ಹುಕ್ಕೇರಿ: ವಿಶ್ವ ಅಂಗವಿಕಲ ದಿನಾಚರಣೆ ಕಾರ್ಯಕ್ರಮ

ಲೋಕದರ್ಶನ ವರದಿ

ಹುಕ್ಕೇರಿ 03:  ಅಂಗವಿಕಲತೆ ಇದು ಶಾಪವಲ್ಲ ಕೆಲವರಿಗೆ ಹುಟ್ಟಿನಿಂದಾದರೆ ಕೆಲವರಿಗೆ ಮಧ್ಯದಲ್ಲಿ ಅಂಗವಿಲತೆ ಬರುತ್ತದೆ. ಇದನ್ನು ಚಾಲೆಂಜಾಗಿ ಸ್ವೀಕರಿಸಿದರೆ ಮಾತ್ರ ಸಾಧನೆ ಮಾಡುವದು ಸಾಧ್ಯವೆಂದು ಹುಕ್ಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ತಿಳಿಸಿದರು.

ಅವರು ಮಂಗಳವಾರದಂದು ಸ್ಥಳೀಯ ಕೋಟೆ ಭಾಗದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಜಿಲ್ಲಾ ಪಂಚಾಯತ ಬೆಳಗಾವಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಾಯರ್ಾಲಯ, ಕೇಂದ್ರ ಸಂಪನ್ಮೂಲ ಕೇಂದ್ರ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ವಿಶ್ವ ಅಂಗವಿಕಲ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಪಾಲಕರು ತಮ್ಮ ಅಂಗವಿಲ ಮಕ್ಕಳಿಗೆ ಪ್ರೋತ್ಸಾಹ ನೀಡುವದರ ಜೊತೆಗೆ ವರಲ್ಲಿ ಧೈರ್ಯ ತುಂಬಬೇಕು ಅಂದರೆ ಮಾತ್ರ ಅವರು ಸಮಾಜದಲ್ಲಿ ಇತರರಂತೆ ಬದುಕಬಹುದೆಂದರು. ಅಂಗವಿಕಲರಿಗಾಗಿ ವಿಶೇಷ ಶಾಲೆಗಳಿವೆಯೆಂದ ಅವರು ತಾಲೂಕಿನಲ್ಲಿ ಪ್ರಾಥಮಿಕ, ಹಾಗೂ ಪ್ರೌಢ ಶಾಲೆಗಳಲ್ಲಿ 600 ಅಂಗವಿಕಲ ವಿದ್ಯಾಥರ್ಿಗಳಿದ್ದಾರೆ.  ಅವರಿಗೆ ವಾರದಲ್ಲಿ 2 ಬಾರಿ ಸರಕಾರದ ವತಿಯಿಂದ ಉಚಿತವಾಗಿ ಫೀಜೊಥೆರಪಿ ಹಾಗೂ ಪ್ರತಿ ವಷರ್ೆಕೊಮ್ಮೆ ಉಚಿತ ವೈದ್ಯಕೀಯ ಶಿಬಿರಗಳನ್ನು ಏರ್ಪಡಿಸಲಾಗುವದು. ಅಂಗವಿಕಲ ವಿದ್ಯಾಥರ್ಿಗಳಿಗೆ  ಸರಕಾರದಿಂದ ಹಲವಾರು ಸವಲತ್ತುಗಳಿದ್ದು ಪಾಲಕರು ಅವುಗಳ ಸದುಪಯೋಗ ಪಡೆದುಕೊಳ್ಳಲು ಅವರು ಕರೆ ನೀಡಿದರು.

ಶಾಲಾ ಬಾಲಕಿಯರ ಪ್ರಾರ್ಥನೆ ಹಾಗೂ ಸ್ವಾಗತ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಕ್ಷೇತ್ರ ಸಮನ್ವಯಾಧಿಕಾರಿ ಶಿವನಾಯಿಕ ನಾಯಿಕ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾ ಪಂ ಸದಸ್ಯೆ ಅನಸೂಯಾ ಪಾಟೀಲ ಜ್ಯೋತಿ ಬೆಳಗಿಸುವದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಹಾಂತೇಶ ಪೂಜಾರಿ ನಿರೂಪಿಸಿದರೆ ಎಸ್.ಬಿ.ಪಾಟೀಲ ವಂದಿಸಿದರು. ಇದೇ ಸಂದರ್ಭದಲ್ಲಿ ಕ್ರೀಯಾಶೀಲ ಅಂಗವಿಕಲ ಶಿಕ್ಷಕರಾದ ಹರಗಾಪೂರದ ಪಿ.ಎಫ್.ಪುಂಡೇಕರ, ಅಜರ್ುನವಾಡ ಸರಕಾರಿ ಪ್ರೌಢ ಶಾಲೆಯ ಸುನೀಲ ಖೋತ, ಮದಿಹಳ್ಳಿ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಜಯಶ್ರೀ ಮರಡಿ ಇವರನ್ನು ಸತ್ಕರಿಸಲಾಯಿತು. ಸುನೀಲ ಖೋತ, ಮಹಾಂತೇಶ ಹಿರೇಮಠ ಕಾರ್ಯಕ್ರವನ್ನುದ್ಧೇಶಿಸಿ ಮಾತನಾಡಿದರು.

ಮುಖ್ಯಾಧ್ಯಾಪಕಿ ಎಸ್.ಎಸ್.ನೊಗಿನಹಾಳ, ಬಿ.ಕೆ.ಪತ್ತಾರ, ಎಸ್.ಬಿ.ಶಿಂಗೆ, ಎಸ್.ಎಸ್.ಖವಣಿ, ಅಶೋಕ ಮಂಕಾಳೆ, ಎನ್.ಬಿ.ಗುಡಸಿ ಶಿಕ್ಷಕ ವಿಜಾಪೂರೆ ವೇದಿಕೆಯಲ್ಲಿದ್ದರು ವಿಶ್ವ ಅಂಗವಿಕಲ ದಿನಾಚರಣೆ ನಿಮಿತ್ತ ಅಂಗವಿಕಲ ಮಕ್ಕಳಿಗಾಗಿ ವಿಶೇಷ ಸ್ಪಧರ್ೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಗೌರವಿಸಲಾಯಿತು.