ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಾಂಶದ ಅವಕಾಶ, ಸವಾಲು ಕಾರ್ಯಾಗಾರ

Workshop on the opportunities and challenges of artificial intelligence software in education

ಲೋಕದರ್ಶನ ವರದಿ 

ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಾಂಶದ ಅವಕಾಶ, ಸವಾಲು ಕಾರ್ಯಾಗಾರ 


ವಿಜಯಪುರ 03: ಪ್ರಸ್ತುತ ನೂತನ ರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಕ್ರಮಕ್ಕನುಗುಣವಾಗಿ ಅಗತ್ಯವಾದ ವಿಷಯ ಜ್ಞಾನ, ಇ-ಸಂಪನ್ಮೂಲ ಮತ್ತು ಕಲಿಕಾ ಸಾಮಗ್ರಿಗಳನ್ನು ಪಡೆಯಲು ಮೆಟಾ ಕೃತಕ ಬುದ್ದಿಮತ್ತೆ ತಂತ್ರಾಂಶವು ಬಹಳ ಉಪಯುಕ್ತವಾಗಿದೆ. ವಿಷಯದಲ್ಲಾಗುವ ನಾವಿನ್ಯತೆ, ಹೊಸತನ, ಅವಿಷ್ಕಾರ ಮತ್ತು ಸಂಶೋಧನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಸಂಗ್ರಹಿಸುವಲ್ಲಿ ಇದು ಅತಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಶಿಕ್ಷಕರು ಬೋಧಿಸುವ ವಿಷಯದಲ್ಲಿ ಸಮಯನ್ವಯತೆ ಸಾಧಿಸಿ, ಬೋಧನೆ-ಕಲಿಕೆಯಲ್ಲಿ ಸಾಮರಸ್ಯತೆಯನ್ನು ಹೊಂದಲು ಮೆಟಾ ಎ.ಐ ಸಾಫ್ಟವೇರ್ ಪರಿಣಾಮಕಾರಿ ಸಾಧನವಾಗಿ ಬಳಕೆಯಾಗುತ್ತಿದೆ ಎಂದು ವಾಣಿಜ್ಯಶಾಸ್ತ್ರ ಸಹ ಪ್ರಾಧ್ಯಾಪಕ ಎಂ.ಎಸ್‌.ಖೊದ್ನಾಪೂರ ಅವರು ಅಭಿಪ್ರಾಯಪಟ್ಟರು. 

ಅವರು ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಿದ ಶಿಕ್ಷಣದಲ್ಲಿ ಕೃತಕ ಬುದ್ದಿಮತ್ತೆ ತಂತ್ರಾಂಶದ ಅವಕಾಶಗಳು ಮತ್ತು ಸವಾಲುಗಳು ವಿಷಯ ಕುರಿತ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದರು.  

ಎಜ್ಯುಟೆಕ್ ಹಬ್ ಶಿಕ್ಷಣ ತಂತ್ರಜ್ಞಾನದಲ್ಲಿ ಆಗುತ್ತಿರುವ ಬದಲಾವಣೆಗಳು, ಸಂಶೋಧನೆ, ನಾವಿನ್ಯತೆ, ಅವಿಷ್ಕಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿಷಯಲ್ಲಿ ಆಳವಾದ ಜ್ಞಾನ, ಬೋಧನೆ, ಕಲಿಕಾ ಮಾರ್ಗಸೂಚಿಗಳು ಮತ್ತು ವೃತ್ತಿಪರವಾದ ಸಂಸ್ಥೆಗಳು ಬಿಡುಗಡೆ ಮಾಡುವ ಇ-ಸಂಪನ್ಮೂಲವನ್ನು ಪಡೆಯಲು ಜಾಗತಿಕ ವೇದಿಕೆಯಾಗಿದೆ. ಶಿಕ್ಷಣದಲ್ಲಿ ವಿವಿಧ ಮಜಲುಗಳಲ್ಲಿ, ಸ್ತರಗಳಲ್ಲಿ ನಡೆಯುವ ವಿನೂತನ ಮತ್ತು ಬದಲಾದ ವ್ಯವಸ್ಥೆಗೆ ಹೊಂದಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ರೂಪಿಸಲು ಕೃತಕ ಬುದ್ಧಿಮತ್ತೆಯು ಪಠ್ಯಕ್ರಮಕ್ಕನುಗುಣವಾಗಿ ಅಗತ್ಯವಾದ ಎ-ಸಂಪನ್ಮೂಲ, ಇಮೇಜ್, ವಿಡಿಯೋ ಲೆಕ್ಚರ್, ಎಂ.ಎಸ್‌. ಪಾವರ್ ಪಾಂಯಿಟ್, ಆನಲೈನ್ ತರಗತಿ ಕ್ಲಾಸ್, ಶ್ರವಣ ಮತ್ತು ದೃಶ್ಯ ಮಾಧ್ಯಮಗಳಿಂದ ಉಪಯುಕ್ತ ಮಾಹಿತಿ ದೊರೆಯಲಿದೆ ಎಂದರು. ಇತ್ತೀಚಿನ ದಿನಗಳಲ್ಲಿ ಘಿಬ್ಲಿ ಹೆಸರಿನ ಎನಿಮೇಶನ್ ಎ.ಐ ತಂತ್ರಾಂಶವುನ ಅಘಾತಕಾರಿಯಾಗಿದ್ದು, ಅಹಿತಕರ ಘಟನೆ ಅಥವಾ ಸೈಬರ್ ಕ್ರೈಂ ಪ್ರಕರಣಗಳಲ್ಲಿ ತೊಡಗಿದ ಕೆಲವು ಹ್ಯಾಕರ​‍್ಸ‌ ಬಳಕೆದಾರರಿಂದ ಅಗತ್ಯ ಮಾಹಿತಿ, ದತ್ತಾಂಶ ಮತ್ತು ಹಣಕಾಸಿನ ವಿವರಗಳನ್ನು ಕದ್ದು, ವಂಚಿಸುವ ಪ್ರಕರಣಗಳು ಬೆಳಕಿಗೆ ಬಂದಿವೆ. ಆದ್ದರಿಂದ ವಿದ್ಯಾರ್ಥಿಗಳು ಎ.ಐ. ಪೂರಕ ತಂತ್ರಾಂಶವನ್ನು ಬಳಕೆ ಮಾಡುವಾಗ ಬಹಳ ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕು ಮತ್ತು ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಅನವಶ್ಯಕವಾಗಿ ಪ್ರತಿಕ್ರಿಯೆ ನೀಡಬಾರದು ಎಂದು ಸಲಹೆ ನೀಡಿದರು. 

ಪ್ರೊ. ವಲ್ಲಭ ಕಬಾಡೆ, ಡಾ. ರಾಜಶ್ರೀ ಮಾರನೂರ, ಡಾ. ರೋಹಿಣಿ ಹಿರೇಶೆಡ್ಡಿ ಇನ್ನಿತರರು ಸಹ ಉಪಸ್ಥಿತರಿದ್ದರು. ಈ ಕಾರ್ಯಾಗಾರದಲ್ಲಿ ಕಾಲೇಜಿನ ಬಿ.ಕಾಂ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.