ಬುದ್ಧಿಮಾಂದ್ಯ ಶಾಲೆಯಲ್ಲಿ ವಿಶ್ವ ವಿಕಲಚೇತನ ದಿನಾಚರಣೆ

World Day of Persons with Disabilities in Mentally Retarded School

 ಬುದ್ಧಿಮಾಂದ್ಯ ಶಾಲೆಯಲ್ಲಿ ವಿಶ್ವ ವಿಕಲಚೇತನ ದಿನಾಚರಣೆ

ಬ್ಯಾಡಗಿ 30: ಇಂದು ಪಟ್ಟಣದ ವಿದ್ಯಾನಗರದಲ್ಲಿರುವ ನಂದಾದೀಪ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ರೋಟರಿ ಕ್ಲಬ್ ಬ್ಯಾಡಗಿ ವತಿಯಿಂದ ವಿಶ್ವ ವಿಕಲಚೇತನ ದಿನಾಚರಣೆ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆ ನಡೆಸಿ ಅಸಿಸ್ಟೆಂಟ್ ಗವರ್ನರ್  ಮಂಜುನಾಥ ಉಪ್ಪಾರ ಮಾತನಾಡಿ ಡಿಸೆಂಬರ್ 3 ರಂದು ವಿಶ್ವ ವಿಕಲಚೇತನರ ದಿನಾಚರಣೆ ಇದ್ದು ಈ ಪ್ರಯುಕ್ತ ಈ ಶಾಲೆಯ ಎಲ್ಲ ಮಕ್ಕಳು ಡಿಸೆಂಬರ್ 2 ಮತ್ತು 3 ರಂದು ಹಾವೇರಿಯಲ್ಲಿ ನಡೆಯಲಿರುವ ವಿಕಲಚೇತನರ ಸಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿವೆ ಅಂದು ದಿನಾಚರಣೆ ನಡೆಸಲು ಇವರು ಲಭ್ಯವಾಗದೆ ಇರುವ ಕಾರಣದಿಂದ ಇಂದು ಈ ಶಾಲೆಯಲ್ಲಿ ಈ ವಿಶೇಷ ಚೇತನರ ಮಕ್ಕಳ ಜೊತೆ ವಿಶ್ವ ವಿಕಲಚೇತನರ ದಿನಾಚರಣೆ ನಡೆಸುತ್ತಿರುವುದು ಒಂದು ವಿಶೇಷ ಸುಸಂದರ್ಭ ಎಂದು ತಿಳಿಸಿದರು. ಎಲ್ಲರ ಮನೆಯಲ್ಲೂ ಸ್ವಾಭಾವಿಕ ಮಕ್ಕಳನ್ನು ಆರೈಕೆ ಮಾಡುವುದೇ ಒಂದು ದೊಡ್ಡ ಕೆಲಸವಾಗಿದ್ದು ಇಲ್ಲಿನ ವ್ಯವಸ್ಥಾಪಕರು ಮತ್ತು ಶಿಕ್ಷಕರು ಈ ಬುದ್ಧಿಮಾಂದ್ಯ ಮಕ್ಕಳ ಯೋಗಕ್ಷೇಮವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಇದರಲ್ಲಿ ಇವರ ಶ್ರಮ ಬಹಳಷ್ಟು ಇದೆ ಈ ವಿಶೇಷ ಮಕ್ಕಳು ಯಾರ ಮಾತು ಕೇಳದಿರುವ ಪರಿಸ್ಥಿತಿ ಇರುತ್ತದೆ ಅವರ ಬೇಡಿಕೆಯಂತೆ ಅವರ ಚಲನವನಗಳಿಗೆ ಇವರೇ ಪ್ರತಿಕ್ರಿಯಿಸಿ ಅವರಿಗೆ ಶಿಕ್ಷಣ ಮತ್ತು ಯೋಗಕ್ಷೇಮ ನೀಡಬೇಕಾಗುತ್ತದೆ ಇವರ ಈ ಕೆಲಸ ಬಹಳಷ್ಟು ಕಷ್ಟದಾಯಕವಾಗಿದೆ ಇಂತಹ ಸಂಸ್ಥೆಗಳಿಗೆ ಸರ್ಕಾರ ಸ್ವಲ್ಪ ವಿಶೇಷ ಅನುದಾನ ನೀಡಿದರೆ ಹೆಚ್ಚು ಅನುಕೂಲವಾಗುತ್ತದೆ ಇವರಿಗೂ ಸಹ ಬ್ಯಾಡಗಿಯಲ್ಲಿ ಒಂದು ಸ್ವಂತವಾಗಿ ಕಾಯಂ ಶಾಲೆಗೆ ನಿವೇಶನ ಮತ್ತು ಕಟ್ಟಡ ಸರ್ಕಾರದ ವತಿಯಿಂದ ದೊರಕಲಿ ಇದಕ್ಕೆ ವ್ಯವಸ್ಥಾಪಕರು ಪ್ರಯತ್ನ ಮಾಡಬೇಕೆಂದು ತಿಳಿಸಿ ಇಲ್ಲಿನ ಎಲ್ಲ ಮಕ್ಕಳೂ ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸಲೀ ಹೆಚ್ಚು ಬಹುಮಾನ ಪಡೆಯಲಿ ಎಂದು ಹಾರೈಸಿ ಪ್ರೋತ್ಸಾಹಿಸಿದರು.  ಶಾಲೆಯ ವ್ಯವಸ್ಥಾಪಕ ಹನುಮಂತಪ್ಪ ಜಾಡರ ಮಾತನಾಡಿ ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಉಪ್ಪಾರ ಇವರು ವರ್ಷಕ್ಕೆ ಒಂದೆರಡು ಬಾರಿ ನಮ್ಮ ಶಾಲೆಗೆ ಭೇಟಿಕೊಟ್ಟು ಮಕ್ಕಳ ಯೋಗ ಕ್ಷೇಮ ವಿಚಾರಿಸಿ ರೋಟರಿ ಕ್ಲಬ್ ವತಿಯಿಂದ ಅನೇಕ ಬಾರಿ ಸಹಾಯ ಸಹಕಾರ ನೀಡಿದ್ದಾರೆ ಇದರಿಂದ ನಮ್ಮ ಮಕ್ಕಳ ಆರೈಕೆಯಲ್ಲಿ ಶಿಕ್ಷಣದಲ್ಲಿ ಬಹಳ ಅನುಕೂಲ ಒದಗಿದೆ. ಇವರು ನಮ್ಮ ಶಾಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಇತರ ಅನೇಕ ಸದಸ್ಯರು ಹಾಗೂ ಸಾರ್ವಜನಿಕರು ವೈಯಕ್ತಿಕವಾಗಿ ಸಹ ಭೇಟಿ ಕೊಡುವಂತಾಗಿ ಶಾಲೆಗೆ ಸಹಾಯ ದೊರಕುತ್ತಿದೆ. ಇಂದು ಸಹ ನಮ್ಮ ಶಾಲೆಯಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಆಚರಿಸುತ್ತಿರುವುದು ಮತ್ತು ವಿಶೇಷವಾದ ಉಪಹಾರ ನೀಡುತ್ತಿರುವುದು ನಮಗೆ ಮತ್ತು ಮಕ್ಕಳಿಗೆ ಬಹಳ ಸಂತೋಷ ತಂದಿದೆ ಎಂದು ತಿಳಿಸಿ ಎಲ್ಲ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಶಾಲೆಯ 31 ಬುದ್ಧಿಮಾಂದ್ಯ ಮಕ್ಕಳಿಗೆ ರೋಟರಿ ಕ್ಲಬ್ ವತಿಯಿಂದ ಸ್ಟೀಲಿನ ಊಟದ ತಟ್ಟೆಯನ್ನು ಕೊಡುಗೆಯಾಗಿ ವಿತರಿಸಿದರು. ಈ ಸಂದರ್ಭದಲ್ಲಿ ಒಂದು ವಿಶೇಷ ಚೇತನ ವಿದ್ಯಾರ್ಥಿನಿ ನೃತ್ಯ ಪ್ರದರ್ಶಿಸಿದ್ದಕ್ಕೆ ನಗದು ಬಹುಮಾನ ನೀಡಿ, ಸದಸ್ಯ ಅನಿಲಕುಮಾರ ಬೊಡ್ಡಪಾಟಿ ಇವರು ಎಲ್ಲ ಮಕ್ಕಳಿಗೆ, ಶಾಲೆಯ ಸಿಬ್ಬಂದಿಗಳಿಗೆ ಮತ್ತು ಸದಸ್ಯರಿಗೆ ವಿಶೇಷವಾಗಿ ಕೇಕ್, ದೋಸೆ, ವಡ ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಿದ್ದರು.ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಸಿದ್ದಲಿಂಗಯ್ಯ ಬೂದಿಹಾಳಮಠ, ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಉಪ್ಪಾರ, ಕ್ಲಬ್ಬಿನ ಕಾರ್ಯದರ್ಶಿ ನಿರಂಜನ ಶೆಟ್ಟಿಹಳ್ಳಿ, ಖಜಾಂಚಿ ವಿರೇಶ ಬಾಗೋಜಿ, ಜಂಟಿ ಕಾರ್ಯದರ್ಶಿ ಚಂದ್ರಶೇಖರ ಗಾಣಿಗೆರ, ಪರಶುರಾಮ ಮೇಲಗಿರಿ, ಮಾಲತೇಶ ಅರಳಿಮಟ್ಟಿ, ಸತೀಶ ಅಗಡಿ, ಪವಾಡಪ್ಪ ಆಚನೂರ, ಶಿವರಾಜ ಚೂರಿ, ಬಸವರಾಜ ಸುಂಕಾಪುರ, ಸಿದ್ದು ಕೊಂಚಿಗೇರಿ, ಕಿರಣ ಮಾಳೆನಹಳ್ಳಿ ಮತ್ತು ಶಾಲೆಯ ವ್ಯವಸ್ಥಾಪಕರಾದ ಹನುಮಂತಪ್ಪ ಜಾಡರ ಶಿಕ್ಷಕಿಯರಾದ ಚಂಪಾ, ಶಶಿಕಲಾ, ಮುರುಡೆಮ್ಮ, ತನುಜಾ ಮತ್ತು ಸಿಬ್ಬಂದಿ ವರ್ಗದವರು, ಬುದ್ಧಿಮಾಂದ್ಯ ಮಕ್ಕಳು ಉಪಸ್ಥಿತರಿದ್ದರು