ಬೆಂಗಳೂರು, ಮೇ 20,ಬೆನ್ನು ನೋವು ಮಸಾಜ್ ಮಾಡುವುದಕ್ಕೆ ಪ್ರಪಂಚದ ಮೊದಲ ರೋಬೋಟ್ ‘ವ್ಹೀಮಿ 2020’ ಅನ್ನು ಮಿಲಾಗ್ರೋ ಸಂಸ್ಥೆಯು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮಿಲಾಗ್ರೋ ದೇಶದ ನಂಬರ್ ಒನ್ ಗ್ರಾಹಕ ರೋಬೋಟಿಕ್ಸ್ ಸಂಸ್ಥೆಯಾಗಿದ್ದು ಗ್ರಾಹಕರ ಅನುಕೂಲಕ್ಕಾಗಿ ಈ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.ಗ್ರಿಪ್ ಬಿಗುವಾಗಿರಲಿ ಎನ್ನುವ ಉದ್ದೇಶದಿಂದ ಟಿಲ್ಟ್ ಸೆನ್ಸಾರ್ ತಂತ್ರಜ್ಞಾನವನ್ನು ಇದರಲ್ಲಿ ಅಳವಡಿಸಲಾಗಿದೆ. ಇದರಿಂದ ರೋಬೋಟ್ 45 ಡಿಗ್ರಿಯಲ್ಲಿ ಹಿಡಿದಿಟ್ಟಿಕೊಂಡರೂ ಕೆಳಗೆ ಬೀಳುವುದಿಲ್ಲ. ಮಿಲಾಗ್ರೋ ವ್ಹೀಮೆ 2020 ನಿಧಾನವಾಗಿ ಮಸಾಜ್ ಮಾಡುತ್ತದೆ ಮತ್ತು ಬೆನ್ನುನೋವಿನಿಂದ ಬಳಲುತ್ತಿರುವವರಿಗೆ ಇದು ಹೆಚ್ಚು ಪರಿಣಾಮಕಾರಿಯಾಗಿದೆ. ಇದರ ಮೂಲ ಬಲೆ 11,990 ರೂ ಆಗಿದೆ. ಕ್ರೌಡ್ ಫಂಡಿಂಗ್ ಮಾಡಿ ಇದನ್ನು ಕೇವಲ 2,990 ರೂ ಮಾರಾಟ ಮಾಡಲಾಗುವುದು. ಮೇ 14 ರಿಂದ 21 ರ ತನಕ ಕ್ರೌಡ್ ಫಂಡಿಂಗ್ ಸಾರ್ವಜನಿಕರಿಗಾಗಿ ಇರುತ್ತದೆ.
“ನಮ್ಮನ್ನು ಮತ್ತು ನಮ್ಮ ಪ್ರೀತಿಪಾತ್ರರನ್ನು ರಕ್ಷಿಸಲು ನಾವು ಮನೆಯೊಳಗೆ ಇರಬೇಕಾದ ಸಮಯದಲ್ಲಿ ‘ವ್ಹೀಮಿ 2020’ ರೋಬೋಟ್ ಬೆನ್ನು ನೋವಿನಿಂದ ಬಳಲುತ್ತಿರುವವರಿಗೆ ಅನುಕೂಲಕಾರಿ. ಇತರ ಸ್ನಾಯು ನೋವುಗಳಿಗೂ ಕೂಡ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಕ್ರೌಡ್ ಫಂಡಿಂಗ್ ಮಾದರಿಯ ಮೂಲಕ ಅಡ್ಡಿಪಡಿಸಿದ ಪೂರೈಕೆ ಸರಪಳಿಯನ್ನು ತ್ವರಿತವಾಗಿ ಪುನಃಸ್ಥಾಪಿಸಲಾಗುತ್ತದೆ ಮತ್ತು ಬೆಲೆ ಮಿತಿಗಳನ್ನು ತಗ್ಗಿಸಲಾಗುವುದು” ಎಂದು ಮಿಲಾಗ್ರೋ ರೋಬೋಟ್ಸ್ ಸಂಸ್ಥೆಯ ಸಂಸ್ಥಾಪಕ ರಾಜೀವ್ ಕಾರ್ಮಾಲ್ ಹೇಳಿದರು."ಸಾಂಕ್ರಾಮಿಕ ರೋಗದ ನಂತರದ ಜಗತ್ತಿನಲ್ಲಿ ರೋಬೋಟ್ ಗಳು ನಮ್ಮ ದೈನಂದಿನ ಜೀವನದ ಅತ್ಯಗತ್ಯ ಭಾಗವಾಗಿ ಪರಿಣಮಿಸುತ್ತದೆ. ಮನೆಕೆಲಸಕ್ಕಾಗಿ ಅಥವಾ ವೃತ್ತಿಪರ ಪರಿಸರದಲ್ಲಿ ಪುನರಾವರ್ತಿತ ಉದ್ಯೋಗಗಳಾಗಿರಬಹುದು. ಕ್ರೌಡ್ ಫಂಡಿಂಗ್ ಸುಧಾರಿತ ತಂತ್ರಜ್ಞಾನದ ಸಹಾಯದಿಂದ ಉದ್ಯಮವು ವಿಕಸನಗೊಳ್ಳಲು ಮತ್ತು ಸಂಬಂಧಿತ ಉತ್ಪನ್ನಗಳನ್ನು ರಚಿಸಲು ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದರು.