ಬಳ್ಳಾರಿ,ಜೂ.01: ತಂಬಾಕು ಸೇವನೆಯಿಂದ ಮಾನವನ ದೇಹಕ್ಕೆ ಬಹಳ ಹಾನಿ ಉಂಟಾಗುತ್ತದೆ. ನಮ್ಮ ದೇಶದಲ್ಲಿ ಯುವಕರು ಸಿಗರೇಟ್, ಬೀಡಿ, ತಂಬಾಕು, ಗುಟ್ಕಾ ಮತ್ತು ಅನೇಕ ವಿಷಕಾರಿ ಪದಾರ್ಥಗಳನ್ನು ಸೇವನೆ ಮಾಡುತ್ತಿದ್ದು, ಇದರ ದುಷ್ಪರಿಣಾಮ ಯಾವ ಪ್ರಮಾಣದಲ್ಲಾಗಲಿದೆ ಎಂಬುದರ ಕುರಿತು ಯುವಕರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಆರೋಗ್ಯ ಉಪಸಮಿತಿಯ ಸಭಾಪತಿಯಾದ ಡಾ.ನಾಗರಾಜ್ ರಾವ್ ಅವರು ಹೇಳಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಕನರ್ಾಟಕ ಫಂಕ್ಷನ್ ಹಾಲ್ನಲ್ಲಿರುವ ಮಧ್ಯಪ್ರದೇಶ ವಲಸಿಗರಿಗೆ ಭಾನುವಾರದಂದು ಆಯೋಜಿಸಿದ ವಿಶ್ವ ತಂಬಾಕು ಮುಕ್ತ ದಿನಾಚರಣೆ ವಿಶೇಷ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದಶರ್ಿಯಾದ ಎಂ.ಎ.ಷಕೀಬ್ ಅವರು ಅಧ್ಯಕ್ಷತೆ ವಹಿಸಿ ನಮ್ಮ ದೇಶದ ಜನರಿಗೆ ವಿಷ ಪದಾರ್ಥಗಳ ಬಗ್ಗೆ ಅರಿವು ಬಹಳ ಕಡಿಮೆ. ತಂಬಾಕುವಿನಿಂದ ಉಂಟಾಗುವ ಬಾಯಿ ಮತ್ತು ಗಂಟಲು ಕ್ಯಾನ್ಸರ್ಗಳಿಂದ ಸಾವಿರಾರು ಜನ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದರು.
ಬೀಡಿ, ಸಿಗರೇಟ್, ಗುಟ್ಕಾ ಹಾಗೂ ತಂಬಾಕುಗಳನ್ನು ಇತ್ಯಾದಿ ವಿಷ ಸೇವನೆ ಪದಾರ್ಥಗಳನ್ನು ಈ ಸಂದರ್ಭದಲ್ಲಿ ಸುಟ್ಟು ಹಾಕಲಾಯಿತು.
ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರಾದ ಉಮಾ ಮಹೇಶ್ವರಿ, ಎಜಾಜ್ ಅಹಮದ್ ಹಾಗೂ ವಲಸೆ ಕಾಮರ್ಿಕರು ಸೇರಿದಂತೆ ಇತರರು ಇದ್ದರು.