ಲೋಕದರ್ಶನ ವರದಿ
ಹೂವಿನಹಡಗಲಿ06: ಸ್ಥಳೀಯ ಆತ್ಮ ಯೋಜನೆಯಡಿಯಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಹಡಗಲಿ ಕೇಂದ್ರದಲ್ಲಿ "ವಿಶ್ವ ಮಣ್ಣು ಆರೋಗ್ಯ ದಿನಾಚಾರಣೆ" ಯನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರೇಹಡಗಲಿಯ ಸಂಸ್ಥಾನ ಮಠದ ಸ್ವಾಮೀಜಿಯವರಾದ ಸಣ್ಣ ಹಾಲಸ್ವಾಮೀಜಿ ಯವರು ವಹಿಸಿದ್ದು, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಒಂದೇ ಕ್ರಮದಲ್ಲಿ ಬೆಳೆಗಳನ್ನು ಬೆಳೆಯದೇ ಬದಲೀ ಬೆಳೆಗಳನ್ನು ಬದಲಿಸಿ ಬೆಳೆಯ ಬೇಕು. ಜೊತೆಗೆ ರಾಸಾಯನಿಕಗಳನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ಉಪಯೋಗಿಸುವುದರಿಂದ, ಸಾವಯವ ಕ್ರಮ ಉಪಯೋಗಿಸುವುದರಿಂದ ಹಾಗೂ ಸಿರಿಧಾನ್ಯಗಳನ್ನು ಬೆಳೆಯುವುದರಿಂದ ಮಣ್ಣಿನ ಗುಣಮಟ್ಟವನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸುವುದರ ಜೊತೆಗೆ ಎಲ್ಲಾ ರೈತಬಾಂಧವರಿಗೂ ಆಶರ್ೀವಚನ ನೀಡಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಕೃಷಿ ಇಲಾಖೆಯ ಸಹಾಯಕ ಕೃಷಿ ನಿದರ್ೇಶಕರಾದ ಬಿ. ನೀಲಾನಾಯ್ಕ ರವರು ಕೃಷಿಯಲ್ಲಿ ಮಣ್ಣು ಅತೀ ಪ್ರಮುಖವಾದ ಅಂಗವಾಗಿದ್ದು, ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಮುಖ್ಯ. ಭೂಮಿತಾಯಿಯ ಆರೋಗ್ಯವನ್ನು ಕಾಪಾಡಬೇಕು. ಅಂದರೆ, ಸರಿಯಾದ ಸಮಯದಲ್ಲಿ ಮಣ್ಣು ಪರೀಕ್ಷೆ ಮಾಡಿಸಿ, ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ಕೊಡಬೇಕು. ಆದ್ದರಿಂದ, ಭೂಮಿತಾಯಿಯ ಆರೋಗ್ಯ ಕಾಪಾಡುವುದು ಮುಖ್ಯ ಎಂದರು.
ಕೃಷಿಕ ಸಂಘದ ಅಧ್ಯಕ್ಷರಾದ ಪಿ. ವಿ. ಬಸವರಾಜ ರವರು, ತಮ್ಮ ಉದ್ಘಾಟನಾ ಭಾಷಣದಲ್ಲಿ ಕಾಲ ಕಾಲಕ್ಕೆ ಮಣ್ಣಿನ ಪರೀಕ್ಷೆ ಮಾಡಿಸಿ ಅಗತ್ಯಕ್ಕೆ ತಕ್ಕಷ್ಟು ಮಾತ್ರ ಗೊಬ್ಬರ ಹಾಗೂ ಔಷಧಿಗಳನ್ನು ನೀಡುವುದರ ಜೊತೆಗೆ ಸಾವಯವ ಗೊಬ್ಬರಗಳನ್ನು ಹೆಚ್ಚು ಹೆಚ್ಚಾಗಿ ಬಳಸಿ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಕರೆಯಿತ್ತರು.
ಕಾರ್ಯಕ್ರಮದದಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಹಡಗಲಿಯ ವಿಸ್ತರಣಾ ಮುಖ್ಯಸ್ಥರಾದ ಹನುಮಂತಪ್ಪ ಶ್ರೀಹರಿರವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಗಣ್ಯರಿಗೂ ಸ್ವಾಗತ ಕೋರುವುದರ ಜೊತೆಗೆ ಮಣ್ಣು ಪರೀಕ್ಷೆ ಮಾಡುವ ಕುರಿತು ವಿವರವಾದ ಮಾಹಿತಿ ನೀಡಿದರು.
ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಿಗೆಯಾಗುತ್ತಿದೆ. ಇದರಿಂದ ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಆದ್ದರಿಂದ, ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳೆಸುವುದರಿಂದ ವಾತಾವರಣ ಮತ್ತು ಮಣ್ಣಿನ ಮೇಲೆ ಉತ್ತಮ ಪರಿಣಾಮ ಉಂಟಾಗುತ್ತದೆ. ಅಲ್ಲದೇ ರಾಸಾಯನಿಕಗಳನ್ನು ಕಡಿಮೆ ಬಳಸಿ ಕೃಷಿ ಮಾಡಬೇಕೆಂದು ರೈತರನ್ನು ಉದ್ದೇಶಿಸಿ ಹಿತವಚನ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಉತ್ತಂಗಿಯ ಪ್ರಗತಿಪರ ರೈತರಾದ ಜಿ. ಸೋಮಶೇಖರ್ ರವರು ಮಾತನಾಡುತ್ತಾ ಪ್ರಪಂಚದಲ್ಲಿ ಶೇ.75 ಭಾಗ ನೀರಿನಿಂದ ಆವರಿಸಿದ್ದು, ಇನ್ನುಳಿದ ಶೇ.25 ಭಾಗದಲ್ಲಿ ಗುಡ್ಡ, ಬೆಟ್ಟ, ಪರ್ವತ, ಮರುಭೂಮಿ, ನಗರಗಳು, ಪಟ್ಟಣಗಳು, ಹಳ್ಳಿಗಳು, ರಸ್ತೆ ಮುಂತಾದವುಗಳಿಂದ ಕೂಡಿದ್ದು, ಕೃಷಿಗೆ ಯೋಗ್ಯವಾದ ಭೂಮಿ ಅತೀ ಕಡಿಮೆಯಿದ್ದು, ಇರುವ ಭೂಮಿಯಲ್ಲೇ ನಾವು ಇಡೀ ದೇಶದ ಜನರಿಗೆ ಬೇಕಾಗುವಷ್ಟು ಆಹಾರವನ್ನು ಉತ್ಪಾದಿಸಬೇಕಾಗಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಸಿ.ಕೆ. ಕರೇಗೌಡ್ರು ಪ್ರಾರ್ಥನೆಯನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷರಾದ ಎ. ಮಂಜುನಾಥ, ಕೇಂದ್ರದ ಸಸ್ಯ ಶರೀರ ತಜ್ಞರಾದ ಚಂದ್ರನಾಯ್ಕ್ ಎಂ., ಕೃಷಿ ಇಲಾಖೆಯ ಕೃಷಿ ಅಧಿಕಾರಿಯಾದ ಶಿವಮೂತರ್ಿ ನಾಯಕ್ ಆರ್., ಸಹಾಯಕ ಕೃಷಿ ಅಧಿಕಾರಿಗಳಾದ ಯು. ರಾಜಶೇಖರ್ ಎಂ. ತವನಪ್ಪ, ಎ.ಹೆಚ್. ಮೋಮಿನ್ ಹಾಗೂ ಹೊಳಲು ಗ್ರಾಮದ ಪ್ರಗತಿಪರ ರೈತರಾದ ಹನುಮಂತಪ್ಪ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಿರೇಹಡಗಲಿ, ತಿಪ್ಪಾಪುರ, ಹನಕನಹಳ್ಳಿ, ನಾಗತಿಬಸಾಪುರ, ಹೊಳಗುಂದಿ, ಉತ್ತಂಗಿ, ಹೊಳಲು ಹಾಗೂ ಹಡಗಲಿ ಸುತ್ತಮುತ್ತಲಿನ ಗ್ರಾಮಗಳ ಎಂಬತ್ತಕ್ಕಿಂತಲೂ ಹೆಚ್ಚಿನ ರೈತರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.