ಶಲ್ಯ ತಂತ್ರ ವಿಭಾಗದಿಂದ ಕಾರ್ಯಾಗಾರ

ಬೈಲಹೊಂಗಲ :  ಸಮೀಪದ ಸುಕ್ಷೇತ್ರ ಇಂಚಲದ ಶ್ರೀ ಶಿವಯೋಗೀಶ್ವರ ಗ್ರಾಮೀಣ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಶನಿವಾರ ಶಲ್ಯತಂತ್ರ ವಿಭಾಗದ ವತಿಯಿಂದ  ಪ್ರೊಕ್ಟೋವೇದಾ -2019 ಎ.ನ್ಯಾಶನಲ್ ಲೆವೆಲ್ ಲೈವ್ ಸರ್ಜಿಕಲ್ ವರ್ಕ್ಪ್ ಆನ್ ಆನೊರೆಕ್ಟಲ್ ಡಿಸೀಸ್ ಕಾರ್ಯಕ್ರಮ  ಜರುಗಿತು.

   ಶ್ರೀ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಶಿವಾನಂದ ಭಾರತಿ ಸ್ವಾಮೀಜಿ ಸಮಾರಂಭ ಉದ್ಘಾಟಿಸಿ, ಆರ್ಶೆವಚನ ನೀಡಿದರು.

      ಅತಿಥಿಗಳಾಗಿ ದೆಹಲಿ ಸಿಸಿಐಎಂನ ಡಾ.ಎಸ್.ಕೆ.ಬನ್ನಿಗೋಳ, ರಾಜೀವಗಾಂಧಿ ಆರೋಗ್ಯ ವಿಜ್ಞಾನ ಕುಲಸಚಿವ(ಮೌಲ್ಯಮಾಪನ) ಡಾ.ಲಿಂಗೇಗೌಡ ಕೆ.ಬಿ., ಪ್ರಾಧ್ಯಾಪಕ ಡಾ.ಪಿ.ಹೇಮಂತಕುಮಾರ, ಡಾ.ಶಿವಾಜಿ ಗುಪ್ತಾ, ಡಾ.ಮುಕುಲ ಪಟೇಲ್, ಸಿನಿಯರ್ ಪ್ರೊಕ್ಟೊಲೋಜಿಸ್ಟ ಡಾ.ಜಿ.ವೆಂಕಟೇಶ್ವರಲು,  ಡಾ.ಎಂಡಿಪಿ ರಾಜು, ಸಂಸ್ಥೆಯ ಚೇರಮನ್ ಡಿ.ಬಿ.ಮಲ್ಲೂರ, ಎಸ್.ಎಂ.ರಾಹುತನವರ, ಪ್ರಾಚಾರ್ಯ ಡಾ.ವಿನಯ ಮೋಹನ , ಪ್ರೊಕ್ಟೋವೇದಾ-2019 ರ ಸಂಘಟನಾ ಕಾರ್ಯದರ್ಶಿಗಳಾದ  ಡಾ.ಆರ್.ಸಿ.ಯಕ್ಕುಂಡಿ, ಡಾ.ಕೆ.ಎಚ್.ಪಚ್ಚಿನವರ, ಡಾ.ಎ.ಬಿ.ಗಣಾಚಾರಿ ಶಲ್ಯತಂತ್ರ ವಿಭಾಗದ ಪ್ರಾಧ್ಯಾಪಕರು, ಬಿಎಎಂಎಸ್ ಕಾಲೇಜಿನ ಎಲ್ಲ ಸಿಬ್ಬಂದಿ ವರ್ಗ ಇದ್ದರು.