ಜೀವನದ ಮೌಲ್ಯ ಎತ್ತಿ ಹಿಡಿದ ವಿಶ್ವಮಾನವ ಯೋಗಿ ವೇಮನ : ಎಸ್.ಆರ್.ಪಾಟೀಲ

ಬಾಗಲಕೋಟೆ19: ಜಾತಿ, ಮತ, ಪಂಥವೆನ್ನದೇ ಎಲ್ಲರೂ ಒಂದೇ ಎಂದು ಸಾರಿ, ಜೀವನದ ಮೌಲ್ಯವನ್ನು ಎತ್ತಿ ಹಿಡಿದ ವಿಶ್ವಮಾನವ, ಕವಿ ಮಹಾಯೋಗಿ ವೇಮನ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಹೇಳಿದರು.

ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವೇಮನರು ಜಾತಿ ವ್ಯವಸ್ಥೆ ಮೌಡ್ಯತೆ, ಅಂದಕಾರ ಹಾಗೂ ಸಂಪ್ರದಾಯವನ್ನು ಮೆಟ್ಟಿ ನಿಂತು ಜ್ಯಾತ್ಯಾತೀತ ಸಮಾಜವನ್ನು ನಿಮರ್ಿಸಿದವರು. ನಿಜ ಧರ್ಮದ ಬಗ್ಗೆ ತನ್ನ ಕಾವ್ಯದ ಮೂಲಕ ಬೆಳಕು ಚಲ್ಲಿದವರು ಎಂದರು.

ವೇಮನರು ತೆಲುಗಿನಲ್ಲಿ ಬರೆದ ಅನೇಕ ವಚನಗಳು ಬೇರೆ ಬೇರೆ ಬಾಷೆಗಳಲ್ಲದೇ ಕನ್ನಡಕ್ಕೂ ಭಾಷಾಂತಗೊಂಡಿವೆ. ಅವುಗಳು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿವೆ. ಅವರ ವಚನಗಳು ನೇರವಾಗಿ ಮಾನವನ ಅಂತರಂಗವನ್ನು ಶುದ್ದಗೊಳಿಸಲು ಮಾರ್ಗದರ್ಶನ ನೀಡುವಂತಹದ್ದಾಗಿವೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು, ಹಸಿದವರಿಗೆ ತುತ್ತು ಅನ್ನ ನೀಡುವುದೇ ನಿಜವಾದ ಧರ್ಮವೆಂದು ಸಾರಿದವರು. ನೋವುಗಳಿಗೆ ಉತ್ತರಿಸಲು ಎಲ್ಲ ಕಾಲ ಘಟ್ಟಕ್ಕೂ ಅನ್ವಯಿಸುವಂತೆ ವೇಮನರು ಕಾವ್ಯಗಳನ್ನು ಬರೆದಿದ್ದಾರೆ ಎಂದರು.

ಮೇವನರು ಸಾಹಿತ್ಯವನ್ನು ಪ್ರತಿಷ್ಠೆಗಾಗಿ ರಚಿಸಿದವರಲ್ಲ. ಸಮಾಜದಲ್ಲಿನ ಮೂಢನಂಬಿಕೆ ದೂರಮಾಡಲು, ಸಮಾಜದ ಒಳಿತಿಗಾಗಿ ಹಾಗೂ ಶ್ರೋಯೋಭಿಗಾಗಿ ರಚಿಸಿದ್ದಾರೆ. ಶಿಲೆಯಲ್ಲಿ ಶಿವನನ್ನು ಕಾಣುವಂತವರಿಗೆ ಶಿವ ನಮ್ಮಲ್ಲಿಯೇ ಇದ್ದಾನೆ, ನಿತ್ಯ ಬದುಕಿನಲ್ಲಿ ಇದ್ದಾನೆ ಎಂದು ಸಾರಿದವರು. ತಮ್ಮ ಸಮುದಾಯದವರು ಮೇಲೆ ಬರುವುದರ ಜೊತೆಗೆ ಇತರ ಸಮಾಜವನ್ನು ಮೇಲೆತ್ತುವ ಕಾರ್ಯವಾಗಬೇಕು ಎಂದರು. 

ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಬೀಳಗಿ ತಾಲೂಕಿನ ಗಲಗಲಿ ಗ್ರಾಮದ ನ್ಯೂ ಇಂಗ್ಲೀಷ ಹೈಸ್ಕೂಲಿನ ಸಹ ಶಿಕ್ಷಕಿ ಸರಳಾ ಸಿಂಗರೆಡ್ಡಿ ಮಾತನಾಡಿ ಭರತ ಭೂಮಿಯಲ್ಲಿ ಸಾಧು ಸಂತರು, ಸತ್ಪುರುಷರು, ಯೋಗಿಗಳು ಅವತರಿಸಿ ಸಾವಿವಾರು ವರ್ಷಗಳು ಗತಿಸಿದರು ಇಂದಿಗೂ ಚಿರಸ್ಮರಣೀಯರಾಗಿದ್ದಾರೆ. ಅಂತವರ ಸಾಲಿನಲ್ಲಿ ವೇಮನರು ಕವಿ, ಯೋಗಿಯಾಗಿ ಗುರುತಿಸಿಕೊಂಡಿದ್ದಾರೆ ಎಂದರು. ವೇನರು ಬರೆದ ಸಾಹಿತ್ಯವನ್ನು ಆಂಗ್ಲ ಭಾಷೆಗೆ ತಜರ್ುಮೆಗೊಂಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು. ರಾಜಮನೆತನದಲ್ಲಿ ಹುಟ್ಟಿದ ವೇಮನರು ಸಂಸಾರ ಬಿಟ್ಟು ತನ್ನ 33 ವಯಸ್ಸಿನಲ್ಲಿಯೇ ಯೋಗಿಯಾದವರು ಎಂದರು.

ಇದೇ ಸಂದರ್ಭದಲ್ಲಿ ಡಾ.ಸಿದ್ದಣ್ಣ ಬಾಡಗಿ ಅವರು ರಚಿಸಿರುವ ತ್ರಿಕಾಲಜ್ಞಾನಿ ಯೋಗಿ ವೇಮನ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಅಲ್ಲದೇ ಶಿರೂರಿನ ಮಲ್ಲಮ್ಮ ಗುಲಗಂಜಿ ಅವರು 5 ಎಕರೆ ಜಮೀನನ್ನು ಸಮಾಜಕ್ಕಾಗಿ ದಾನವಾಗಿ ನೀಡಿದ್ದರಿಂದ ಅವರ ಉದಾರತೆಯ ಮನೋಭಾವನೆಯನ್ನು ಕಂಡು ಸಮಾಜದ ವತಿಯಿಂದ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯತಿ ಅಧ್ಯಕ್ಷ ಚನ್ನನಗೌಡರ ಪರನಗೌಡರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿ.ಪಂ ಉಪಕಾರ್ಯದಶರ್ಿ ಎ.ಜಿ.ತೋಟದ, ಜಂಟಿ ಕೃಷಿ ನಿದರ್ೇಶಕಿ ಚೇತನಾ ಪಾಟೀಲ, ತಹಶೀಲ್ದಾರ ಗುರುಬಸಯ್ಯ ಹಿರೇಮಠ ಸೇರದಂತೆ ಸಮಾಜದ ಮುಖಂಡರಾದ ಎಸ್.ಪಿ.ಮಾಚಾ, ಸಿ.ಕೆ.ಒಂಟಗೋಡಿ, ಹಲಗಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕ ಬಸವರಾಜ ಶಿರೂರ ಸ್ವಾಗತಿಸಿದರು.

ವೇಮನರ ಭಾವಚಿತ್ರದ ಅದ್ದೂರಿ ಮೆರವಣಿಗೆ

ಕಾರ್ಯಕ್ರಮ ಪೂರ್ವದಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಮಹಾಯೋಗಿ ವೇಮನರ ಭಾವಚಿತ್ರಕ್ಕೆ ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಹಾಗೂ ಶಾಸಕ ವೀರಣ್ಣ ಚರಂತಿಮಠ ಅವರು ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ನವನಗರದ ಬಸ್ ನಿಲ್ದಾಣ, ಎಲ್.ಐ.ಸಿ ವೃತ್ತದ ಮಾರ್ಗವಾಗಿ ಅಂಬೇಡ್ಕರ ಭವನಕ್ಕೆ ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿದ್ದವರು. ಕುಂಬ ಹೊತ್ತ 150 ಮಹಿಳೆಯರು ಮೆರವಣಿಗೆಯ ಆಕರ್ಷಕ ಕೇಂದ್ರಬಿಂದು ಆಗಿದ್ದರು. ಅಲ್ಲದೇ ಶೃಂಗಾರಗೊಂಡ ಎತ್ತಿನ ಕೂರಿಗೆಯು ಎಲ್ಲರ ಗಮನ ಸೆಳೆಯಿತು.