ಯುನಿಟ್-2ರ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಶಾಸಕ ಚರಂತಿಮಠ

ಬಾಗಲಕೋಟೆ: ನವನಗರದ ಯುನಿಟ್-2ರಲ್ಲಿಯ ವಿದ್ಯುತ್ ಕಾಮಗಾರಿಗಳು ಒಂದು ವರ್ಷದ ಅವಧಿಯ ಕಾರ್ಯಗಳಾಗಿದ್ದು, ಅವುಗಳನ್ನು 10 ತಿಂಗಳಲ್ಲಿ ಪೂರ್ಣಗೊಳಿಸುವಂತೆ ಶಾಸಕ ವೀರಣ್ಣ ಚರಂತಿಮಠ ಹೇಳಿದರು.

ಶುಕ್ರವಾರ ನವನಗರದ ಯುನಿಟ್-2ರಲ್ಲಿ ವಿದ್ಯುತ್ ಉಪಕೇಂದ್ರ 1 ಹಾಗೂ 2 ಮತ್ತು ಇತರೆ ಹೊಸ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ನವನಗರದ ಅಭಿವೃದ್ದಿಗಾಗಿ ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರ ಹಾಗೂ ಹೆಸ್ಕಾಂಗಳ ಸಿವಿಲ್ ಕಾಮಗಾರಿಗಳ ಬಗ್ಗೆ ಮುಂದಿನ ವಾರ ಸಭೆ ಕರೆದು ಎಲ್ಲ ಕಾರ್ಯಗಳ ಬಗ್ಗೆ ಗಮನ ಹರಿಸುವದಲ್ಲದೇ ಕಾಮಗಾರಿಗಳು ಸಂಪೂರ್ಣಗೊಂಡ ನಂತರ ಬಸವೇಶ್ವರ ವಿದ್ಯಾವರ್ಧಕ ಸಂಘದ ಇಂಜಿನೀಯರಿಂಗ್ ವಿಭಾಗದ ಸಿಬ್ಬಂದಿಗಳಿಂದ ಮೂರನೇ ವ್ಯಕ್ತಿ ತಪಾಸಣೆ ಮಾಡಿಸಿ ನಂತ ಬಿಲ್ ಪಾವತಿಸುವಂತೆ ಸೂಚಿಸಿದರು. ಇದಕ್ಕಾಗಿ ಅವರಿಗೆ ಬಿಲ್ ಪಾವತಿಸುವ ಅವಶ್ಯಕತೆ ಇಲ್ಲವೆಂದರು.

ನವನಗರದ ಅಭಿವೃದ್ದಿಗಾಗಿ ಹಿಂದೆ ಕಾರ್ಯನಿರ್ವಹಿಸಿದಂತೆ ಇನ್ನು ಮುಂದೆ ಹಾಗಾಗದೇ ಪ್ರತಿಯೊಂದು ದಿನವೂ ಮಹತ್ವದ ದಿನವನ್ನಾಗಿ ಸ್ವೀಕರಿಸಿ ಯುದ್ದೋಪಾದಿಯಲ್ಲಿ ಕಾರ್ಯ ಕೈಗೊಳ್ಳಬೇಕು. ಜನರಿಗೆ ಮೂಲ ಸೌಕರ್ಯಗಳಾದ ಮಳೆ ನೀರು ಕೊಯ್ಲು, ಚರಂಡಿ, ನೀರು ಸರಬರಾಜು, ಒಳಚರಂಡಿ, ವಿದ್ಯುತ್ತೀಕರಣ ಹಾಗೂ ರಸ್ತೆ ಕಾಮಗಾರಿಗಳು ಪೂರ್ಣಗೊಳ್ಳಬೇಕು. ಬರುವ ದೀಪಾವಳಿ ನಂತರ ನವನಗರದಲ್ಲಿ ಅಳವಡಿಸಲಾಗಿರುವ ಗೂಡಂಗಡಿ ಡಬ್ಬ್ಡಿಗಳನ್ನು ತೆರವುಗೊಳಿಸಿ, ಸುಂದರ ನಗರ ನಿಮರ್ಾಣಕ್ಕೆ ಕೈಜೋಡಿಸಬೇಕು. ಯುನಿಟ್-3ರ ಕಾರ್ಯ ಕೂಡಾ ಶೀಘ್ರದಲ್ಲಿಯೇ ಪ್ರಾರಂಭಗೊಳ್ಳಬೇಕು.

ಅಧಿಕ್ಷಕ ಅಭಿಯಂತರರಾದ ಜಿ.ಕೆ.ಗೋಟ್ಯಾಳ ಮಾತನಾಡಿ 2008-09 ರಲ್ಲಿಯೇ ಬಾಗಲಕೋಟೆ ನಗರವನ್ನು ಸ್ಮಾರ್ಟ ಸಿಟಿ ಎಂದು ಶಾಸಕ ಚರಂತಿಮಠ ಅವರ ಅವಧಿಯಲ್ಲಿ ಘೋಷಿಸಲಾಗಿತ್ತು. ಇಂದು ಅವರೇ ಈ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಇದು ಉತ್ತರ ಕನರ್ಾಟಕದಲ್ಲಿಯೇ ಪ್ರಥಮ ಸ್ಮಾರ್ಟ ಸಿಟಿ ಆಗಲಿದ್ದು, ಪಟ್ಟಣದ ಸೀಮಾರೇಖೆ ಆರ್.ಎಲ್ 521 ರಿಂದ 523 ಮೀಟರ ವರೆಗೆ ನೀರು ನಿಂತ ಮಟ್ಟದಿಂದ 100 ಮೀಟರ್ ಒಳಗಡೆ 3149 ಸಂತ್ರಸ್ತ ಕುಟುಂಬಗಳು ಬರುತ್ತಿದ್ದು, ಅದರ ವ್ಯಾಪ್ತಿಯಲ್ಲಿ ಬರುವ ಕಟ್ಟಡಗಳನ್ನು ಈಗಾಗಲೇ ಸ್ವಾಧೀನ ಪಡಿಸಿಕೊಂಡು ನವನಗರದ ಯುನಿಟ್-2 ರಲ್ಲಿ ಪುನರ್ವಸಿತಿ ಕಲ್ಪಿಸಲು ಉದ್ದೇಶಿಲಾಗಿದೆ ಎಂದರು.

ಬಿಟಿಡಿಎ ವತಿಯಿಂದ ಲಭ್ಯವಿರುವ 1333 ಎಕರೆ ಪ್ರದೇಶದ ಯುನಿಟ್-2ರಲ್ಲಿ 52 ಸೆಕ್ಟರಗಳನ್ನು ಗುರುತಿಸಲಾಗಿದೆ. 42 ಸೆಕ್ಟರಗಳನ್ನು ಪುನರ್ ವಸತಿಗಾಗಿ, 6 ಸೆಕ್ಟರಗಳನ್ನು ವಾಣಿಜ್ಯ ಮತ್ತು ಉದ್ಯಾನವನಕ್ಕಾಗಿ ಹಾಗೂ ಉಳಿದ 4 ಸೆಕ್ಟರಗಳನ್ನು ಸರಕಾರಿ, ಅರೆಸರಕಾರಿ ಹಾಗೂ ಸಂಸ್ಥೆಗಳ ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ. ಯುನಿಟ್-2ರ ಪಕ್ಕದಲ್ಲಿರುವ ಜಿಲ್ಲಾ ಜೈಲ್ ಹತ್ತಿರ ಟರ್ನ ಕೀ ಆಧಾರದ ಮೇಲೆ 110/11 ಕೆವಿ ಸಾಮಥ್ರ್ಯದ ವಿದ್ಯುತ್ ಉಪಕೇಂದ್ರ-1ರ ನಿಮರ್ಾಣ ಮಾಡುವ ಕಾಮಗಾರಿ, 10 ನರ್ಸರಿ ಶಾಲೆ ಆವರಣಗಳಿಗೆ ಕಂಪೌಂಡ್ ಗೋಡೆ ನಿಮರ್ಿಸುವ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬಿಟಿಡಿಎ ಮುಖ್ಯ ಅಭಿಯಂತರ ಎ.ಎಲ್.ವಾಸನದ, ಕೆಪಿಟಿಸಿಎಲ್ ಮುಖ್ಯ ಅಭಿಯಂತರ ಎಸ್.ಪಿ.ಸಕ್ರಿ, ಅಧೀಕ್ಷಕ ಅಭಿಯಂತರ ಬಿ.ಎಸ್.ಹೆಬ್ಬಾಳ, ಕಾರ್ಯನಿವರ್ಾಹಕ ಅಭಿಯಂತರ ಕೆ.ಎ.ಆನಂದ, ಬಿಟಿಡಿಎ ಇಂಜಿನೀಯರಗಳಾದ ವಿಜಯಶಂಕರ ಹೆಬ್ಬಳ್ಳಿ, ಶಿವು ಶಿರೂರ, ಸುರೇಶ ತೆಗ್ಗಿ, ಎಸ್.ಎಲ್.ಚಿನ್ನಣ್ಣವರ, ಎಂ.ಎನ್.ಗದಗ, ಗುತ್ತಿಗೆದಾರರಾದ ಬೆಂಗಳೂರಿನ ರಾಜೇಂದ್ರಪ್ರಸಾದ, ಮಹಾವೀರ ಎಲ್, ಯಲ್ಲಪ್ಪ ಕ್ಯಾದಿಗೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.