ವಿಶ್ವಕಪ್ ಸಮರ: ಹೆಚ್ಚುವರಿ ಆಟಗಾರರಾಗಿ ರಿಷಬ್, ಅಂಬಟಿ


ಟೀಂ ಇಂಡಿಯಾದ  ಯುವ ವಿಕೆಟ್ ಕೀಪರ್  ರಿಷಬ್  ಪಂತ್  ಮತ್ತು  ಸ್ಫೋಟಕ ಬ್ಯಾಟ್ಸ್ ಮನ್  ಅಂಬಟಿ ರಾಯ್ಡು  ಅವರನ್ನ  ವಿಶ್ವಕಪ್ಗೆ  ಹೆಚ್ಚುವರಿ ಆಟಗಾರರಾಗಿ  ಬಿಸಿಸಿಐ ನೇಮಕ ಮಾಡಿದೆ.  ಇವರೊಂದಿಗೆ ಯುವ ವೇಗಿ  ನವದೀಪ್ಸೈನಿ ಅವರನ್ನ  ಕೂಡ  ಹೆಚ್ಚುವರಿ  ಆಟಗಾರನಾಗಿ ನೇಮಕ ಮಾಡಲಾಗಿದೆ.  

ಮುಂದಿನ ತಿಂಗಳು  ಆಂಗ್ಲರ ನಾಡಲ್ಲಿ   ಆರಂಭವಾಗಲಿರುವ ವಿಶ್ವಕಪ್ಗೆ  ವಿರಾಟ್  ಕೊಹ್ಲಿ  ನೇತೃತ್ವದ  ಟೀಂ ಇಂಡಿಯಾವನ್ನ  ಮೊನ್ನೆ  ಬಿಸಿಸಿಐ  ಪ್ರಕಟಿಸಿತ್ತು. ಯುವ ವಿಕೆಟ್ ಕೀಪರ್  ರಿಷಬ್  ಪಂತ್ ಮತ್ತು  ಸ್ಫೋಟಕ  ಬ್ಯಾಟ್ಸ್ಮನ್  ಅಂಬಟಿ ರಾಯ್ಡು  ಅವರನ್ನ  ಆಯ್ಕೆ ಮಾಡದಿದ್ದು  ಭಾರೀ  ಚಚರ್ೆಗೆ  ಕಾರಣವಾಗಿತ್ತು.  ಪಂತ್ ಮತ್ತು  ಅಂಬಾಡಿ ರಾಯ್ಡುಗೆ  ಸ್ಥಾನ ನೀಡದಿದಕ್ಕೆ  ಮಾಜಿ  ಕ್ರಿಕೆಟಿಗರು  ಆಶ್ಚರ್ಯ  ವ್ಯಕ್ತಪಡಿಸಿದ್ದರು.    

ಚಾಂಪಿಯನ್ಸ್  ಟ್ರೋಫಿಯಂತೆ  ಮೂರು ಹೆಚ್ಚುವರಿ ಆಟಗಾರರನ್ನ  ನೇಮಕ ಮಾಡಲಾಗಿದೆ. ರಿಷಬ್  ಪಂತ್ ಮತ್ತು  ಅಂಬಟಿ ರಾಯ್ಡು  ಒಂದು  ಮತ್ತು  ಎರಡನೇ  ಹೆಚ್ಚುವರಿ ಆಟಗಾರರಾಗಿದ್ದಾರೆ.  ಸೈನಿ ಕೂಡ  ಈ ಪಟ್ಟಿಯಲ್ಲಿದ್ದಾರೆ.  ಯಾರಾದರೂ  ಗಾಯದ ಸಮಸ್ಯೆಗೆ ಗುರಿಯಾದ್ರೆ  ಅವಶ್ಯಕತೆಗೆ  ತಕ್ಕಂತೆ  ಮೂವರಲ್ಲಿ  ಒಬ್ಬರು ಕಣಕ್ಕಿಳಿಸುತ್ತೇವೆ  ಎಂದು  ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು  ಹೇಳಿದ್ದಾರೆ.