ಲೋಕದರ್ಶನವರದಿ
ಹುನಗುಂದ14: ವಿದ್ಯಾಥರ್ಿಗಳು ನಿರಪೇಕ್ಷೆ ಮತ್ತು ಪ್ರತಿಪಲಾಪೇಕ್ಷೆ ಇಲ್ಲದೆ ನಿಷ್ಠೆಯಿಂದ ದುಡಿಯುವುದೇ ನಿಜವಾದ ಸೇವೆ. ಅಂಥ ಸೇವೆ ಸಲ್ಲಿಸಿದಾಗ ಮಾತ್ರ ಗಾಂಧೀಜಿಯವರು ಕಂಡ ಕನಸು ನನಸಾಗುವುದು ಎಂದು ಪಿ.ಕೆ.ಪಿ.ಎಸ್. ಸದಸ್ಯ ಶ್ರೀ.ಶಂಕರಗೌಡ ಹೊಸಮನಿ ಹೇಳಿದರು. ಇಲ್ಲಿನ ವಿಎಮ್ಎಸ್ಆರ್ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕದಿಂದ ದತ್ತು ಗ್ರಾಮ ರಾಮವಾಡಗಿಯಲ್ಲಿ ಹಮ್ಮಿಕೊಂಡ ವಾಷರ್ಿಕ ವಿಶೇಷ ಸೇವಾ ಶಿಬಿರವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಪಿ.ಕೆ.ಪಿ.ಎಸ್. ಸದಸ್ಯ ಚನ್ನಯ್ಯ ಹಿರೇಮಠ ಅವರು ಮಾತನಾಡುತ್ತ ಪ್ರತಿಯೊಬ್ಬರೂ ಒಂದೊಂದು ಗಿಡವನ್ನು ನೆಡೆಸಿ ಬೆಳೆಸುವುದರ ಮೂಲಕ ನಾಡಿನ ಅರಣ್ಯ ಸಂಪತ್ತನ್ನು ಹೆಚ್ಚಿಸುವದರೊಂದಿಗೆ ರಕ್ಷಿಸಬೇಕು. ಈ ಮೂಲಕ ತಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಶಶಿಕಲಾ ಮಠ ಅವರು ಮಾತನಾಡುತ್ತ ಎನ್.ಎಸ್.ಎಸ್. ಘಟಕದ ಸ್ಥಾಪನೆಯ ಧ್ಯೇಯೋದ್ಧೇಶಗಳನ್ನು ತಿಳಿಸುತ್ತಾ ವಿದ್ಯಾಥರ್ಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸುವುದರ ಮೂಲಕ ದೇಹ ಮತ್ತು ಮನಸ್ಸನ್ನು ಗಟ್ಟಿಗೊಳಿಸಿಕೊಳ್ಳಬೇಕು. ಕೇವಲ 7 ದಿನಗಳ ಶಿಬಿರದಲ್ಲಿ ಸೇವೆ ಮಾಡುವುದರೊಂದಿಗೆ ಜೀವನದಾದ್ಯಂತ ಈ ಶಿಬಿರದ ಮೂಲಕ ಪಡೆದುಕೊಂಡಿರುವ ಸೇವಾ ಮನೋಭಾವನೆಯನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕೆಂದರು. ಎನ್.ಎಸ್.ಎಸ್. ಘಟಕದ ಕಾರ್ಯಚಟುವಟಿಕೆಗಳು ವಿದ್ಯಾಥರ್ಿಗಳಲ್ಲಿ ಸೇವಾ ಮನೋಭಾವನೆಯೊಂದಿಗೆ ಸಹಕಾರ, ಭಾವೈಕ್ಯತೆ, ಸಂಘಟನಾ ಶಕ್ತಿ, ನಾಯಕತ್ವದ ಗುಣಗಳನ್ನು ಬೆಳೆಸುತ್ತವೆ ಎಂದರು.
ವಿ.ಮ.ವಿ.ವ ಸಂಘದ ನಿದರ್ೆಶಕ ಡಾ.ಮಲ್ಲಣ್ಣ ನಾಗರಾಳ ಅಧ್ಯಕ್ಷತೆ ವಹಿಸಿ ಮಾತನಾಡಿ ಯುವ ವಿದ್ಯಾಥರ್ಿಗಳು ಆಟ-ಪಾಠದೊಂದಿಗೆ ಸೇವಾಗುಣ ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯ. ಕೇವಲ ಸ್ವಾರ್ಥಕ್ಕಾಗಿ ಸೇವೆ ಮಾಡದೇ ನಿಸ್ವಾರ್ಥದಿಂದ, ಸಾರ್ವಜನಿಕರಿಗಾಗಿ ಎಂಬ ಸೇವೆಯಾಗಬೇಕು. ಗ್ರಾಮದ ಜನರ ಸಹಕಾರದೊಂದಿಗೆ ಶೃದ್ಧೆ, ಭಕ್ತಿಯಿಂದ ಸೇವೆ ಮಾಡಿರಿ ಸಾಧನೆಯಿಂದ ಸಾಧಕರಾಗಿ ಸ್ವಾರ್ಥದಿಂದ ಸಾಧಕರಾಗಬೇಡಿ ಎಂದರು. ಗ್ರಾಮ ಪಂಚಾಯತಿ ಸದಸ್ಯರಾದ ಕುಬೇರಗೌಡ ಹೊನ್ನಳ್ಳಿ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಚಂದ್ರು ವ್ಹಿ.ಕಲ್ಲನಗೌಡರ, ಪಿ.ಕೆ.ಪಿ.ಎಸ್. ಉಪಾಧ್ಯಕ್ಷರಾದ ಹನಮಗೌಡ ಹೊನ್ನಳ್ಳಿ, ಪಿ.ಕೆ.ಪಿ.ಎಸ್. ಸದಸ್ಯರಾದ ಬಸನಗೌಡ ದೊಡ್ಡಮನಿ, ಶ್ರೀಧರಗೌಡ ಅಗಸೀಮುಂದಿನ, ಚನ್ನಯ್ಯ ಶ.ಹಿರೇಮಠ, ಶ್ರೀಮತಿ ಶಾಂತವ್ವ ಕಿವಡಿ, ಬಸವರಾಜ ಹವೇಲಿ ಉಪಸ್ಥಿತರಿದ್ದರು.
ಸರೋಜಾ ವಾಲೀಕಾರ ಮತ್ತು ಸಾವಿತ್ರಿ.ಬಿ ಪ್ರಾಥರ್ಿಸಿದರು. ಎನ್,ಎಸ್,ಎಸ್, ಅಧಿಕಾರಿ ಡಾ.ತಿಪ್ಪೇಸ್ವಾಮಿ ಡಿ.ಎಸ್. ಪ್ರಾಸ್ತಾವಿಕ ಮಾತನಾಡಿದರು. ಪವಿತ್ರಾ ಕಿರೇಸೂರ ಸ್ವಾಗತಿಸಿದರು. ಶರಣಪ್ಪ ಪರಸಾಪೂರ ನಿರೂಪಿಸಿದರು. ಶಕುಂತಲಾ ಸಂಗಮ ವಂದಿಸಿದರು.