ಕರವೇ ಮಾಡಲಗಿ ಘಟಕದ ಪದಾಧಿಕಾರಿಗಳು, ಗ್ರಾಮಸ್ಥರು ತೋಟಪಟ್ಟಿಗಳಿಗೆ ಟ್ಯಾಂಕರ್ ನೀರು ಪೂರೈಸಲು ಆಗ್ರಹಿಸಿ ಮನವಿ

ಕರವೇ ಮಾಡಲಗಿ ಘಟಕದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ತಹಶೀಲ್ದಾರ ಡಿ.ಎಚ್.ಕೋಮರ ಅವರಿಗೆ ಮನವಿ ಸಲ್ಲಿಸಿದರು.


ರಾಯಬಾಗ 02: ತಾಲೂಕಿನ ಮಾರಡಿ (ಮಾಡಲಗಿ) ಗ್ರಾಮದ ತೋಟಪಟ್ಟಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಉದ್ಭವಿಸಿದ್ದು ಕೂಡಲೇ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಪೂರೈಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಮಾಡಲಗಿ ಘಟಕದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ತಹಶೀಲ್ದಾರ ಡಿ.ಎಚ್.ಕೋಮರ ಅವರಿಗೆ ಸೋಮವಾರ ಸಾಯಂಕಾಲ ಮನವಿ ಸಲ್ಲಿಸಿದರು. 

ಮಾಡಲಗಿ ಗ್ರಾಮದ ತೋಟಪಟ್ಟಿಗಳ ಜನರು ನೀರಿಲ್ಲದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜನ-ಜಾನುವಾರುಗಳಿಗೆ ನೀರು ಇಲ್ಲದೇ ತುಂಬಾ ತೊಂದರೆ ಅನುಭವಿಸುವಂತಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಗ್ರಾಮದವರೆಗೆ ಮಾತ್ರವಿದ್ದು, ಅದನ್ನು ತೋಟಪಟ್ಟಿಗಳಿಗೆ ಪೈಪಲೈನ್ಮೂಲಕ ಅಳವಡಿಸಿ ಶಾಶ್ವತ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು.

ಗ್ರಾಮದ ತೋಟಪಟ್ಟಿಗಳಲ್ಲಿ ಕೂಡಲೇ ಟ್ಯಾಂಕರ್ ಮೂಲಕ ನೀರು ಪೂರೈಸಿ ನೀರಿನ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಮಾಡಲಗಿ ಗ್ರಾಮಸ್ಥರು ಮತ್ತು ಕರವೇ ಕಾರ್ಯಕರ್ತರು ಕೂಡಿಕೊಂಡು ತಹಶೀಲ್ದಾರ ಕಚೇರಿ ಮುಂದೆ ಕುಳಿತು ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

ಮಾಡಲಗಿ ಕರವೇ ಘಟಕದ ಅಧ್ಯಕ್ಷ ಈರಣ್ಣ ಕಮತೆ, ಭರಮಾನಂದ ಚೌಗಲಾ, ರಾಜುಗಡ್ಡಿ, ವಿಠ್ಠಲ ಯಾದಗೂಡೆ, ಕಲ್ಲಪ್ಪ ಆಕಳೆ, ಯಲ್ಲಾಲಿಂಗ ಬಿಳಿಕುರಿ, ಶಿವಪ್ಪ ಗೋಮಠ, ಬಸವರಾಜ ಸುನಕುಪ್ಪಿ, ಮಂಜುನಾಥ ಪಾಟೀಲ, ಭೀಮಪ್ಪ ಕೊಟ್ರೆ, ವಿಜಯ ನಾಯಿಕ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

 ರಾಯಬಾಗ 1