ಹಂದಿಗುಂದ: ಇಳಿಜಾರು ಲಕ್ಷ್ಮಿದೇವಿ ಜಾತ್ರಾ ಮಹೋತ್ಸವ ಸಂಪನ್ನ

ಹಂದಿಗುಂದ: ಇಳಿಜಾರು ಲಕ್ಷ್ಮಿದೇವಿ ಜಾತ್ರಾ ಮಹೋತ್ಸವ ಸಂಪನ್ನ  Handigund: The slope Lakshmi Devi Jatra festival is a success

ಪಾಲಬಾವಿ 11:  ದೇವಸ್ಥಾನಗಳು ನಮ್ಮ ಸಾಂಸ್ಕೃತಿಕ ಪ್ರತೀಕಗಳು, ದೇವಸ್ಥಾನಕ್ಕೆ ಹೋಗುವುದರಿಂದ ಶಾಂತಿ, ನೆಮ್ಮದಿ ಸಿಗುತ್ತದೆ, ದೇವಸ್ಥಾನಗಳು ಪಾವನ ಸ್ಥಾನಗಳಾಗಿದ್ದು, ಭಕ್ತರು ದೇವಸ್ಥಾನಗಳನ್ನು ಸ್ವಚ್ಛ ಹಾಗೂ ಸುಚಿತ್ವವಾಗಿ ಕಾಪಾಡಿಕೊಳ್ಳಬೇಕು. ನಾವು ಸದಾ ಕಾಲ ದಾನ, ಧರ್ಮ ಪರೋಪಕಾರ ಮಾಡುವುದರಿಂದ ದೇವರ ಕೃಪೆಯು ನಮಗೆ ಆಗುತ್ತದೆ ಎಂದು ಗುರುಮಠದ ಗುರುಲಿಂಗಯ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.  ಅವರು ತಾಲೂಕು ಹಂದಿಗುಂದ ಗ್ರಾಮದ ಇಳಿಜಾರು ಲಕ್ಷ್ಮೀದೇವಿ ಜಾತ್ರಾ ಮಹೋತ್ಸವವು ಪ್ರತಿ ವರ್ಷದಂತೆ ಈ ವರ್ಷವೂ ಆಗಸ್ಟ್‌ 11ರಂದು ಸಡಗರ ಸಂಭ್ರಮದಿಂದ ಜರುಗಿಡಿದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು.  

ಸಿದ್ದೇಶ್ವರ ವಿರಕ್ತ ಮಠದ ಮುಖ್ಯ ಅರ್ಚಕರು ಗುರುಲಿಂಗಯ್ಯ ಸ್ವಾಮೀಜಿ ಮಠದ ಸನ್ನಿಧಾನ ವಹಿಸುವರು. ರಾಜ್ಯ ರೈತ ಸಂಘ, ಹಸಿರುಸೇನೆ  ರಾಜ್ಯಾಧ್ಯಕ್ಷರು ಚೂನ್ನಪ್ಪ ಪೂಜಾರಿ, ಸಮಾಜ ಸೇವಕರು ಬಡವರ ಬಂಧು ಉದ್ಯಮಿ ಸಿದ್ದಾರ್ಥ್‌ ವಾಡೆಣ್ಣವರ, ರಾಜ್ಯ ರೈತ ಸಂಘ ಹಸಿರುಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಚಿನಗುಂಡಿ, ರೈತ ಸಂಘದ ಚಿಕ್ಕೋಡಿ ಜಿಲ್ಲಾಧ್ಯಕ್ಷ ಮಲ್ಲಪ್ಪ ಅಂಗಡಿ, ರೈತ ಸಂಘದ ರಾಯಬಾಗ ತಾಲೂಕ ಅಧ್ಯಕ್ಷ ರಮೇಶ ಕಲ್ಲಾರ, ಮುಧೋಳ ತಾಲೂಕು ರೈತ ಸಂಘದ ಅಧ್ಯಕ್ಷ ಮಹಾಲಿಂಗ ತೇಲಿ, ರಮೇಶ ಮಂಟೂರ, ಮಲ್ಲಪ್ಪ ಹೆಗ್ಗಾಣಿ ವೇದಿಕೆ ಮೇಲೆ ಉಪಸ್ಥಿತರಿದ್ದರು.  

ಅಂದು ಮುಂಜಾನೆ 6ಗಂಟೆಗೆ ದೇವಸ್ಥಾನದ ಅರ್ಚಕರಾದ ಅರುಣ ಮುರಾರಿ ಇವರಿಂದ ಲಕ್ಷ್ಮೀದೇವಿ, ಕರ್ತೃ ಗದ್ದಿಗೆ ಅಭಿಷೇಕ ಜರುಗಿತು. ಮುಂಜಾನೆ 9ಗಂಟೆಗೆ ಪುರದೇವರ ಹಾಲುಸಿದ್ದೇಶ್ವರ ಪಲ್ಲಕ್ಕಿಯನ್ನು ಬರಮಾಡಿಕೊಂಡು. ದೇವಸ್ಥಾನದ ಪ್ರಭಾ ಮಂಡಳದಲ್ಲಿ 101 ಮುತ್ತೈದೆಯರಿಗೆ ಉಡಿ ತುಂಬುವ ಧಾರ್ಮಿಕ ಕಾರ್ಯಕ್ರಮವು ನೆರವೇರಿತು. ಮಧ್ಯಾಹ್ನ 1ಗಂಟೆಗೆ ದೇವಸ್ಥಾನದ ದಾಸೋಹದ ಮಹಾಮನೆಯಲ್ಲಿ ಅನ್ನ ಸಂತರೆ​‍್ಣ ನೆರವೇರಿತು.  

ಅದೇ ದಿನ ಮುಂಜಾನೆ 9ಗಂಟೆಗೆ ಅಥಣಿ ತಾಲೂಕಿನ ಮಾಯನಟ್ಟಿ ಗ್ರಾಮದ ಅಮೋಘ ಸಿದ್ದೇಶ್ವರ ಡೊಳ್ಳಿನ ಗಾಯನ ಸಂಘ ಹಾಗೂ ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದ ಮಾಳಿಂಗರಾಯ ಗಾಯನ ಸಂಘ ಇವರಿಂದ ಸುಪ್ರಸಿದ್ಧ  ಡೊಳ್ಳಿನ ಪದಗಳ ಹಾಡುಗಾರಿಕೆ ಜರುಗಿದವು. ಕಮಿಟಿಯ ಹಿರಿಯರಾದ ಸತ್ಯಪ್ಪ ಕೋಳಿಗುಡ್ಡ, ಫಕೀರ​‍್ಪ ದೊಡಮನಿ, ಶಿವಲಿಂಗ ಚಿನಗುಂಡಿ, ಶ್ರೀಮಂತ ಸತ್ತಿಗೇರಿ, ಶ್ರೀಶೈಲ ಚಿನಗುಂಡಿ, ಬಸಪ್ಪ ಸರಪಣಿ, ರವಿ ತೇರದಾಳ,

ಲಕ್ಷ್ಮಣ ಕಪ್ಪಲಗುದ್ದಿ, ಹನುಮಂತ ಕಾಪಸಿ, ಪ್ರಕಾಶ ಕಪ್ಪಲಗುದ್ದಿ, ಶಿವಾನಂದ ತೇಲಿ, ಹಾಲಸಿದ್ದೇಶ್ವರ ದೇವಸ್ಥಾನದ ಅರ್ಚಕ ಶ್ರೀಮಂತ ಪೂಜಾರಿ, ಯಲ್ಲಪ್ಪ ಮುಗಳಖೋಡ, ಸುರೇಶ ಪೂಜಾರಿ, ಹಾಲಪ್ಪ ಪೂಜಾರಿ, ಲಕ್ಷ್ಮೀದೇವಿ ದೇವಸ್ಥಾನದ ಅರ್ಚಕ ಅರುಣ ಮುರಾರಿ, ಸುರೇಶ ಮುರಾರಿ, ಶ್ರೀಶೈಲ ಮುರಾರಿ, ಹಾಲಪ್ಪ ಕಪ್ಪಲಗುದ್ದಿ, ಮಲ್ಲಪ್ಪ ಮೇಟಿ, ಹಾಲಪ್ಪ ಮೇಟಿ, ಮಹಾಂತೇಶ ಚಿಂಚಗುಂಡಿ, ಪುಂಡಲೀಕ ಘಂಟಿ ಇತರರು ಇದ್ದರು.