ಲೋಕದರ್ಶನ ವರದಿ
ಬೆಳಗಾವಿ 11: "ವಿಶ್ವ ಮಾನವ ಹಕ್ಕುಗಳ ದಿನಾಚರಣೆ" ಅಂಗವಾಗಿ ನಗರಕೇಂದ್ರ ಗ್ರಂಥಾಲಯದ ಸಭಾಂಣನದಲ್ಲಿ ದಿ.10ರಂದು ಬೆಳಿಗ್ಗೆ 11-00 ಗಂಟೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಾರ್ವಜನಿಕ ಗ್ರಂಥಾಲಯ ಇಲಾಖೆ, ನಗರ/ಜಿಲ್ಲಾಕೇಂದ್ರ ಗ್ರಂಥಾಲಯ, ಬೆಳಗಾವಿ ಮತ್ತು ಚಾಕ್ಸ್ಲೇಟ್ ಪೌಂಡೇಶನ್ ಸಹಯೋಗದಲ್ಲಿ 'ಮಾನವ ಹಕ್ಕುಗಳು- ಮತ್ತು ಸಂವಿಧಾನ' ಕುರಿತು ಉಪನ್ಯಾಸವನ್ನು ಏರ್ಪಡಿಸಲಾಗಿತ್ತು.
ಮುಖ್ಯ ಅಥಿತಿಗಳಾಗಿ ಮತ್ತು ಉಪನ್ಯಾಸಕರಾಗಿ ಹಿರಿಯ ವಕೀಲರಾದ ಮತ್ತು ಬೆಳಗಾವಿ ಬಾರ್ ಅಸೊಸಿಯೇಶನ್ದ ಮುಖ್ಯ ಕಾರ್ಯದಶರ್ಿ ಆರ್.ಸಿ.ಪಾಟೀಲ ಅವರು ಆಗಮಿಸಿದ್ದರು. ಅವರು ತಮ್ಮ ಉಪನ್ಯಾಸದಲ್ಲಿ ಮಾನವ ಹಕ್ಕುಗಳ ದಿನಾಚರಣೆಯ ಉದ್ದೇಶ, ಮಹತ್ವ ಹಾಗೂ ಮಾನವ ಹಕ್ಕುಗಳ ರಕ್ಷಣೆ ಬಗ್ಗೆ ತಿಳುವಳಿಕೆ ನೀಡಿದರು. ಭಾರತೀಯ ಸಂವಿಧಾನವು ಪ್ರಜೆಗಳಿಗೆ ನೀಡಿರುವ ಹಕ್ಕುಗಳ ಬಗ್ಗೆ ಸವಿವರವಾಗಿ ಗ್ರಂಥಾಲಯದ ಓದುಗರಿಗೆ, ವಿದ್ಯಾಥರ್ಿಗಳಿಗೆ ಮತ್ತು ಸಿಬ್ಬಂದಿಗಳಿಗೆ ತಿಳಿಯಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪನಿದರ್ೇಶಕ ರಾಮಯ್ಯಅವರು ಭಾರತೀಯ ಸಂವಿಧಾನದ ಬಗ್ಗೆ ಮತ್ತು ಅದು ಕೊಡಮಾಡಿರುವ ಹಕ್ಕು, ಕರ್ತವ್ಯಗಳ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಂಡಿರಬೇಕು, ಸಂವಿಧಾನದತ್ತವಾಗಿ ಬರುವ ಮಾನವ ಹಕ್ಕುಗಳ ಬಗ್ಗೆ ಅರಿವು ಹೋಂದಿರಬೇಕು ಎಂದು ತಿಳಿಸಿದರು. ಅಂಬೇಕರ್ ಅವರು ಕಾರ್ಯಕ್ರಮ ನಿರ್ವಹಿಸಿದರು. ಪ್ರಕಾಶ ಇಚಲಕರಂಜಿ ಅಭಾರ ಮನ್ನಿಸಿದರು. ಈ ಕಾರ್ಯಕ್ರಮದಲ್ಲಿ ಅಧಿಕ್ಷಕಎ.ಎ ಕಾಂಬಳೆ, ಸಿಬ್ಬಂದಿಗಳಾದ ಸುಮೀತ್ ಕಾವಳೆ, ಶಶಿಕಲಾ ಸೀಮಿಮಠ, ಜೋಡಳ್ಳಿ, ಸುಜಾತಾ, ನೀಲಮ್ಮ ಪಟ್ಟೆದ್, ಕಾಂತರಾಜು, ಮೋಹನ ಮತ್ತು ನಗರ/ಜಿಲ್ಲಾಕೇಂದ್ರ ಗ್ರಂಥಾಲಯದ ಸಿಬ್ಬಂದಿ, ಸಾರ್ವಜನಿಕರು, ವಿದ್ಯಾಥರ್ಿಗಳು ಹಾಜರಿದ್ದರು.