ಕೆಎಲ್ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆ

ಲೋಕದರ್ಶನವರದಿ

ಬೆಳಗಾವಿ, 17: 24 ಘಂಟೆಗಳ ಕಾಲ ರೋಗಿಯೊಂದಿಗೆ ಇದ್ದು, ರೋಗಿಯನ್ನು ಗುಣಪಡಿಸುವಲ್ಲಿ ಶುಸ್ರುಷಕಿಯರ ಸೇವೆ ಶಾಂಘ್ಲನೀಯ ಎಂದು ಕಾರ್ಯಕ್ರಮಕ್ಕೆ ಮುಖ್ಯ ಅಥಿಗಳಾಗಿ ಆಗಮಿಸಿದ ಕೆ.ಎಲ್ ಇ ಯ ನಸರ್ಿಂಗ ಕಾಲೇಜಿನ ಉಪಪ್ರಾಶುಂಪಾಲರಾದ ಶ್ರೀಮತಿ. ಸುಮಿತ್ರಾ ಎಲ್.ಎ ಅಭಿನಂದಿಸಿದರು. ಅವರು ಇಂದು ಕೆಎಲ್.ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆಯಲ್ಲಿ ನಡೆದ ಶೂಸ್ರುಷಕಿಯರ ದಿನಾಚರಣೆಯ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡುತ್ತಿದ್ದರು. ಅನಾರೋಗ್ಯಹೊಂದಿದ ವ್ಯಕ್ತಿಯನ್ನು ಆರೋಗ್ಯವಂತನಾಗಿ ಮಾಡಿ  ಸಂತಸದ ಜೀವನ ನಡೆಸುವಂತೆ ಮಾಡುವಲ್ಲಿ ದಾದಿಯ ಪಾತ್ರವು ಮುಖ್ಯವಾದುದು ಹಾಗೂ ನಿಮ್ಮ ಸೇವೆ ಮಹತ್ವವಾದದ್ದು, ಅದನ್ನು ನಿಷ್ಟೆ ಮತ್ತು ಪ್ರಾಮಾಣಿಕತೆಯಿಂದ ಮಾಡಿದರೆ ನಿಮ್ಮ ವೃತ್ತಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಎಂದು ಕಿವಿ ಮಾತು ಹೇಳಿದರು. 

ಕಾರ್ಯಕ್ರಮದ ಅಥಿತಿ ಸ್ಥಾನವನ್ನು ವಹಿಸಿದ ಆಸ್ಪತ್ರೆಯ ವೈದ್ಯಕೀಯ ಸೇವೆಗಳ ನಿದರ್ೇಶಕ ಡಾ. ಎಸ್ ಸಿ ಧಾರವಾಡ ಮಾತನಾಡುತ್ತ ವೈದ್ಯರ ನುಡಿಯಂತೆ ಸೇವೆಸಲ್ಲಿಸುತ್ತಾ ರೋಗಿಗಳ ಜೊತೆಗೆ ಅತಿಯಾದ ಒಡನಾಟದಲ್ಲಿದ್ದು,  ವೈಯಕ್ತಿಕ ಸುಖಸಂತೋಷಗಳನ್ನು ಕಡೆಗಣಿಸಿ ಹಗಲಿರುಳೆನ್ನದೇ ಸದಾ ನಗುಮೊಗದಿಂದ ಸೇವೆ ಮಾಡುವ ದಾದಿಯರೇ ನಿಮಗೊಂದು ನಮನ. ನಿಮ್ಮ ನಲುಮೆಯ ನಗುವು ರೋಗಿಗಳ ನೋವನ್ನು ಮರೆಸುವದಲ್ಲದೆ ಅವರು ಬೇಗಗುಣಮುಖರಾಗುವಲ್ಲಿ ನಿಮ್ಮ ಪಾತ್ರ ಮಹತ್ವವಾದುದು. ಆದುದರಿಂದ ಯಾವುದೇ ತೆರನಾದ ರೋಗಿಗಳು ಬಂದರೂ ಬೇಸರಿಸಿಕೊಳ್ಳದೇ ಸೇವೆ ನೀಡಿ. ಶುಶ್ರೂಷಕಿಯರ ಸೇವೆಯು ಆಸ್ಪತ್ರೆಯ ಬೆನ್ನುಲುಬು ಆಗಿದ್ದು ನಿಮ್ಮ ನಿಶ್ಕಾಮ ಸೇವೆಯು ಆಸ್ಪತ್ರೆಯ ಹೆಸರನ್ನು ಉತ್ತುಂಗಕ್ಕೆರಿಸುತ್ತದೆ ಎಂದು ಹೇಳಿದರು.  

ಕಾರ್ಯಕ್ರಮದ ಅದ್ಯಕ್ಷ ಸ್ಥಾನವನ್ನು ವಹಿಸಿದ ಯು.ಎಸ್.ಎಂ  ಕೆ.ಎಲ್.ಇಯ ನಿದರ್ೇಶಕರಾದ ಡಾ.ಎಚ್.ಬಿ ರಾಜಶೇಖರ ಅವರು ಒಂದು ಆಸ್ಪತ್ರೆಯ ರೋಗಿಗಳು ಗುಣಮುಖರಾಗುವಲ್ಲಿ ದಾದಿಯರ ಸೇವೆಯು ನಗಣ್ಯ. ನಿಮ್ಮ ಈ ನಿಸ್ವಾತ್ರ ಸೇವೆಯಿಂದ ಆ ಆಸ್ಪತ್ರೆಗೂ ಒಳ್ಳೆಯ ಹೆಸರು ಹಾಗೂ ವೈದ್ಯಕೀಯ ರಂಗದಲ್ಲಿ ನಿಮಗೆ ಸಿಗುವ ಮನ್ನಣೆಯು ಶ್ರೇಷ್ಟವಾದುದು. ಕೇವಲ ವೈದ್ಯಕೀಯ ಪರಿಮಿತಿಯು ಬರಿ ಸೇವೆಗಷ್ಟೆ ಸೀಮಿತವಾಗದೇ ರೋಗಿಗಳಿಗೆ ಸಾಂತ್ವನ ಹೇಳುವದು, ಸಾಮೂಹಿಕ ಕಾರ್ಯನಿರ್ವಹಣೆ ಹಾಗೂ ಮೃದುಭಾಷೆಯ ಬಳಕೆಯಿಂದ ರೋಗಿಗಳು ಬೇಗ ಗುಣಮುಖರಾಗುತ್ತಾರೆ ಎಂದು ಕಿವಿಮಾತು ಹೇಳಿದರು.

ಈ ದಿನದಂದು ರೋಗಿಗಳಿಗೆ ಹಣ್ಣು ವಿತರಣೆ ಮಾಡುವ ಮೂಲಕ ವಿಜೃಂಬನೆಯಿಂದ ದಾದಿಯರ ದಿನಾಚರಣೆಯನ್ನು ಆಚರಿಸಿದರು. ಕಾರ್ಯಕ್ರಮದಲ್ಲಿ  ಕೆ ಎಲ್ ಇ ಯ ಹೊಮಿಯೊಪಥಿಯ ಕಾಲೇಜಿನ ಪ್ರಾಶುಂಪಾಲರಾದ ಡಾ. ಎಮ್ ಎ ಉಡಚಣಕರ, ಕೆ ಎಲ್ ಇ ಇನಸ್ಟಿಟುಟ್ ಆಪ್ ನಸರ್ಿಂಗ ಕಾಲೇಜಿನ ಪ್ರಾಶುಂಪಾಲರಾದ ವಿಕ್ರಾಂತ ನೇಸರಿ, ಹಿರಿಯ ವ್ಯದ್ಯ ಡಾ. ಬಿ ಎಸ್ ಮಹಾಂತಶೆಟಿ ್ಟ, ಆಸ್ಪತ್ರೆಯ ದಾದಿಯರು , ಜೆ.ಎನ್.ಎಂ ವಿಧ್ಯಾಥರ್ಿಗಳು, ಹೊಮ್ ನಸರ್ಿಂಗ್ ಕೊಸರ್ಿನ ವಿದ್ಯಾಥರ್ಿಗಳು ಇನ್ನುಳಿದ ಆಸ್ಪತ್ರೆಯ ಸಿಬ್ಬಂದಿ ವರ್ಗದವರು  ಉಪಸ್ಥಿತರಿದ್ದರು. 

  ಕಾರ್ಯಕ್ರಮವನ್ನು  ಕುಮಾರಿ. ಶ್ವೇತಾ ಅವರು ನಿರೂಪಿಸಿದರು. ಜಿ.ಎನ್.ಎಂ ಕಾಲೇಜಿನ ಪ್ರಾಶುಂಪಾಲರಾದವಿಕ್ರಾಂತ ನೇಸರಿ ಸ್ವಾಗತಿಸಿದರು, ಇಂದುಮತಿ ವಾಘಮಾರೆ  ವಂದಿಸಿದರು.