ವಿಶ್ವ ಏಡ್ಸ್‌ ಜಾಗೃತಿ ದಿನ ಜನಜಾಗೃತಿ ಕಾ0ುರ್ಕ್ರಮ ಏಡ್ಸ್‌ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರೂ ಪಣ ತೊಡೋಣ

World Aids Awareness Day Janjagriti Kaurkarma Let's all contribute to make the district AIDS free.

ವಿಶ್ವ ಏಡ್ಸ್‌ ಜಾಗೃತಿ ದಿನ ಜನಜಾಗೃತಿ ಕಾ0ುರ್ಕ್ರಮ  ಏಡ್ಸ್‌ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರೂ ಪಣ ತೊಡೋಣ  

ಗದಗ07: ಗದಗ ಜಿಲ್ಲೆಯನ್ನು ಏಡ್ಸ್‌ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರೂ ಪಣ ತೊಡಬೇಕು ಎಂದು  ರಾಜ್ಯದ ಕಾನೂನು, ನ್ಯಾ0ು, ಮಾನವ ಹಕ್ಕುಗಳು, ಸಂಸದೀ0ು ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಕೆ.ಪಾಟೀಲ ಅವರು ಹೇಳಿದರು. 

ನಗರದ ಡಿಜಿಎಂ ಆ0ುುರ್ವೇದ ಕಾಲೇಜನಲ್ಲಿ ಶನಿವಾರ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾ0ುತ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್‌ ತಡೆಗಟ್ಟುವಿಕೆ ಮತ್ತು ನಿ0ುಂತ್ರಣ ಘಟಕ,ಜಿಲ್ಲಾ ವಾರ್ತಾ ಮತ್ತು ಪ್ರಸಾರ ಇಲಾಖೆ,ಜಿಮ್ಸ್‌ ರಕ್ತ ನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ,ಬಸವೇಶ್ವರ ಪ್ರಾರಾ ಮೆಡಿಕಲ್ ಕಾಲೇಜ,ಗಾಂಧೀಜಿ ಪ್ಯಾರಾ ಮೆಡಿಕಲ್ ಕಾಲೇಜ,ಪಾಲನಗಾಲಾ ನರ್ಸಿಂಗ್ ಕಾಲೇಜ,ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ,ಆ0್‌.ಎಂ.ಎ ರಕ್ತ ಭಂಡಾರ,ರಕ್ಷಣೆ ಜಿಲ್ಲಾ ಮಹಿಳಾ ಒಕ್ಕೂಟ,ಸೃಷ್ಟಿ ಸಂಕುಲ ಸಂಸ್ಥೆ, ನವಚೆತನ ಸಂಸ್ಥೆ,ಚೈತನ್ಯ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ,ಶ್ರೀ ಡಿಜಿಎಂ ಆ0ುುರ್ವೇದ ವೈದ್ಯಕೀ0ು ಮಹಾವಿದ್ಯಾಲ0ು ಹಾಗೂ ರೆಡ್ ರಿಬ್ಬನ್ ಕ್ಲಬ್  ಇವರುಗಳ ಸಂ0ುುಕ್ತ ಆಶ್ರ0ುದಲ್ಲಿ ಜರುಗಿದ ವಿಶ್ವ ಏಡ್ಸ್‌ ಜಾಗೃತಿ ದಿನ ಜನಜಾಗೃತಿ ಕಾ0ುರ್ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಸಮಾಜದಲ್ಲಿ ಏಡ್ಸ ಸೋಂಕಿಗೆ ತುತ್ತಾದವರನ್ನು  ಗುರುತಿಸಿ  ಜಾಗೃತಿ ಮೂಡಿಸಿ  ಅನುಮಾನ ಅವಮಾನ ಮಾಡದೇ ಅವರನ್ನು ಗೌರವದಿಂದ ಕಾಣಬೇಕು. ವಿಶ್ವ ಏಡ್ಸ ಜಾಗೃತಿ ದಿನಾಚರಣೆ ಕಾ0ುರ್ಕ್ರಮದ ವರ್ಷದ ಘೋಷ ವಾಕ್ಯವಾದ “ಸರಿ0ಾದ ಮಾರ್ಗದಲ್ಲಿ ಹಕ್ಕುಗಳನ್ನು ಪಡೆ0ೋಣ,ನನ್ನ ಆರೋಗ್ಯ ನನ್ನ ಹಕ್ಕು”  ಎಂಬುದು  ನಿಜವಾಗಿ0ುೂ    ಎಲ್ಲರನ್ನು ಜಾಗೃತರನ್ನಾಗಿಸುತ್ತದೆ. ಈ ರೋಗ 10-15 ವರ್ಷದ ಹಿಂದೆ ಜಗತ್ತನ್ನು ತಲ್ಲಣಗೊಳಿಸಿತ್ತು, ಭಾರತದ ಬಿಸಿಲು ಇರುವ  ಪ್ರದೇಶದ ಜನಾಂಗದಲ್ಲಿ ಈ ಸೋಂಕು ಜಾಸ್ತಿ ಕಾಣಿಸಿಕೊಂಡಿದ್ದು, ರೈಲು ಅಥವಾ ಸಾರ್ವಜನಿಕವಾಗಿ ಪ್ರ0ಾಣ ಮಾಡುವಾಗ ಎಲ್ಲರಿಗೂ ಭ0ು ಹುಟ್ಟಿಸಿ,ಏಡ್ಸ ರೋಗವು ಎಲ್ಲರನ್ನು ನಿರ್ನಾಮ  ಮಾಡುತ್ತದೆ ಎನ್ನುವ ಊಹೆಗೆ ತಲುಪಿತ್ತು, 

ಈಗಿನ ಅತ್ಯಾಧುನಿಕ ಚಿಕಿತ್ಸೆ, ಉಪಚಾರ,  ಭಾರತೀ0ು ವೈದ್ಯ ಪದ್ಧತಿಗಳು ನಿ0ುಂತ್ರಣ ಮತ್ತು ನಿರ್ಮೂಲನೆಗೆ ದೊಡ್ಡ ಕೊಡುಗೆ ನೀಡಿದೆ. ಏಡ್ಸ ರೋಗಕ್ಕೆ ಓಷಧಿ ಕಂಡುಹಿಡಿ0ುಲು ಶ್ರಮಿಸಿದ ಎಲ್ಲರಿಗೂ ಅತ್ಯಂತ ಋಣಿ ಆಗಿರಬೇಕು ಎಂದು  ಅಭಿನಂದನೆ ಸಲ್ಲಿಸಿದರು. 

ಏಡ್ಸ ನಿರ್ಮೂಲನೆಗೆ ಜಿಲ್ಲೆ0ು ತನ್ನದೆ ಆದ ಕೊಡುಗೆ ನೀಡಿದೆ. ಕಳೆದ 10 ವರ್ಷಗಳಲ್ಲಿ ಭವಿಷ್ಯದ  ನಾಗರಿಕನಾದ ಯಾವೊಂದು ನವ ಶಿಶುವಿಗೂ ಏಡ್ಸ ಸೊಂಕು ಪಾಲಕರಿಂದ ತಗುಲದ ರೀತಿ0ುಲ್ಲಿ  ನೋಡಿಕೊಂಡಿದ್ದಾರೆ.ಜಿಲ್ಲಾ ಏಡ್ಸ್‌ ತಡೆಗಟ್ಟುವಿಕೆ ಮತ್ತು ನಿ0ುಂತ್ರಣ ಘಟಕ  ಸೇರಿದಂತೆ ಏಡ್ಸ ಮುಕ್ತ ಜಿಲ್ಲೆ0ುನ್ನಾಗಿಸಲು ಎಲ್ಲರೂ ಶ್ರಮಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. 

ಏಡ್ಸ ಕುರಿತು ಜಾಗೃತಿ ಮೂಡಿಸಲು ಮೆಡಿಕಲ್ ಶಾಲಾ ಕಾಲೇಜು, ಸೇವಾ ತಂಡಗಳ ಪಾತ್ರ ಬಹಳವಿದೆ, ಯೋಜನೆ ತಯಾರಿಸಿ ಬೃಹತ್ ಕಾ0ುರ್ಕ್ರಮವನ್ನು ಆ0ೋಜಿಸಿ ಸಾರ್ವಜನಿಕರನ್ನು ಜಾಗೃತರನ್ನಾಗಿಸಬೇಕು. ಅದಕ್ಕೆ ಬೇಕಾದ ಎಲ್ಲಾ ಸಹಕಾರ ಸರ್ಕಾರದಿಂದ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.   

ಡಿಎಚ್‌ಓ ಎಸ್‌ಎಸ್ ನೀಲಗುಂದ ಮಾತನಾಡಿ ಜಿಲ್ಲೆಯಲ್ಲಿ ಏಡ್ಸ ಸೊಂಕಿಗೆ ತುತ್ತಾದವರ ಚಿಕಿತ್ಸೆಗೆ 8 ಐಸಿಟಿಸಿ ಕೇಂದ್ರಗಳಲ್ಲಿ ಎಲ್ಲಾ ರೀತಿ0ು ಮೂಲ ಸೌಕ0ುರ್ಗಳು ಲಭ್ಯವಿದೆ ಹಾಗೂ ಏಡ್ಸ ಮುಕ್ತ ಜಿಲ್ಲೆ0ುನ್ನಾಗಿಸಲು ಎಲ್ಲರೂ  ಪ್ರಾಮಾಣಿಕ ಕೆಲಸ ಮಾಡುತ್ತಿದ್ದೇವೆ ಹಾಗೂ  100 ದಿನಗಳ  ಟಿಬಿ ಕುರಿತು ಅಭಿ0ಾನ ಕಾ0ುರ್ಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಸದುಪ0ೋಗ ಪಡೆದುಕೊಳ್ಳಬೇಕೆಂದರು.ಜಿಲ್ಲಾ ಏಡ್ಸ್‌ ನಿ0ುಂತ್ರಣಾಧಿಕಾರಿ ಡಾ.ಅರುಂಧತಿ ಕುಲಕರ್ಣಿ ಮಾತನಾಡಿ ಇಲಾಖೆ0ು ಹಲವಾರು ಜಾಥಾ ಹಾಗೂ ಜಾಗೃತಿ ಕಾ0ುರ್ಕ್ರಮಗಳಿಂದ ಎಚ್‌ಐವಿ ಸೊಂಕಿನ ಪ್ರಮಾಣ ಕಳೆದ ಹತ್ತು ವರ್ಷಗಳಲ್ಲಿ ಗಣನೀ0ುವಾಗಿ ಇಳಿಕೆ ಕಂಡಿದೆ, ಎಚ್‌ಐವಿ ಸೊಂಕಿತರು ಭ0ು ಪಡದೆ ಆಪ್ತಸಮಾಲೋಚಕರಿಂದ ನೈತಿಕ ಹಾಗೂ ಮಾನಸಿಕ ಬೆಂಬಲ ಸಾಮಾನ್ಯ ಜೀವನ ನಡೆಸಬೇಕು ಎಂದು ಹೇಳಿದರು. 

ಇದೇ ಸಂದರ್ಭದಲ್ಲಿ ಗದಗ ಜಿಲ್ಲೆ0ುಲ್ಲಿ ಹೆಚ್‌ಐವಿ ನಿ0ುಂತ್ರಣದಲ್ಲಿ ಉತ್ತಮ ಸೇವೆ ಸಲ್ಲಿಸಿದ ವಿವಿಧ ತಾಲೂಕಿನ ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಕ್ಬರ್‌ಸಾಬ ಬಬರ್ಚಿ, ಅಶೋಕ ಮಂದಾಲಿ, ಬಿಎಸ್‌ಪಾಟೀಲ, ಕಾಲೇಜಿನ ಪ್ರಾಚಾ0ುರ್, ಸಂತೋಷ ಬೆಳವಡಿ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಬಿಸಿ ಕರಿಗೌಡರ, ಡಾ.ಸಾಮುದ್ರಿ ಸತೀಶ ಘಾಟಗೆ, ಡಾ.ಪ್ರೀತ ಖೋನಾ, ಡಾ.ಮಹ್ಮದ್ ಅಶ್ರಫ್ ಉಲ್ , ಡಾ.ಮಹೇಶ ಕೊಪ್ಪಳ, ಡಾ. ಬೂದೇಶ, ವಿದ್ಯಾರ್ಥಿಗಳು ಹಾಜರಿದ್ದರು. 

ಬಸವರಾಜ ಲಾಲಗಟ್ಟಿ ಸ್ವಾಗತಿಸಿದರು. ಕು ಭೂಮಿಕಾ ತೈ0ುಬಾ ಕಾ0ುರ್ಕ್ರಮ ನಿರೂಪಿಸಿದರು.ಕಾ0ುರ್ಕ್ರಮಕ್ಕೂ ಮುನ್ನ ವಿಶ್ವ ಏಡ್ಸ್‌ ಜಾಗೃತಿ ದಿನ ಜನಜಾಗೃತಿ ಜಾಥಾಕ್ಕೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾ0ುರ್ದರ್ಶಿ ಸಿಎಸ್ ಶಿವನಗೌಡ್ರ ಅವರು ಜಾಥಾಗೆ ಚಾಲನೆ ನೀಡಿದರು. ಜಾಥಾವು ನಗರದ ಪ್ರಮುಖ ವೃತ್ತಗಳಲ್ಲಿ ಸಂಚರಿಸಿ ಸಾರ್ವಜನಿಕರಗೆ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಜೈ ಭೀಮ ಕಲಾತಂಡದಿಂದ ಹೆಚ್‌ಐವಿ ಬಗ್ಗೆ ಅರಿವು ಮೂಡಿಸುವ ಹಾಡುಗಳನ್ನು ಹಾಡುತ್ತ ಜಾಥಾ ದಲ್ಲಿ ಪಾಲ್ಗೊಂಡಿದ್ದರು.