ವೈದಿಕ ಸಂಸ್ಕಾರ ಶಿಬಿರದಲ್ಲಿ ವಿಶ್ವ ಪುಸ್ತಕ ದಿನ ಆಚರಣೆ

World Book Day celebrated at Vedic Sanskar Camp

ವೈದಿಕ ಸಂಸ್ಕಾರ ಶಿಬಿರದಲ್ಲಿ ವಿಶ್ವ ಪುಸ್ತಕ ದಿನ ಆಚರಣೆ 

ಕೊಪ್ಪಳ 24:  ಇಲ್ಲಿನ ಮಳೆ ಮಲ್ಲೇಶ್ವರ ದೇವಸ್ಥಾನದಲ್ಲಿ 50 ಜನ ಜಂಗಮ ವಟುಗಳಿಗೆ ವೈದಿಕ ಸಂಸ್ಕಾರ ಶಿಬಿರದಲ್ಲಿ ವಿಶ್ವ ಪುಸ್ತಕ ದಿನ ಹಮ್ಮಿಕೊಳ್ಳಲಾಗಿತ್ತು.  

ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಪಾಲ್ಗೊಂಡ ಲೇಖಕರು ಉಪನ್ಯಾಸಕರಾದ ಶಿವನಗೌಡ ಪೊಲೀಸ್ ಪಾಟೀಲ್ ನವಲಹಳ್ಳಿ ಅವರು ಮಾತನಾಡುತ್ತಾ. ಮಸ್ತಕಕ್ಕೆ ಪುಸ್ತಕವು ಜ್ಞಾನವನ್ನು  ಉಣಬಡಿಸುತ್ತದೆ. ವೈದಿಕ ಪರಂಪರೆಯ ಅತ್ಯಂತ ದೊಡ್ಡ ಜ್ಞಾನ  ಸಿದ್ಧಾಂತ ಶಿಖಾಮಣಿ ಎಂಬ ಪುಸ್ತಕದಲ್ಲಿ ಜ್ಞಾನವನ್ನು ಉಣಪಡಿಸುತ್ತದೆ. ರಾಮಾಯಣ ಮಹಾಭಾರತ ಎಂಬ ಪುಸ್ತಕಗಳು ಭಾರತ ಅಷ್ಟೇ  ಅಲ್ಲ, ಇಡೀ ವಿಶ್ವಕ್ಕೆ ಜ್ಞಾನವನ್ನು, ವ್ಯಕ್ತಿತ್ವವನ್ನ, ಮಾನವೀಯತೆಯನ್ನ, ಸಮಾನತೆಯನ್ನ ನೀಡುವೆ. ಪುಸ್ತಕವು ಎಂದಿಗೂ ನಮ್ಮನ್ನ ಚೈತನ್ಯವಂತರನಾಗಿ, ಸೃಜನಶೀಲ ವ್ಯಕ್ತಿಗಳನ್ನಾಗಿ, ಮಾನವೀಯತೆ ತುಂಬಿದ ಸಂಪೂರ್ಣ ವ್ಯಕ್ತಿಯನ್ನಾಗಿ ಮಾಡುತ್ತವೆ. ಆದ್ದರಿಂದ ನಾವುಗಳು ಪುಸ್ತಕವನ್ನು ಓದುವ ಹವ್ಯಾಸವನ್ನು  ಬೆಳೆಸಿಕೊಳ್ಳಬೇಕು. ಜಗತ್ತಿನಲ್ಲಿ ಹಾಗಿಹೋದ ಎಲ್ಲಾ ಮಹಾನ್ ವ್ಯಕ್ತಿಗಳ  ಬದಲಾವಣೆಗೆ ಪರಿವರ್ತನೆಗೆ ಪುಸ್ತಕಗಳೇ ಕಾರಣವಾಗಿವೆ. ಮನುಷ್ಯನಿಗೆ ಅಪರೂಪದ ಗೆಳೆಯನೆಂದರೆ ಪುಸ್ತಕ.ಕೇವಲ ಓದುವದಷ್ಟೇ ಅಲ್ಲಾ ನಮ್ಮ ಬದುಕನ್ನು ರೂಪಿಸಿಕೊಳ್ಳುವುದಕ್ಕು ಪುಸ್ತಕ ಅವಶ್ಯಕತೆ ಇದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಪುಟ್ಟು ಶಾಸ್ತ್ರಿಜಿ ವಸಿದ್ದರು. 

 ಕಾರ್ಯಕ್ರಮದ ಅತಿಥಿಗಳಾಗಿ ಅಶೋಕ  ಕೊತಬಾಳ, ಉದ್ಯಮಿದಾರರು ಟ್ರಸ್ಟ್‌ ನ ಸದಸ್ಯರಾದ ರಮೇಶ್ ಕವಲೂರ್‌. ಮಳೆ ಮಲ್ಲೇಶ್ವರ ದೇವಸ್ಥಾನ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಗವಿಸಿದ್ದೇಯ್ಯ ಲಿಂಗಬಸಯ್ಯಮಠ ಹಾಜರಿದ್ದರು.  

ವೈದಿಕ ಸಂಸ್ಕಾರ  ಶಿಬಿರದಲ್ಲಿ 50 ಜನ ಜಂಗಮ ವಟುಗಳು ಹಾಜರಿದರು. ಶಿಬಿರದಲ್ಲಿ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡ ಹಲವಾರು ಸೇವಾ ಕಾರ್ಯಕರ್ತರು ಇದ್ದಾರೆ  ಅವರುಗಳಲ್ಲಿ, ಮಂಜುನಾಥ ಗದಗಿನಮಠ, ವೀರೇಶ ಕೋರಿ,ಅಡಿಗೆ ಭಟ್ಟರಾದ  ಶರಣಯ್ಯ ಮುದ್ದಾಬಳ್ಳಿ ದಂಪತಿಗಳು. ಈ ಶಿಬಿರದ ಬೆನ್ನೆಲುಬಾಗಿನಿಂತವರು  ಹನುಮರೆಡ್ಡಿ, ಬಸವರಾಜ ಕೇಸರಟ್ಟಿ, ಗಂಗಮ್ಮ, ವನಜಾಕ್ಷಿ ಪಾಟೀಲ ಶಿಕ್ಷಕರುಗಳು, ಇನ್ನು ಅನೇಕ ಭಕ್ತರ ಬಳಗ ತನು ಮನ ಧನದ ಸಹಾಯದಿಂದ ಶಿಬಿರವು ಯಶಸ್ವಿಯತ್ತ ಸಾಗುತ್ತಿದೆ. ಮಳೆ ಮಲ್ಲೇಶ್ವರ ದೇವಸ್ಥಾನ ಸಮಿತಿಯು ವಿದ್ಯಾರ್ಜನೆಗೆ ಅನುಕೂಲಕರವಾಗಿ ಹೊಸದೊಂದು ಗ್ರಂಥಾಲಯವನ್ನು ಸ್ಥಾಪಿಸಿದೆ. ಈ ಗ್ರಂಥಾಲಯಕ್ಕೆ  ಲೇಖಕರಾದ ಶಿವನಗೌಡ ಪೊಲೀಸ್ ಪಾಟೀಲ್ ಅವರು ಇತರರು ಪುಸ್ತಕವನ್ನು  ನೀಡಿದರು 

.ಸಾಹಿತಿಗಳು, ಲೇಖಕರುಗಳು, ವಿಮರ್ಶಕರು, ಪ್ರಕಾಶಕರುಗಳು ಮತ್ತು ಪುಸ್ತಕ ಆಸಕ್ತರು ಸಾರ್ವಜನಿಕರು ನಾಗರಿಕರು. ಮಳೆಮಲ್ಲೇಶ್ವರ ದೇವಸ್ಥಾನ ಸಮಿತಿಯಿಂದ  ಪ್ರಾರಂಭವಾದ ಗ್ರಂಥಾಲಯಕ್ಕೆ ಪುಸ್ತಕಗಳನ್ನ ದೇಣಿಗೆ ರೂಪದಲ್ಲಿ ನೀಡುವ ಮೂಲಕ ವಿದ್ಯಾರ್ಜನೆಗಾಗಿ ಬರುವ ಮಕ್ಕಳಿಗೆ ತಮ್ಮ ಜ್ಞಾನ ವೃದ್ಧಿಯ ಅನುಕೂಲಕ್ಕೆ ತಮ್ಮ ಗ್ರಂಥದ ದಾನದ ಅವಶ್ಯಕತೆ ಇದ್ದು. ಮಳೆ ಮಲ್ಲೇಶ್ವರ ದೇವಸ್ಥಾನ ಸಮಿತಿಯವರನ್ನು ಸಂಪರ್ಕಿಸಬಹುದು. ಅಥವಾ ಪುಸ್ತಕವನ್ನು  ಗವಿಸಿದ್ದಯ್ಯ ಲಿಂಗಬಸಯ್ಯನಮಠ. ಮಳೆ ಮಲ್ಲೇಶ್ವರ ದೇವಸ್ಥಾನ ಸಮಿತಿ. ಇಂದ್ರಕೀಲ ಪರ್ವತ. ಮಳೆ ಮಲ್ಲೇಶ್ವರ ದೇವಸ್ಥಾನ ಆವರಣ. ಈ ವಿಳಾಸಕ್ಕೆ ಪುಸ್ತಕವನ್ನು ಕಳಿಸಬಹುದು.