ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ
World Day Against Child Labor- Yaragatti
ಯರಗಟ್ಟಿ, 14: ಬಡತನದಿಂದಾಗಿ ವಿಶ್ವದಲ್ಲಿ 13.8 ಕೋಟಿ ಮತ್ತು ಭಾರತದಲ್ಲಿ 18 ರಿಂದ 33 ಲಕ್ಷ ಬಾಲ ಕಾರ್ಮಿಕ ಮಕ್ಕಳು ಇದ್ದಾರೆ. ಈ ಪದ್ದತಿಯನ್ನು ನಿರ್ಮೂಲನೆ ಮಾಡಲು ಕೇವಲ ಸರ್ಕಾರದ ಕಾಯ್ದೆ ಕಾನೂನುಗಳಿಂದ ಮಾತ್ರ ಸಾಧ್ಯ ಇಲ್ಲ. ಪ್ರತಿಯೊಬ್ಬರು, ಸಂಘ ಸಂಸ್ಥೆಗಳು ಮಕ್ಕಳನ್ನು ದುಡಿಸಿಕೊಳ್ಳುವುದನ್ನು ಕೈ ಬಿಡಬೇಕು. ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಬಡತನ ಹೋಗಲಾಡಿಸುವುದರೊಂದಿಗೆ ಈ ಪದ್ದತಿಯ ನಿರ್ಮೂಲನೆಗೆ ಮುಂದಾಗಬೇಕು ಎಂದು ದಿವಾಣಿ ನ್ಯಾಯಾಧೀಶರಾದ ಕೃಷ್ಣಪ್ಪ ಪಮ್ಮಾರ ಹೇಳಿದರು.
ಪಟ್ಟಣದ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಕಾರ್ಮಿಕ ಇಲಾಖೆ ಹಾಗೂ ತಾಲೂಕಾ ಆಡಳಿತ ಇವರ ಆಶ್ರಯದಲ್ಲಿ ನಡೆದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಮತ್ತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
1998ರ ಜನಗಣತಿ ಪ್ರಕಾರ ದೇಶದಲ್ಲಿ 1.26 ಕೋಟಿ ಬಾಲ ಕಾರ್ಮಿಕರಿದ್ದರು. 2009-10ನೇ ಸಾಲಿನ ಗಣತಿ ಪ್ರಕಾರ 49 ಲಕ್ಷ ಬಾಲ ಕಾರ್ಮಿಕರಿದ್ದರು. ದೇಶದಲ್ಲಿ 2011ರ ಜನಗಣತಿ ಪ್ರಕಾರ 43 ಲಕ್ಷ ಬಾಲ ಕಾರ್ಮಿಕರಿರುವುದು ಬೆಳಕಿಗೆ ಬಂದಿದೆ. ಬಾಲ ಕಾರ್ಮಿಕ ಪದ್ಧತಿ ನಿರ್ಮೂನೆಯ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಬಹಳಷ್ಟು ಕೆಲ ಕಾರ್ಯಗಳು ನಡೆದಿವೆ.
ಶೈಕ್ಷಣಿಕ ಹಕ್ಕುಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಇಲ್ಲಿ ಹಮ್ಮಿಕೊಳ್ಳಬಹುದು. ಕೌನ್ಸೆಲಿಂಗ್ ಕೂಡ ಕೊಡಬಹುದು ಎಂದು ಅವರು ನುಡಿದರು.
ಈ ವೇಳೆ ತಹಶೀಲ್ದಾರ ಎಂ ವ್ಹಿ ಗುಂಡಪ್ಪಗೋಳ ಪ್ರತಿಜ್ಞಾ ವಿಧಿಯನ್ನು ಭೋದಿಸಿ ಮಾತನಾಡಿದ ಅವರು ಮಕ್ಕಳಿಗೆ ಶಿಕ್ಷಣ ನೀಡಿ ದುಡಿಮೆಯಿಂದ ಮುಕ್ತಿಗೊಳಿಸಿ, ಮಕ್ಕಳನ್ನು ಶಾಲೆಗೆ ಕಳಿಸಿ ಕೆಲಸಕ್ಕಲ್ಲ, ಬಾಲಕಾರ್ಮಿಕ ಪದ್ದತಿ ನಿರ್ಮೂಲನೆ, ದೇಶದ ಸರ್ವತೋಮುಖ ಸುಧಾರಣೆ, ದುಡಿಸಬೇಕೆ ಮಕ್ಕಳನ್ನು ಅವಮಾನಿಸಬೇಕೆ ದೇಶವನ್ನು, ಬಾಲಕಾರ್ಮಿಕರ ನೇಮಕ ಅಪರಾದ 20 ಸಾವಿರ ರೂ ದಂಡ 6 ತಿಂಗಳ ಜೈಲು ಶಿಕ್ಷೆ ಎಂದು ಹೇಳಿದರು.
ಉಪನ್ಯಾಸಕ ಆರ್. ಕೆ. ಹುಣಶಿಕಟ್ಟಿ ಮಾತನಾಡಿ ಬಾಲ ಕಾರ್ಮಿಕರು ಕಂಡ ತಕ್ಷಣ ನೀವು 1098 ಪೋನ್ ಮಾಡಿ ಸಕ್ಷಮ ಪ್ರಾಧಿಕಾರದವರು ಬಂದು ಕ್ರಮ ತೆಗೆದುಕೊಳ್ಳುತ್ತಾರೆ. ಮಕ್ಕಳು ಓದಬೇಕೆ ಹೊರತು, ದುಡಿಮೆಗೆ ಅಲ್ಲ ಎಂದರು.
ಈ ವೇಳೆ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್ ಆರ್. ರೆಬ್ಬನ್ನವರ, ಉಪಾಧ್ಯಕ್ಷ ವ್ಹಿ. ಜಿ ಬಿರಾದಾರಪಾಟೀಲ, ಪ. ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಕಾರ್ಮಿಕ ನೀರೀಕ್ಷಕ ಮಹೇಶ ಬಾಗೋಜಿ, ಸಿಪಿಐ ಆಯ್ ಎಂ ಮಠಪತಿ, ಪಿಎಸ್‌ಐ ಎಲ್. ಬಿ. ಮಾಳಿ, ನ್ಯಾಯವಾದಿಗಳಾದ ಆರ್. ಎಸ್. ಆಲದಕಟ್ಟಿ, ವ್ಹಿ. ಬಿ. ಹೊಸಮನಿ, ಎಸ್. ವ್ಹಿ. ಮಾಳಕಾಕನ್ನವರ, ಎಫ್. ಬಿ. ಹಟ್ಟಿ, ರಾಜು ಪಾಕಾಲೆ, ಏಕಲವ್ಯ ನಾಯ್ಕರ, ಪ್ರಧಾನ ಗುರುಗಳಾದ ಎ. ಎ. ಮಕ್ತುಮನ್ನವರ, ಶಿಕ್ಷಕಲಾದ ಎಂ. ಎಂ. ಚಿಲದ, ಎಸ್. ಬಿ. ಮಿಕಲಿ, ಕಂದಾಯ ನೀರೀಕ್ಷಕ ವಾಯ್ ಎಫ್ ಮುರ್ತೇನ್ನವರ, ಗ್ರಾಮ ಆಡಳಿತಾಧಿಕಾರಿ ಎಲ್. ಬಿ. ದಳವಾಯಿ, ರಾಜೇಂದ್ರ ಶೆಟ್ಟಿ, ವಿರೇಶ ಚೌದರಿ, ಸಬ್ಬಿರಅಹ್ಮದ ಜಮಖಂಡಿ, ಮಂಜುನಾಥ ಕಲಾಲ, ಬಸವರಾಜ ಗಂಗರಡ್ಡಿ, ಎಚ್. ಎಸ್. ಹೂಗಾರ, ವೀರಭದ್ರ್ಪ ಕುರುಬಗಟ್ಟಿ ಸೇರಿದಂತೆ ಮಕ್ಕಳ ರಕ್ಷಣಾ ಸಮಿತಿ, ವಕೀಲರ ಸಂಘ , ಪೊಲೀಸ್ ಇತರೇ ಶಿಕ್ಷಕ-ಶಿಕ್ಷಕಿಯರಿ ಮತ್ತು ತಹಶೀಲ್ದಾರ ಕಚೇರಿ ಸಿಬ್ಬಂದಿ ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 