಂದಿನ ಅಗತ್ಯ- ನ್ಯಾಯಾಧೀಶ ಭೂಸಗೋಳ  

 ರಾಣೇಬೆನ್ನೂರು   27  : ಪ್ರತಿ ವರ್ಷ ಬೇಸಿಗೆ ಕಾಲ ಬಂತೆಂದರೆ ನಾಡಿನಾದ್ಯಾಂತ ಅಲ್ಲಲ್ಲಿ ನೀರಿನ ಕ್ಷಾಮವನ್ನು ಎದುರಿಸುವುದು ಸಾಮಾನ್ಯ ಸಂಗತಿಯಾಗಿದೆ, ಅದಕ್ಕಾಗಿ ಮುಂಜಾಗ್ರತೆ ಕ್ರಮವಹಿಸಿ, ಹಿತ ಮತ್ತು ಮಿತವಾಗಿ ಬಳಸುವುದರ ಮೂಲಕ ಬೇಸಿಗೆ ಕಾಲ ಸಮರ್ಥವಾಗಿ  ಎದುರಿಸಲು ಮುಂದಾಗಬೇಕಾದ ಇಂದಿನ  ಅಗತ್ಯವಿದೆ ಎಂದು 3ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಮಹಾಂತೇಶ ಭೂಸಗೋಳ ಹೇಳಿದರು.ಅವರು, ಇಲ್ಲಿನ ಸಿದ್ದೇಶ್ವರ ನಗರದ, ಜಲ ಶುದ್ಧೀಕರಣ ಘಟಕದಲ್ಲಿ, ಕಾನೂನು ಸೇವಾ ಸಮಿತಿ, ವಕೀಲರ ಸಂಘ,  ನಗರಸಭೆ, ಹಾಗೂ ಕ್ವಿಮಿಪ್ ಜಲಸಿರಿ ಆಯೋಜಿಸಿದ್ದ ವಿಶ್ವ ಜಲ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.        ತಾವು ಗಮನಿಸಿದಂತೆ, ತಾಲೂಕಿನ ಕೆಲವು ಗ್ರಾಮೀಣ ಪ್ರದೇಶಗಳು ಹೊರತುಪಡಿಸಿ  ನಗರ ಮತ್ತು ತಾಲೂಕಿನಲ್ಲಿ ನೀರಿನ ಅಭಾವ ಇರುವುದು ಕಂಡುಬಂದಿಲ್ಲ, ಇಲ್ಲಿನ ಜನರು ತುಂಬಾ ಅದೃಷ್ಟವಂತರಾಗಿದ್ದಾರೆ, ಎಂದರು. ಇಲ್ಲಿನ  ನಗರಸಭೆ ಸಿಬ್ಬಂದಿಗಳು ತುಂಬಾ ಅಚ್ಚುಕಟ್ಟಾಗಿ ತಮ್ಮ ಕಾರ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ನೆರವೇರಿಸುತ್ತಿರುವುದು ನಾಗರಿಕರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎಂದರು.     

    ತಾವು  ಇಲ್ಲಿನ ಇತಿಹಾಸ ತಿಳಿದಂತೆ, ದೊಡ್ಡಕೆರೆ ಸಂಪೂರ್ಣ ಬರ್ತೀಯಾದರೇ, ಕೊಳವೆ ಬಾವಿಗಳು ತುಂಬಿ ತುಳುಕುತ್ತಲ್ಲಿವೆ. ಎಂದಿಗೂ ಜಲಕ್ಷಾಮ ಎದುರಿಸಿಲ್ಲ ಎನ್ನುವುದನ್ನು ತಿಳಿದುಕೊಂಡಿದ್ದೇನೆ ಎಂದ ಅವರು, ನೀರು ಅಮೂಲ್ಯ, ಸಮಗ್ರವಾಗಿ ಪೂರೈಸುವ ಕರ್ತವ್ಯ ನಗರಸಭೆಗೆ ಇದೆ.  ಕೆರೆ ಬತ್ತದಂತೆ ನೋಡಿಕೊಳ್ಳುವ ಹೊಣೆ  ನಗರಸಭೆ ಆಯುಕ್ತರು, ಮತ್ತು ಆಡಳಿತ  ಮತ್ತಷ್ಟು ಕ್ರಮ ವಹಿಸಲು ಮುಂದಾಗಬೇಕು ಎಂದರು.   ಸಮಾರಂಭಕ್ಕೂ ಮುನ್ನ ಜಲಸುದ್ದೀಕರಣ ಘಟಕದಲ್ಲಿ ನಿತ್ಯ ನಡೆಯುವ ನೀರು ಸರಬರಾಜು ಪ್ರಕ್ರಿಯೆ  ಮತ್ತು ಶುದ್ಧತೆ ಕುರಿತು ಪರೀಶೀಲಿಸಿ ನ್ಯಾಯಾಧೀಶರು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.   ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರಸಭೆ ಅಧ್ಯಕ್ಷ   ಚಂಪಕ ರಮೇಶ್ ಬಿಸಲಹಳ್ಳಿ ಅವರು, ಬೇಸಿಗೆ ಕಾಲವು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ, ಕ್ರಮ ಕೈಗೊಳ್ಳಲಾಗಿದೆ, ಆದರೂ ನಾಗರಿಕರು ಅನಾವಶ್ಯಕವಾಗಿ ನೀರು ಪೋಲಾಗದಂತೆ ಕ್ರಮ ವಹಿಸಬೇಕು ಎಂದು ಕರೆ ನೀಡಿದರು.     

  ವಕೀಲರ ಸಂಘದ ಅಧ್ಯಕ್ಷ ಬಿ.ಹೆಚ್‌. ಬುರಡಿಕಟ್ಟಿ ಅವರು, ಇಂದು ಶುದ್ಧವಾದ  ನೀರು ಒದಗಿಸುವಲ್ಲಿ ಇಲ್ಲಿನ ಪ್ರತಿ ಹಂತದ ಕಾರ್ಮಿಕರು ಮುಖ್ಯವಾಗಿದ್ದಾರೆ. ಆರೋಗ್ಯ ರಕ್ಷಣೆಗೆ ಶುದ್ದ ನೀರು ಅಗತ್ಯ ಈ ನಿಟ್ಟಿನಲ್ಲಿ ನಗರಸಭೆ ಅತ್ಯಂತ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ  ಎಂದರು.   ಕಾನೂನು ಮತ್ತು ಕಾರ್ಮಿಕರು ಅನುಸರಿಸಬೇಕಾದ ಕ್ರಮಗಳು ಕುರಿತು ನ್ಯಾಯವಾದಿ ಎಚ್‌.ಎಸ್‌. ಸಿದ್ದಪ್ಪನವರ್‌. ಮತ್ತು ನೋಟರಿ ಕುಮಾರ ಮಡಿವಾಳರ ಅವರು ವಿಶೇಷ ಉಪನ್ಯಾಸ ನೀಡಿದರು. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ನಗರಸಭೆ ಪೌರಾಯುಕ್ತ, ಎಫ್‌. ಹೆಚ್‌.ಇಂಗಳಗಿ  ಅವರು, ಸದ್ದೇ ನೀರಿನ ಸಮಸ್ಯೆ ಇಲ್ಲ. ನಾಗರಿಕರಿಗೆ  ಯಾವುದೇ  ತೊಂದರೆಯಾಗದ ರೀತಿಯಲ್ಲಿ ಮುಂಜಾಗ್ರತ ಕ್ರಮ ವಹಿಸಲಾಗಿದೆ. ಬೇಸಿಗೆಯನ್ನು, ನಾಗರೀಕರ ಬಹುಮೆಚ್ಚುಗೆಯ ರೀತಿಯಲ್ಲಿ ಎದುರಿಸುವ ಆತ್ಮವಿಶ್ವಾಸ ಆಡಳಿತಕ್ಕಿದೆ ಎಂದು ಸಾಧ್ಯಂತವಾಗಿ ವಿವರಿಸಿದರು. ವಕೀಲರ ಸಂಘದ ಉಪಾಧ್ಯಕ್ಷ ಹೆಚ್‌. ಹೆಚ್‌. ತಿಮ್ಮೇನಹಳ್ಳಿ, ಕಾರ್ಯದರ್ಶಿ ಸುರೇಶ ದ್ಯಾವಕ್ಕಳವರ, ಸೇರಿದಂತೆ ಜಲ ಶುದ್ದಿಕರಣ ಘಟಕದ ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು. ನಾಗರತ್ನಮ್ಮ ಪ್ರಾರ್ಥಿಸಿದರು. ನಗರಸಭೆಯ ಸಿಬ್ಬಂದಿ ಮಾರುತಿ ಪಾಟೀಲ, ನಿರೂಪಿಸಿ ವಂದಿಸಿದರು.