ಬಳ್ಳಾರಿ,ಜೂ 01: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಕೆ.ಎಂ.ಎಫ್ ಇವರ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಸೋಮವಾರ ವಿಶ್ವ ಹಾಲಿನ ದಿನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ಆಶಾ ಕಾರ್ಯಕರ್ತರು, ಆರೋಗ್ಯ ಸಿಬ್ಬಂದಿಗಳು, ವಿಮ್ಸ್ನಲ್ಲಿ ಇರುವ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಹಾಗೂ ತಾಲೂಕಿನ ಸುಮಾರು 7 ಆರೋಗ್ಯ ಕೇಂದ್ರದಲ್ಲಿ ಇರುವ ಸಿಬ್ಬಂದಿಗಳಿಗೆ ಉಚಿತವಾಗಿ ಗುಣಮಟ್ಟದ ಹಾಲನ್ನು ವಿತರಿಸಲಾಯಿತು.
ಡಿಎಚ್ಒ ಡಾ.ಜನಾರ್ಧನ್ ಅವರು ಹಾಲನ್ನು ವಿತರಿಸಿ ಹಾಲಿನ ಮಹತ್ವದ ಬಗ್ಗೆ ವಿವರಿಸಿದರು.
ರೆಡ್ಕ್ರಾಸ್ ಕಾರ್ಯದಶರ್ಿ ಎಂ.ಎ.ಶಕೀಬ್, ಕೆಎಂಎಫ್ ವ್ಯವಸ್ಥಾಪಕ ನಿದರ್ೇಶಕ ಡಾ.ಮಲ್ಲಿಕಾಜರ್ುನ ಬುಕ್ಕಾ, ರೆಡ್ ಕ್ರಾಸ್ ಸಂಸ್ಥೆಯ ವಿಜಯ ಕುಮಾರ, ವೆಂಕಟೇಶಗೌಡ ಮತ್ತು ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಅಬ್ದುಲಾ, ರೆಡ್ಕ್ರಾಸ್ ಸ್ವಯಂಸೇವಕರಾದ ಶ್ವೇತಾ, ಸಮೀಮ್, ಮಹಾಂತೇಶ, ಮಂಜುನಾಥ, ಕೆ.ನರಸಿಂಹ ರೆಡ್ಡಿ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರು ಭಾಗವಹಿಸಿದ್ದರು.
ವಲ್ಡರ್್ ವಿಷನ್ ವತಿಯಿಂದ 2300 ಮಾಸ್ಕ್ ದೇಣಿಗೆ