ಲೋಕದರ್ಶನ ವರದಿ
ರಾಮದುರ್ಗ 22: ರಾಮದುರ್ಗ ತಾಲೂಕಿನ ಮಲಪ್ರಭಾ ನದಿ ಪಾತ್ರದ ಜನತೆ ಪದೇ ಪದೇ ಪ್ರವಾಹಕ್ಕೆ ತುತ್ತಾಗುತ್ತಿದ್ದು, ಸಂತ್ರಸ್ಥರಿಗೆ ಸರಕಾರದ ನಿದರ್ೇಶನದಂತೆ ಪರಿಹಾರ ಒದಗಿಸಲು ಸಮೀಕ್ಷಾ ಕಾರ್ಯದಲ್ಲಿ ತೊಡಗಿದ ಅಧಿಕಾರಿಗಳು ಪಕ್ಷಾತೀತವಾಗಿ ಸಮೀಕ್ಷೆ ನಡೆಸಬೇಕು. ಅಧಿಕಾರಿಗಳ ಬೇಜವಾಬ್ದಾರಿ ಕಂಡುಬಂದು ಸಂತ್ರಸ್ಥರಿಗೆ ತೊಂದರೆಯಾದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಖಡಕ್ ಎಚ್ಚರಿಕೆ ನೀಡಿದರು.
ನವೀಲುತೀರ್ಥ ಡ್ಯಾಂನಿಂದ ಸೋಮವಾರ ಬಿಡುಗಡೆಗೊಂಡ ಸುಮಾರು 35 ಸಾವಿರ ಕ್ಯೂಸೆಕ್ಸ್ ನೀರಿನಿಂದ ನದಿ ಪಾತ್ರದಲ್ಲಿ ಪ್ರವಾಹ ಉಂಟಾದ ಪ್ರವಾಹದ ಕುರಿತು ಚಚರ್ಿಸಲು ಏರ್ಪಡಿಸಿದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಕೆಲ ಮನೆ ಬಿದ್ದ ಪ್ರಕರಣಗಳ ಕೆಟಗೇರಿ ನಮೂದಿಸುವಲ್ಲಿ ತಾರತಮ್ಯ ಮಾಡಲಾಗಿದೆ ಎಂಬ ದೂರು ಕೇಳಿಬರುತ್ತಿವೆ. ಪ್ರವಾಹಪೀಡಿತ ಹಾಗೂ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ಸಮೀಕ್ಷಾ ಕಾರ್ಯದ ಮರು ಪರಿಶೀಲಣೆ ನಡೆಸಿ ಒಂದು ವಾರದೊಳಗಾಗಿ ವರದಿ ಸಲ್ಲಿಸಬೇಕು. ಅಲ್ಪಸ್ವಲ್ಪ ಹಾಳಾದ ಮನೆಗಳನ್ನು ಸಿ ಕೆಟಗೇರಿಯಲ್ಲಿ ಸಂಬಂಧಿಸಿದ ಇಂಜಿನೀಯರ ದಾಖಲಿಸಿಕೊಂಡಿದ್ದಾರೆ. ಮನೆ ಭವಿಷ್ಯತ್ತಿನಲ್ಲಿ ಹಾಳಾಗುವ ಲಕ್ಷಣಗಳಿದ್ದಲ್ಲಿ ಅದನ್ನು ಬಿ ಅಥವಾ ಏ ಎಂದು ದಾಖಲಿಸಿಕೊಂಡು ಸಂತ್ರಸ್ಥರಿಗೆ ಸೂರು ಕಲ್ಪಿಸುವ ಜಬಾಬ್ದಾರಿ ತೆಗೆದುಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರಾದಿ ಗೊಣ್ಣಾಗರ ಪಿಡಿಓ ತರಾಟೆಗೆಃ:
ಅವರಾದಿ, ಹಂಪಿಹೋಳಿ ಗ್ರಾಮದ ಬಿದ್ದ ಮನೆಗಳ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಪಿಡಿಓ ಈರನಗೌಡ ಪಾಟೀಲ ಸಂತ್ರಸ್ಥರಿಗೆ ಸರಿಯಾಗಿ ಸ್ಪಂದಿಸಿದೇ ಮನ ಬಂದಂತೆ ವತರ್ಿಸಿದ್ದಾರೆ. ಗೊಣ್ಣಾಗರ ಪಿಡಿಓ ದಾಸಪ್ಪನವರ ಸಂತ್ರಸ್ಥರಿಗೆ ಸ್ಪಂದಿಸಲ್ಲ ಎಂದು ಸಾರ್ವಜನಿಕರಿಂದ ದೂರು ಕೇಳಿ ಬಂದಿವೆ.
ಇನ್ನು ಮುಂದಾದರೂ ಮೊದಲಿನ ತಪ್ಪು ಸರಿಪಡಿಸಿಕೊಂಡು ಕೆಲಸ ನಿರ್ವಹಿಸಬೇಕು ಇಲ್ಲವಾದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರಾದಿ ಹಾಗೂ ಗೊಣ್ಣಾಗರ ಪಿಡಿಓಗಳನ್ನು ಶಾಸಕ ಮಹಾದೇವಪ್ಪ ಯಾದವಾಡ ತರಾಟೆಗೆ ತೆಗೆದುಕೊಂಡರು.
ರಜೆ ಪಡೆಯದೇ ಕೆಲಸ ಮಾಡಿ:
ಪ್ರವಾಹ ಪ್ರದೇಶದ ಸಮೀಕ್ಷೆ ನಡೆಸುವ ಅಧಿಕಾರಿಗಳು ರಜೆ ಪಡೆಯದೇ ಕಾಳಜಿಯುತ ಕೆಲಸ ನಿರ್ವಹಿಸಬೇಕು. ಪ್ರವಾಹಕ್ಕೆ ತುತ್ತಾದ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಜನತೆಗೆ ಆರೋಗ್ಯದ ಬಗೆಗೆ ಕಾಳಜಿ ವಹಿಸಬೇಕು.
ರಸ್ತೆಗಳು ಹಾಳಾದ ಕುರಿತು ಲೋಕೋಪಯೋಗಿ ಹಾಗೂ ಜಿ.ಪಂ ಅಧಿಕಾರಿಗಳು ಹಾನಿಗೊಳಗಾದ ರಸ್ತೆ ದುರಸ್ಥಿಗೆ ಯೋಜಿತ ವರದಿ ಸಲ್ಲಿಸಿಬೇಕು. ರೈತರ ಜಮೀನು ಹಾಳಾದ ಕುರಿತು ಕೃಷಿ, ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಸಮೀಕ್ಷೆ ನಡೆಸಿ ಪರಿಹಾರ ದೊರಕಿಸಿಕೊಡಬೇಕೆಂದರು.
ತಹಶೀಲ್ದಾರ ಗಿರೀಶ ಸಾಧ್ವಿ ಮಾತನಾಡಿ, ಪ್ರವಾಹ ಕಾರ್ಯದಲ್ಲಿ ತೊಡಗಿದ ಅಧಿಕಾರಿಗಳು ಸಮೀಕ್ಷೆಗೆ ಸಹಕರಿಸಿ, ಪ್ರಾಮಾನಿಕವಾಗಿ ಕೆಲಸ ನಿರ್ವಹಿಸಬೇಕು. ಸರಕಾರದ ಸೌಲಭ್ಯ ಅರ್ಹ ಫಲಾನುಭವಿಗಳನ್ನು ತಲುಪುವಂತಾಗಲು ಸಮೀಕ್ಷೆಗೆ ನೇಮಕಗೊಂಡ ಅಧಿಕಾರಿಗಳ ಪಾತ್ರ ಮುಖ್ಯವಾಗಿದೆ ಎಂದರು.
ತಾ.ಪಂ ಇಓ ಬಸಪ್ಪ ಕುರ್ತಕೋಟಿ, ಬಿಇಓ ಎಂ.ಆರ್. ಅಲಾಸೆ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು, ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಸೇರಿದಂತೆ ಇತರರಿದ್ದರು.