ವಿಶ್ವ ಪರಿಸರ ದಿನಾಚರಣೆ

ಧಾರವಾಡ 06: ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ (ಡಿಮ್ಹಾನ್ಸ್) ಯಲ್ಲಿ ಜೂನ್ 5 ರಂದು "ವಿಶ್ವ ಪರಿಸರ ದಿನಾಚರಣೆ" ಯನ್ನು ಆಚರಿಸಲಾಯಿತು. ಈ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಡಿಮ್ಹಾನ್ಸ್ ಸಂಸ್ಥೆಯ ನ್ಯಾಯವೈದ್ಯಕೀಯ ವಾರ್ಡಗಳ ಹತ್ತಿರ, ಹಗಲು ಪಾಲನಾ ಕೇಂದ್ರದ ಹತ್ತಿರ, ಮತ್ತು ವಿವಿಧ ವಾರ್ಡಗಳ ಹತ್ತಿರ ಅಂದಾಜು 300 ಸಸಿಗಳನ್ನು ನೆಡಲಾಯಿತು. 

     ಡಿಮ್ಹಾನ್ಸ್ ಸಂಸ್ಥೆಯ ನಿದರ್ೇಶಕ ಡಾ.ಮಹೇಶ ದೇಸಾಯಿ ಮಾತನಾಡಿ, ಹೆಚ್ಚು ಹೆಚ್ಚು ಸಸಿಗಳನ್ನು ನೆಡುವುದರಿಂದ ಪರಿಸರವನ್ನು ಉಳಿಸಲು ಸಾಧ್ಯ ಹೀಗಾಗಿ, ಪ್ರತಿಯೊಬ್ಬರು ಸಾಧ್ಯವಾದಷ್ಟು ಸಸಿಗಳನ್ನು ನೆಟ್ಟು ಆರೈಕೆ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಲು ಮುಂದಾಗಬೇಕು ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಧಾರವಾಡದ ಅರಣ್ಯ ಇಲಾಖೆಯ ಅಧಿಕಾರಿಗಳಾದ ಸಿ.ಹೆಚ್. ಗುಜಮಾಗಡಿ, ಡಿಮ್ಹಾನ್ಸ್ ಸಂಸ್ಥೆಯ ಮನೋರೋಗ ವಿಭಾಗದ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರಾದ ಡಾ.ರಾಮಪ್ರಸಾದ್, ಸಹಪ್ರಾಧ್ಯಾಕರಾದ ಡಾ.ರಂಗನಾಥ ಕುಲಕಣರ್ಿ, ಡಾ.ರಾಘವೇಂದ್ರ ನಾಯಕ್, ಮನೋವೈದ್ಯರಾದ ಡಾ.ತೇಜಸ್ವಿ ಟಿ.ಪಿ, ವೈಜ್ಞಾನಿಕ ಮನ:ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಗಾಯತ್ರಿ ಹೆಗಡೆ, ಹಿರಿಯ ಶೂಶ್ರೂಷಕರಾದ ಮಾತರ್ಾ, ಮನೋವೈದ್ಯಕೀಯ ಸಮಾಜ ಕಾರ್ಯ ವಿಭಾಗದ ಸಿಬ್ಬಂದಿಗಳಾದ ಅಶೋಕ ಕೋರಿ, ಆರ್.ಎಮ್. ತಿಮ್ಮಾಪೂರ, ಕಛೇರಿ ಸಿಬ್ಬಂದಿಗಳಾದ ಆರ್.ಎಸ್.ಪಾಟೀಲ್, ನಾಗರಳ್ಳಿ, ಅರಣ್ಯ ಇಲಾಖೆಯ ವಿಠಲ್ ಜೆ, ಡಿಮ್ಹಾನ್ಸ್ ಸಂಸ್ಥೆಯ ಸ್ನಾತಕೋತ್ತರ ಪ್ರಶಿಕ್ಷಣಾಥರ್ಿಗಳು, ನಸರ್ಿಂಗ್ ಪ್ರಶಿಕ್ಷಣಾಥರ್ಿಗಳು, ಸಮಾಜಕಾರ್ಯದ ಪ್ರಶಿಕ್ಷಣಾಥರ್ಿಗಳು, ಸಂಸ್ಥೆಯ ಇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.