ಹುಕ್ಕೇರಿ 28: ಜಿಲ್ಲಾ ಮಟ್ಟದ ಕನ್ನಡ ಭಾಷಾ ಭೋದಕರ ಕಾಯರ್ಾಗಾರ ಜರುಗಿತು ಸಾರ್ವಜನಿಕ ಶಿಕ್ಷಣ ಇಲಾಖೆ ಚಿಕ್ಕೋಡಿ ಮತ್ತು ಜಿಲ್ಲಾ ಸಿರಿಗನ್ನಡ ಶಿಕ್ಷಕರ ವೇದಿಕೆ ವತಿಯಿಂದ ಜರುಗಿದ ಕಾಯರ್ಾಗಾರ ವನ್ನು ಹೀರೆಮಠದ ಚಂದ್ರಶೇಖರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತ ಅದ್ಯಕ್ಷ ಪ್ರಕಾಶ ದೇಶಪಾಂಡೆ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.
ಜಿಲ್ಲಾ ಸಿರಿಗನ್ನಡ ಶಿಕ್ಷಕರ ವೇದಿಕೆ ಅದ್ಯಕ್ಷ ಶಿವಾನಂದ ಗುಂಡಾಳೆ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಮೇಲೆ ಚಿಕ್ಕೋಡಿ ಡಿ ಡಿ ಪಿ ಆಯ್ ಮೋಹನ ಹಂಚಾಟೆ, ಸಿ ಎಸ್ ತುಬಚಿ ಶಿಕ್ಷಣ ಸಂಸ್ಥೆ ಅದ್ಯಕ್ಷ ಪಿಂಟು ಶೆಟ್ಟಿ, ಹುಕ್ಕೇರಿ ಬಿ ಇ ಓ ಮೋಹನ ದಂಡಿನ , ನಿಪ್ಪಾಣಿ ಬಿ ಇ ಓ ರೇವತಿ ಮಠದ ,ಹರಿಹಂತ ಬಿರಾದರ ಪಾಟೀಲ ಉಪಸ್ಥಿತರಿದ್ದರು. ಕಸಾಪ ಅದ್ಯಕ್ಷ ಪ್ರಕಾಶ ದೇಶಪಾಂಡೆ ಮಾತನಾಡಿ ರಾಜ್ಯದಲ್ಲಿ ಕನ್ನಡ ಶಾಲೆಗಳಲ್ಲಿ ಕನ್ನಡ ಅಂಕಿ ಅಂಶ ಗಳನ್ನು ಬೋಧನೆ ಮಾಡುತ್ತಿಲ್ಲಾ ಇದು ವಿಷಾಧನಿಯ, ಶಿಕ್ಷಕರು ಇದಕ್ಕಾಗಿ ಯಾವದೇ ಸಕರ್ಾರಿ ಆದೇಶಕ್ಕೆ ಕಾಯದೆ ಪ್ರತಿ ಶಾಲೆಯ ಕನ್ನಡ ಶಿಕ್ಷಕರು ಮಕ್ಕಳಿಗೆ ಕನ್ನಡ ಅಂಕಿ ಅಂಶ ಕಲಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು. ನಂತರ ಡಾ, ಪೂಣರ್ಿಮಾ ಮುಕ್ಕುಂದಿಯವರ ಉಪಸ್ಥಿತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ, ವಿ ಎಸ್ ಮಾಳಿ ಮತ್ತು ಡಾ, ಎಸ್ ಬಿ ಮಟೋಳಿ ಯವರಿಂದ ಹಳೆಗನ್ನಡ ಭೋದನೆಯ ಸವಾಲುಗಳು ಹಾಗೂ ಕನ್ನಡ ಭಾಷಾ ಭೋಧನೆಯಲ್ಲಿ ಮೌಲ್ಯಗಳು ಎಂಬ ವಿಷಯಗಳ ಮೇಲೆ ಗೋಷ್ಠಿ ಗಳು ಜರುಗಿದವು.
ಮಾಧ್ಯಮಗಳೊಂದಿಗೆ ಮಾತನಾಡಿದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೆಶಕ ಮೋಹನಕುಮಾರ ಹಂಚಾಟೆ ಮಕ್ಕಳಿಗೆ ಕನ್ನಡ ಭಾಷೆಯ ಪರಿಜ್ಞಾನ ಬೆಳೆಸುವದು ಮತ್ತು ಗಡಿನಾಡಿನ ಕನ್ನಡ ಶಾಲೆಗಳಲ್ಲಿ ಕನ್ನಡ ಕಂಪನ್ನು ಮೊಳಗಿಸುವ ಉದ್ದೇಶದಿಂದ ಈ ಕಾಯರ್ಾಗಾರವನ್ನು ಹಮ್ಮಿಕೋಳ್ಳಲಾಗಿದೆ ಎಂದರು ಈ ಸಂದರ್ಭದಲ್ಲಿ ಕನ್ನಡ ವಿಷಯ ಪರಿವಿಕ್ಷಕರಾದ ಅರಿಹಂತ ಬಿರಾದಾರ ಪಾಟೀಲ, ಕಾರ್ಯದಶರ್ಿ ಎಸ್ ಆಯ್ ಅಮ್ಮಿನಭಾವಿ, ಖಜಾಂಚಿ ಎಂ ಎಸ್ ಪಾಟೀಲ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವಿವಿಧ ಶಾಲೆಗಳ ಕನ್ನಡ ಭಾಷಾ ಶಿಕ್ಷಕರು, ಸಿರಿಗನ್ನಡ ಶಿಕ್ಷಕರ ವೇದಿಕೆ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.