25 ಶಾಲೆಗಳಲ್ಲಿ ಕೆಲಸ, ಒಂದು ಕೋಟಿ ಸಂಬಳ!

ಕಾಸ್‍ ಗಂಜ್, ಜೂನ್ 06, ಫರೀದ್ ಪುರದ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು 25 ಶಾಲೆಗಳಲ್ಲಿ ಕೆಲಸ ಮಾಡಿ ಒಂದು ಕೋಟಿ ಸಂಪಾದಿಸಿರುವ ಆರೋಪಕ್ಕೆ ಗುರಿಯಾಗಿದ್ದು,  ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.ಕಸ್ತೂರ್ಬಾ ಗಾಂಧಿ ಶಾಲೆಯಲ್ಲಿ ಬೋಧನೆ ಮಾಡುತ್ತಿರುವ ಆರೋಪಿ ಶಿಕ್ಷಕಿ ಅನಿಮಿಕಾ ಸಿಂಗ್, ಅನಾಮಿಕಾ ಶುಕ್ಲಾ ಹೆಸರಿನಲ್ಲಿ  ಹತ್ತಿರದ ಜಿಲ್ಲೆಗಳ 25 ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಈಕೆ ತನ್ನ ರಾಜೀನಾಮೆ ಪತ್ರವನ್ನು ಮೂಲ ಶಿಕ್ಷಣಾಧಿಕಾರಿ (ಬಿಎಸ್‌ಎ) ಕಚೇರಿಗೆ ಸಲ್ಲಿಸಲು ಬಂದಾಗ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸರ ಪ್ರಕಾರ, ಕಸ್ತೂರ್ಬಾ ಗಾಂಧಿ ಶಾಲೆಯ ಉದ್ಯೋಗಿ ರಾಜ್ ಎಂದು ಗುರುತಿಸಲ್ಪಟ್ಟ ವ್ಯಕ್ತಿಯು ನೇಮಕಾತಿಗಳ ಹಿಂದಿನ ಪ್ರಮುಖ ಆರೋಪಿ ಎಂದು ತಿಳಿದುಬಂದಿದೆ.ಅನಿಮಿಕಾ ಫರೀದ್ಪುರ ಶಾಲೆಯಲ್ಲಿ ಪೂರ್ಣ ಸಮಯದ ವಿಜ್ಞಾನ ಶಿಕ್ಷಕಿಯಾಗಿದ್ದು, ಶಿಕ್ಷಣ ಇಲಾಖೆ ನೋಟಿಸ್ ನೀಡಿ ಆಕೆಯ ವೇತನವನ್ನು ಅಮಾನತುಗೊಳಿಸಿದೆ.