ಮರಾಠಾ ಸಮಾಜದಿಂದ ಶ್ರೀಮಂತ ಪಾಟೀಲ, ಶ್ರೀನಿವಾಸ ಪಾಟೀಲಗೆ ಸನ್ಮಾನ

ಮರಾಠಾ ಸಮಾಜದಿಂದ ಶ್ರೀಮಂತ ಪಾಟೀಲ, ಶ್ರೀನಿವಾಸ ಪಾಟೀಲಗೆ ಸನ್ಮಾನ  Shrimant Patil and Srinivasa Patil felicitated by the Maratha community

ಕಾಗವಾಡ 11:  ಮಾಜಿ ಸಚಿವರು ಹಾಗೂ ಕೆಂಪವಾಡದ ಅಥಣಿ ಶುಗರ್ಸ ಉದ್ಯೋಗ ಸಮೂಹದ ಸಂಸ್ಥಾಪಕ ಶ್ರೀಮಂತ ಪಾಟೀಲ ಅವರಿಗೆ ಸಕ್ಕರೆ ಉದ್ಯಮ ಗೌರವ ಪುರಸ್ಕಾರ ಮತ್ತು ಯುವ ಮುಖಂಡರು, ಕಾರ್ಖನೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಪಾಟೀಲ ಅವರು ಶೇಡಬಾಳ ಸ್ಟೇಶನ್‌ನ ಪದ್ಮಾವತಿ ಪಿಕೆಪಿಎಸ್ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಯುಕ್ತ ತಾಲೂಕಿನ ಮರಾಠಾ ಸಮಾಜ ಬಾಂಧವರು ಸೋಮವಾರ ದಿ. 10 ರಂದು ಸಂಜೆ ಇಬ್ಬರನ್ನು ಸನ್ಮಾನಿಸಿ, ಗೌರವಿಸಿದ್ದಾರೆ.  

ಮರಾಠಾ ಸಮಾಜ ಮುಖಂಡ ನಾನಾಸಾಬ ಅವತಾಡೆ ಮಾತನಾಡಿ, ಮಾಜಿ ಸಚಿವ ಶ್ರೀಮಂತ ಪಾಟೀಲ ಅವರು ಸಕ್ಕರೆ ಉದ್ಯಮದ ಅಭಿವೃದ್ಧಿಗಾಗಿ ನೀಡಿರುವ ಕೊಡುಗೆ, ದೂರದೃಷ್ಟಿ, ಕೌಶಲ್ಯಪೂರ್ಣ ಮಾರ್ಗದರ್ಶನ, ಉದ್ಯಮದ ಆಧುನೀಕರಣ, ದಕ್ಷ ನಿರ್ವಹಣೆ ಹಾಗೂ ಅಭಿವೃದ್ಧಿ ಕ್ರಮಗಳನ್ನು ಗುರಿತಿಸಿ, ಅವರಿಗೆ ಈ ಪ್ರಶಸ್ತಿ ಸಂದಿದ್ದು, ಹೆಮ್ಮೆಯ ವಿಷಯವಾಗಿದೆ. ಅದರಂತೆ ಶ್ರೀನಿವಾಸ ಪಾಟೀಲ ಅವರು ಶೇಡಬಾಳ ಸ್ಟೇಶನ್‌ನ ಪಿಕೆಪಿಎಸ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು, ಅವರ ಕಾಲಾವಧಿಯಲ್ಲಿ ಸಹಕಾರಿಯು ಪ್ರಗತಿ ಸಾಧಿಸಲಿ ಎಂದು ಶುಭ ಕೋರಿದರು.  

ಮರಾಠಾ ಸಮಾಜದ ಮುಖಂಡರಾದ ನಾನಾಸಾಹೇಬ ಅವತಾಡೆ, ಸಂದೀಪ ಪಾಟೀಲ,ರಾಜೇಂದ್ರ ದೇಸಾಯಿ, ಶ್ರೀಕಾಂತ ಪಾಟೀಲ, ಸಿದ್ದು ಪಾಟೀಲ, ಡಾ.ಮಂಜುನಾಥ ಸೂರ್ಯವಂಶಿ, ನಾನಾಸಾಹೇಬ ಜಾಧವ, ಪ್ರವೀಣ ಜಾಧವ, ಪ್ರಶಾಂತ ಚವ್ಹಾಣ, ನಾರಾಯನ ಭೋಸಲೆ, ಧನಂಜಯ ಚವ್ಹಾಣ, ಡಿ.ಕೆ. ಪವಾರ ಸೇರಿದಂತೆ ಮರಾಠ ಸಮಾಜದ ನೂರಾರು ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.