ವಿಶ್ವ ವಿಶೇಷ ಚೇತನರ ದಿನಾಚರಣೆ

World Special Spirits Day

ವಿಶ್ವ ವಿಶೇಷ ಚೇತನರ ದಿನಾಚರಣೆ  

ಹೊಸಪೇಟೆ  12: ಹೊಸಪೇಟೆ ಸ್ಟೇಷನ್ ರಸ್ತೆಯಲ್ಲಿ ರೋಟರಿ ಕ್ಲಬ್ ಸಭಾಂಗಣದಲ್ಲಿ  ರೋಟರಿ ಕ್ಲಬ್ ಹೊಸಪೇಟೆ ಹೊಸಪೇಟೆ ನಗರ ಹಾಗೂ ಗ್ರಾಮೀಣ ಘಟಕದ ವಿಶೇಷ ಚೇತನರ ಸಂಘ ಮತ್ತು ಮಯೂರಿ ಮಹಿಳಾ ವಿಶೇಷ ಚೇತನರ ಸಂಘ ಹೊಸಪೇಟೆ ಇವರ ಸಂಯುಕ್ತಶ್ರಯದಲ್ಲಿ ವಿಶ್ವ ವಿಶೇಷ ಚೇತನರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.  ಕಾರ್ಯಕ್ರಮವನ್ನು ವೇದಿಕೆ ಮೇಲಿನ ಗಣ್ಯಮಾನ್ಯರು ಜ್ಯೋತಿ ಬೆಳಗುಸುವುದರ ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಹೆಚ್ ಏನ್  ಮಹಮ್ಮದ್  ಇಮಾಮ್ ನಿಯಾಜಿ ರವರು ಈ ಒಂದು ವಿಶ್ವ ವಿಶೇಷ ಚೇತನರ ದಿನಾಚರಣೆಯ ಸಮಾರಂಭದಲ್ಲಿ ಪಾಲ್ಗೊಂಡಿರುವುದು ನನ್ನ ಸೌಭಾಗ್ಯವೆಂದರು ಹಾಗೂ ಯಾವುದೇ ಕಾರಣಕ್ಕೂ ವಿಶೇಷ ಚೇತನರು ಕೀಳರಿಮಗೆ ಒಳಗಾಗಬಾರದು. ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆದು ಸಮಾಜದಲ್ಲಿ ಗೌರವದಿಂದ ಬಾಳಬೇಕು. ಹಾಗೂ ಈ ಒಂದು ಕಾರ್ಯಕ್ರಮವನ್ನು ಆಯೋಜಿಸಲು  ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿರುವ ಎಲ್ಲರಿಗೂ ವೈಯಕ್ತಿಕವಾಗಿ ಅಭಿನಂದನೆಗಳನ್ನು ತಿಳಿಸುತ್ತೇನೆಂದರು. ಇಂದಿಗೂ ಹಲವರು ಅಂಗವೈಕಲ್ಯ ಸಮಸ್ಯೆಯಿಂದ ಬಳಲುತ್ತಿರುವವರನ್ನು ಕೀಳಾಗಿ ನೋಡುವುದುಂಟು. ಇಂತಹ ಘಟನೆಗಳು ವಿಶೇಷಚೇತನರ ಆತ್ಮವಿಶ್ವಾಸವನ್ನು ಕುಗ್ಗಿಸುವುದಲ್ಲದೇ, ಅವರಲ್ಲಿ ನಮ್ಮಿಂದ ಏನು ಸಾಧಿಸಲು ಸಾಧ್ಯವಿಲ್ಲ ಎಂಬ ಭಾವನೆ ಬರುವಂತೆ ಮಾಡುತ್ತದೆ. ಈ ನಿಟ್ಟಿನಲ್ಲಿ ಈ ಸಮಾಜದಲ್ಲಿ ಸಾಮಾನ್ಯ ಜನರಂತೆ ವಿಶೇಷ ಚೇತನರಿಗೂ ಹೆಮ್ಮೆಯಿಂದ ಜೀವನ ನಡೆಸಲು ಅವಕಾಶವನ್ನು ನೀಡಬೇಕು, ಪ್ರತಿಯೊಂದು ಕ್ಷೇತ್ರದಲ್ಲೂ ಅವರಿಗೂ ಸಮಾನ ಅವಕಾಶವನ್ನು ನೀಡಬೇಕು ಮತ್ತು ವಿಶೇಷ ಚೇತನರಿಗೆ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸಬೇಕು ಎನ್ನುವ ಸಲುವಾಗಿ  ಪ್ರತಿವರ್ಷ ಡಿಸೆಂಬರ್ 03 ರಂದು ಅಂತರಾಷ್ಟ್ರೀಯ ವಿಶೇಷ ಚೇತನರ ದಿನವನ್ನು ಆಚರಿಸಲಾಗುತ್ತದೆ ಎಂದರು. 

ಮುಂದಿನ ದಿನಗಳಲ್ಲಿ ವಿಶೇಷ ಚೇತನರಿಗೆ ಇರುವ ಸೌಲಭ್ಯಗಳು ನಮ್ಮ ರಾಜ್ಯದಲ್ಲಿ  ಅತಿ ಕಡಿಮೆ ಇದ್ದು ಅವುಗಳನ್ನು ಹೆಚ್ಚಿಸುವ ಯಾವುದೇ ಹೋರಾಟಗಳಿಗೆ ನಾನು ನಿಮ್ಮೊಂದಿಗೆ ಸದಾ ಇರುತ್ತೇನೆಂದು ಭರವಸೆ ನೀಡಿದರು.                              

ಈ ಒಂದು ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷರಾದ ಶ್ರೀ ಎನ್ ರೂಪೇಶ್ ಕುಮಾರ್ ಹಾಗೂ ಹೊಸಪೇಟೆ ರೋಟರಿ ಕ್ಲಬ್ ನ ಅಧ್ಯಕ್ಷರಾದ ಶ್ರೀ ದೀಪಕ್ ಕೊಳಗದ್, ನಗರಸಭೆ ಉಪಾಧ್ಯಕ್ಷರಾದ ಜೆ.ಎಸ್ ರಮೇಶ್ ಗುಪ್ತ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಕಿರಣ್ ಶಂಕರಿ, ಜಿಲ್ಲಾ ವಿಶೇಷ ಚೇತನರ ಕಲ್ಯಾಣ ಅಧಿಕಾರಿಗಳಾದ ಅವಿನಾಶ ಲಿಂಗ ಎಸ್ ಗೊಟಾಕಿಂಡಿ, ಹುಲಿಗೆಮ್ಮ ವೆಂಕಟೇಶ್, ಇನ್ನೂ ನೂರಾರು ವಿಶೇಷ ಚೇತನರು ಪಾಲಕರು ಪೋಷಕರು ಉಪಸ್ಥಿತರಿದ್ದರು.