ಬೆಳಗಾವಿ 24: ಎಸ್.ಜಿ.ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿ. 24ರಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಗಳ ಸಹಯೋಗದೊಂದಿಗೆ ಬೌದ್ಧಿಕ ಆಸ್ತಿ ಸಾಮ್ಯ ಕುರಿತು ಒಂದು ದಿನದ ಕಾರ್ಯಾಗಾರದ ಉದ್ಘಾಟನಾ ಸಮಾರಂಭ ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಲಾಸಿದ ಸಂಪನ್ಮೂಲ ವ್ಯಕ್ತಿ ಅಡ್ವಿಕೇಟ ಗಣೇಶ ಹಿಂಗಮೇರಿ ಸೋಸಥಾಪಕ ಅದ್ಯಕ್ಷರು ಗ್ರೇಟ್ ಮಶನ್ ಗ್ರೂಪ ಕನ್ಸಲ್ಟಂಟ ಪೂಣೆ ಮಾತನಾಡುತ್ತ ಇಂದು ನಾವು ಬೆಳಗಿನಿಂದ ರಾತ್ರಿಯವರಿಗೆ ಉಪಯೋಗಿಸುವ ಪ್ರತಿಯೊಂದು ವಸ್ತುವು ಸಹ ಇಂದು ಹಕ್ಕು ಸಾಮ್ಯದಡಿ ನೊಂದಾಯಿಸಲ್ಪಟ್ಟಿದೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕೆ ಎಲ್ ಇ ಯು.ಎಸ್ .ಎಮ. ನೀದರ್ೆಶಕರಾದ ಡಾ. ಎಚ್. ಬಿ ರಾಜಶೇಖರ ಮಾತನಾಡುತ್ತಾ ನಮ್ಮ ಪೂರ್ವಜರು ಅನೇಕ ವರ್ಷಗಳಿಂದ ವಿವಿಧರಿತಿಯ ವಸ್ತುಗಳನ್ನು ಉಪಯೊಗಿಸುತಿದ್ದು, ಜ್ಞನವು ಕೇವಲ ಒಬ್ಬರ ಹಕ್ಕಾಗಿರದೆ ಎಲ್ಲರಿಗೂ ತಲಪಬೆಕೆಂಬ ಆಶಯ ಹೊಂದಿದ್ದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇನ್ನೋರ್ವ ಅತಿಥಿ ಡಾ. ಎಸ್ ವ್ಹಿ. ಮಾನವಿ, ಮಾಜಿ ಕಾರ್ಯದಶರ್ಿಗಳು ಕೆ ಎಲ್ ಇ ಸಂಸ್ಥೆ ಇವರು. ಮಾತನಾಡುತ್ತಾ ನಮ್ಮ ಭಾರತಕ್ಕೆ 1970 ರಿಂದ ಹಕ್ಕು ಸಾಮ್ಯ ಪ್ರವೇಶಿಸಿದೆ ಆವಾಗಿನಿಂದಲು ನಮ್ಮಲ್ಲಿ ಹಕ್ಕು ಸಮ್ಯ ನೋಂದಣಿಯಲ್ಲಿ ಬಹಳಷ್ಟು ಬದಲಾವಣೆಯಾಗಿಲ್ಲ ಎಂದು ನುಡಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಅಡಳಿತ ಮಂಡಳಿಯ ಅಧ್ಯಕ್ಷ ಎಸ್ ಬಿ. ಸಾಂಬರಗಿಮಠರವರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ಪ್ರಾಚಾರ್ಯರಾದ ಡಾ. ಸಿದ್ಧರಾಮಪ್ಫಾ ವ್ಹಿ. ಇಟ್ಟಿಯವರು ಸ್ವಾಗತಿಸಿದರು.
ಪ್ರೊ. ಮಾನಸ, ಪ್ರೊ. ಅಸ್ವಿನಿ ಕಾರ್ಯಕ್ರಮವನ್ನು ನಿರೂಪಿಸಿದರು. ಸೌಮ್ಯ ಸ್ವಾಗತ ಗೀತೆ ಹಾಡಿದರು. ಡಾ.ಕೆ ಬಿ. ಜಗದಿಶಗೌಡ ವಂದಿಸಿದರು.
ಎಲ್ಲಾ ವಿಭಾಗದ ಮುಖ್ಯಸ್ತರು ಹಾಗೂ ಉಪನ್ಯಾಸಕರು ಎಲ್ಲ ವಿಭಾಗದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ವಿವಿಧ ಕ್ಷತ್ರಗಳಿಂದ ಬಂದ ಬಹಳಷ್ಟು ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.