ಹಾರೂಗೇರಿಯಲ್ಲಿ ಹಡಪದ ಸಮಾಜದ ಸಮುದಾಯ ಭವನ ಕಾಮಗಾರಿಗೆ ಚಾಲನೆ
Work on the community hall of the Hadapada community in Harugeri has begun.
ಲೋಕದರ್ಶನ ವರದಿ
ಹಾರೂಗೇರಿ 16: ಸಂಸತ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 9.98 ಲಕ್ಷರೂ. ಮೊತ್ತದ ಹಡಪದ ಸಮಾಜದ ಸಮುದಾಯ ಭವನ ಕಾಮಗಾರಿಗೆ ಶ್ರೀ ವಾಲ್ಮೀಕಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಾಮಣ್ಣ ಗಸ್ತಿ ಸೋಮವಾರ ಗುದ್ದಲಿ ಪೂಜೆ ನೇರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು. ನಂತರ ಮಾತನಾಡಿದ ರಾಮಣ್ಣ ಗಸ್ತಿ ಅವರು ಹಡಪದ ಸಮಾಜ ಸರ್ಕಾರದ ಯೋಜನೆ ಮತ್ತು ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕ, ಶೈಕ್ಷಣಿಕ, ರಾಜಕೀಯ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಸಾಧಿಸಬೇಕೆಂದು ಹೇಳಿದರು.
ಗೋಕಾಕದ ಹಿರಿಯ ರಾಜಕೀಯ ಮುಖಂಡ ಮಹಾಲಿಂಗ ಸಾಯಣ್ಣವರ ಪೂಜೆ ಸಲ್ಲಿಸಿದರು. ಪುರಸಭೆ ಸದಸ್ಯ ಹಾಗೂ ಶ್ರೀ ವೃಷಭೇಂದ್ರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಗೀರೀಶ ದರೂರ, ರೂಪಾ ಕರೋಶಿ, ಗಣ್ಯರಾದ ಪ್ರಧಾನಿ ದರೂರ, ಬಿ.ಬಿ.ಮುಗಳಿಹಾಳ, ಅಪ್ಪಾಸಾಬ ಸರಿಕರ, ಎ.ಬಿ.ಅರಕೇರಿ, ಅಜೀತ ಕೊತ್ತಲಗಿ, ಮಲ್ಲಪ್ಪ ಗಸ್ತಿ, ಪ್ರಕಾಶ ಕುರಿ, ಪ್ರಕಾಶ ಘೋರೆ್ಡ, ಪ್ರಕಾಶ ಪಾಗೆ, ಮಹಮ್ಮದ ಜಮಾದಾರ, ಮಹಾದೇವ ನಾವಿ, ರವಿ ಕರೋಶಿ, ಶಿವಪ್ಪ ತೆಗ್ಗಿ, ಆಶಾಕುಮಾರಿ ನಾವಿ, ವಿಠ್ಠಲ ನಾವಿ, ಪ್ರಭು ನಾವಿ, ಕುಮಾರ ನಾವಿ, ಭೀಮಪ್ಪ ನಾವಿ, ಮುತ್ತಪ್ಪ ನಾವಿ, ಪುಂಡಲೀಕ ನಾವಿ ಹಾಗೂ ಮೊದಲಾದವರು ಉಪಸ್ಥಿತರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 