ವಿಶ್ವ ಸಂಧಿವಾತ- ಎಲುಬಿನ ಸಾಂದ್ರತೆಯ ಜಾಗೃತಿ ದಿನಾಚರಣೆ

ಬೆಳಗಾವಿ 16:  ಎಲ್ಲ ವಯೋವರ್ಗದವರನ್ನು ಕಾಡುವ ರೋಗ ಅಥ್ರೈರ್ಟಿಸ ಹಾಗೂ ಒಸ್ಟಿಯೋಪೋರೊಸಿಸ್ ರೋಗಗಳು ಇಂದಿನ ದಿನಗಳಲ್ಲಿ ಸಾಮಾನ್ಯವಾದರೂ ಮುಂದೊಂದು ದಿನ ಅಪಾಯ ಕಟ್ಟಿಟ್ಟಬುತ್ತಿ ಎಂದು ಯು ಎಸ್ ಎಮ್ ಕೆ ಎಲ್ ಇ ಯ ನಿರ್ದೇಶಕರಾದ ಡಾ. ಹೆಚ್ ಬಿ ರಾಜಶೇಖರ ಅವರು ಮಾತನಾಡುತ್ತಿದ್ದರು. ಅವರು ಇಂದು ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಎಲುಬು ಕೀಲು ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ವಿಶ್ವ ಸಂಧಿವಾತ ಹಾಗೂ ಎಲುಬಿನ ಸಾಂದ್ರತೆಯ (ಅಥ್ರೈರ್ಟಿಸ ಹಾಗೂ ಒಸ್ಟಿಯೋಪೋರೊಸಿಸ್) ಜಾಗೃತಿ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸುತ್ತ ಮಾತನಾಡುತ್ತಿದ್ದರು. ಇಂದು ಭಾರತದಲ್ಲಿ ಜನಸಂಖ್ಯೆ ಸುಮಾರು 140 ಕೋಟಿಗಿಂತಲೂ ಅಧಿಕವಾಗುತ್ತಿದೆ ಅದರಲ್ಲಿಯೂ 55 ವಯಸ್ಸಿಗೆ ಮೀರಿದವರೇ ಅಧಿಕವಾಗಿದ್ದಾರೆ.ಅವರಿಗೆ ದೇಶಕ್ಕೆ ಉತ್ತಮ ಸಂಪನ್ಮೂಲವಾಗುವ ಹುಮ್ಮಸ್ಸು, ಮನಸ್ಸು, ಅನುಭವಗಳಿದ್ದರೂ ಸಂಧಿವಾತ ಹಾಗೂ ಎಲುಬಿನ ಸಾಂದ್ರತೆಗಳಂತಹ  ರೋಗಕ್ಕೆ ಒಳಗಾಗುತ್ತಿರವದು ನಿಜಕ್ಕೂ ಖೇದಕರವಾಗಿದೆ. ಆದ್ದರಿಂದ ಎಲುಬುಕೀಲುಗಳ ಆರೈಕೆಯ ಬಗ್ಗೆ ಇಂದಿನಿಂದಲೇ ಕಾಳಜೀ ವಹಿಸಿ ಎಂದು ಎಚ್ಚರಿಸಿದರು. 

ಕಾರ್ಯಕ್ರಮದಲ್ಲಿ ಒಸ್ಟಿಯೊಪೊರೊಸಿಸ್ ಬಗ್ಗೆ ಹೆಸರಾಂತ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರಾದ ಡಾ. ಸತೀಶ ದಾಮಣಕರ ಉಪನ್ಯಾಸ ಮಂಡಿಸಿದರು. ರುಮಟಾಯ್ಡ ಅಥ್ರೈರ್ಟಿಸ ಬಗ್ಗೆ  ಕೆ ಎಲ್ ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಹೆಸರಾಂತ ವೈದ್ಯ ಡಾ. ಪ್ರವೀಣ ಜೈನ್ ಉಪನ್ಯಾಸ ಮಂಡಿಸಿದರು. 

ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ್ದ ಹಿರಿಯ ಎಲುಬು ಕೀಲು ವೈದ್ಯರಾದ ಡಾ. ಬಿ ಬಿ ಪುಟ್ಟಿ ಅವರು ಮಾತನಾಡುತ್ತ ಇಂದು ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗಗಳಷ್ಟೇ ಮಧುಮೇಹ ,ರಕ್ತದೊತ್ತಡ, ಸಂಧಿವಾತ ಹಾಗೂ ಎಲುಬಿನ ಸಾಂದ್ರತೆಯನ್ನು ಕಳೆದುಕೊಳ್ಳುವ ರೋಗಗಳು ಭೀತಿಯನ್ನು ಹೊಂದಿವೆ. ಅದರಲ್ಲಿಯೂ ಸಂಧಿವಾತ ಹಾಗೂ ಎಲುಬಿನ ಸಾಂದ್ರತೆಯನ್ನು ಕಳೆದುಕೊಳ್ಳುವ ರೋಗಕ್ಕೆ ಇಂದು ಅಲ್ಪ ಸಮಯದ ನೋವು ನಿವಾರಕಗಳ ಮೊರೆ ಹೋಗುವದು ಸಹಜವಾಗಿದೆ. ಹಾಗೆ ಮಾಡದೇ ಇಂತಹ ಸಮಸ್ಯೆಗಳನ್ನು ಹೊಂದಿರುವವರು ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವದು ಅತ್ಯುತ್ತಮವಾಗಿದೆ. ಅದರಲ್ಲಿ ಇವುಗಳಿಗೆ ಚಿಕಿತ್ಸೆಯೆಂಬತೆ ಮೊಣಕಾಲು ಬದಲಾವಣೆ, ಛಪ್ಪೆ ಬದಲಾವಣೆಯ ಚಿಕಿತ್ಸೆಗಳನ್ನು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಅತ್ಯುತ್ತಮವಾಗಿ ನಿರ್ವಹಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್ ಸಿ ಧಾರವಾಡ ಅವರು ಮಾತನಾಡುತ್ತ ಸಂಧಿವಾತ ಹಾಗೂ ಒಸ್ಟಿಯೊಪೊರೊಸಿಸ್ ಎಂಬುದು ಎಲುಬಿನಲ್ಲಿ ಕ್ಯಾಲ್ಸಿಯಂ ಹಾಗೂ ಇನ್ನಿತರ ಪೌಷ್ಟಿಕಾಂಶಗಳ ಕೊರತೆಯಿಂದ ಉಂಟಾಗಬಹುದಾದ ರೋಗವಾಗಿದೆ. ಪ್ರತಿ ವರ್ಷ ಜಾಗತಿಕ ಮಟ್ಟದಲ್ಲಿ 12 ನೇ ಅಕ್ಟೋಬರ ರಂದು ವಿಶ್ವ ಸಂಧಿವಾತ ದಿನಾಚರಣೆ ಹಾಗೂ ಅಕ್ಟೋಬರ್ 20 ರಂದು ಒಸ್ಟೊಯೊಪೊರೊಸಿಸ್ ದಿನಾಚರಣೆಯನ್ನು  ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಆಚರಿಸಲಾಗುತ್ತದೆ. ಆದರೆ ಇಂದು ನಮ್ಮ ಆಸ್ಪತ್ರೆಯ ಎಲುಬು ಕೀಲು ವಿಭಾಗದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ನಿಜಕ್ಕೂ ಹರ್ಷ ತಂದಿದೆ.  ಮಹಿಳೆಯರಲ್ಲಿ ಎಲುಬಿನ ಸಾಂದ್ರತೆಯನ್ನು ಕಳೆದುಕೊಳ್ಳುವದು ಸಾಮಾನ್ಯವಾಗಿ ನಾವು ಕಾಣಬಹುದು. ನಮ್ಮ ಭಾರತದಲ್ಲಿ ಪ್ರತಿ ಮೂರರಲ್ಲಿ ಒಬ್ಬರಿಗೆ ಎನ್ನುವಂತೆ ಸ್ತ್ರೀಯರಲ್ಲಿ ಈ ಸಮಸ್ಯೆ ಕಾಣಬಹುದಾಗಿದೆ. ಇದಕ್ಕೆ ಕಾರಣವೆಂಬಂತೆ ಹೆರಿಗೆ, ಋತುಸ್ರಾವದ ನಿಲ್ಲುವಿಕೆ, ದೇಹಕ್ಕೆ ತಕ್ಕ ವ್ಯಾಯಾಮದ ಕೊರತೆ, ಕೆಲಸದ ಒತ್ತಡಗಳು ಹೀಗೆ ಅನೇಕ ಕಾರಣಗಳು ಇದಕ್ಕೆ ಪುಷ್ಟೀಕರಿಸಬಹುದಾಗಿದೆ. ಆದ್ದರಿಂದ ಎಲ್ಲ ಸ್ತ್ರೀಯರು ತಮ್ಮ ಎಲುಬುಕೀಲುಗಳ ಸಮಸ್ಯೆಗಳಿಗೆ ವೈದ್ಯರನ್ನು ಕಂಡು ತಕ್ಕ ಚಿಕಿತ್ಸೆ ಪಡೆದುಕೊಳ್ಳುವದು ಅತ್ಯುತ್ತಮ ದಾರಿಯಾಗಿದೆ ಎಂದು ತಿಳುವಳಿಕೆ ನೀಡಿದರು. 

ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಎಲುಬು ಕೀಲು ವಿಭಾಗದ ಮುಖ್ಯಸ್ಥರಾದ ಡಾ. ವಿ ಜಿ ಮುರಕಿಬಾವಿಯವರು ಪ್ರಾಸಂಗಿಕವಾಗಿ ಮಾತನಾಡಿದರು.  

ಉದ್ಘಾಟನಾ ಕಾರ್ಯಕ್ರಮದ ಮೊದಲು ಸಂಧಿವಾತ ಹಾಗೂ ಎಲುಬಿನ ಸಾಂದ್ರತೆಯ ಜಾಗೃತಿ ದಿನಾಚರಣೆ ನಿಮಿತ್ತವಾಗಿ ಜಾಗೃತಿ ಜಾಥಾ ಕಾರ್ಯಕ್ರಮವನ್ನು ನಗರದ ವಡಗಾವಿಯ ಪಿಂಪಳಕಟ್ಟಾದಿಂದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ವರೆಗೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕರಾದ ಡಾ.ಎಸ್ ಸಿ ಧಾರವಾಡ ಅವರಿಂದ ಉದ್ಘಾಟನೆ ಮಾಡಲಾಯಿತು. ಜಾಥಾ ಸಮಯದಲ್ಲಿ ಸಂಧಿವಾತ ಹಾಗೂ ಎಲುಬಿನ ಸಾಂದ್ರತೆಯ ಜಾಗೃತಿ ಕುರಿತು ಘೋಷಗಳನ್ನು ಘೋಷಿಸಲಾಯಿತು. 

ಸಂಧಿವಾತ ಹಾಗೂ ಎಲುಬಿನ ಸಾಂದ್ರತೆಯಜಾಗೃತಿ ದಿನಾಚರಣೆ ನಿಮಿತ್ತವಾಗಿ ಉಚಿತ ಎಲುಬಿನ ಸಾಂದ್ರತೆಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ 83 ನಾಗರಿಕರಿಗೆ ಉಚಿತವಾಗಿ ಎಲುಬಿನ ಸಾಂದ್ರತೆ ತಪಾಸಣೆ ಮಾಡಲಾಯಿತು. 

ಕಾರ್ಯಕ್ರಮವನ್ನು ಯುವ ಎಲುಬು ಕೀಲು ವೈದ್ಯ  ಡಾ. ಮುರುಘೇಶ ಕುರನಿ ನಿರೂಪಿಸಿವಂದಿಸಿದರು. ಆಸ್ಪತ್ರೆಯ ಎಲುಬು ಕೀಲು ವಿಭಾಗದ ಮುಖ್ಯಸ್ಥರಾದ ಡಾ. ವಿ ಜಿ ಮುರಕಿಬಾವಿ ಸ್ವಾಗತಿಸಿದರು.  

ಕಾರ್ಯಕ್ರಮದಲ್ಲಿ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಎಲುಬು ಕೀಲು ವಿಭಾಗದ ಮುಖ್ಯಸ್ಥರಾದ ಡಾವಿ ಜಿ ಮುರಕಿಬಾವಿ, ಎಲುಬು ಕೀಲು ಶಸ್ತ್ರಚಿಕಿತ್ಸಕರಾದ ಡಾ.ಅಮಿತ ಪಿಂಗಟ್, ಡಾ.ಜಗದೀಶ ಸುರಣ್ಣವರ, ಡಾ. ಸಿ ವಿ ಶೆಟ್ಟರ, ಡಾ. ಶಾಕೀಬ, ಡಾ. ಆನಂದಖಟಾವಿ, ಜನರಲ್ ಮೆಡಿಸಿನ್ ವಿಬಾಗದ ಮುಖ್ಯಸ್ಥರಾದ ಡಾಶ. ಶ್ರೀನಿವಾಸ ಬಿ, ಜನರಲ್ ಸರ್ಜರಿ ವಿಭಾಗದ ಮುಖ್ಯಸ್ಥರಾದ ಡಾ. ಅನಂತರಡ್ಡಿ ರಡ್ಡೇರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೆ ಎಲ್ ಇ ಹೊಮಿಯೊಪಾಥಿಕ ಕಾಲೇಜಿನ 40 ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಕೆ ಎಲ್ ಇ ಸೆಂಟಿನರಿ ಇನ್ಸಿ-್ಟಟ್ಯುಟ್ ಆಫ ನರ್ಸಿಂಗ ಸೈನ್ಸ ನ 50 ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಸಮಸ್ತ ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿ  ಭಾಗವಹಿಸಿದ್ದರು.