ವಿದ್ಯಾರ್ಥಿನಿಯರು ವಿಜ್ಞಾನಿಗಳಾಗಲು ಶ್ರಮವಹಿಸಿ

ಲೋಕದರ್ಶನವರದಿ

ಗುಳೇದಗುಡ್ಡ04: ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಪದವಿ ಪರೀಕ್ಷಾ ಫಲಿತಾಂಶಗಳಲ್ಲಿ ವಿದ್ಯಾಥರ್ಿನೀಯರೆ ಮೇಲುಗೈಯನ್ನು ಸಾಧಿಸುತ್ತಿದ್ದಾರೆ.

    ವಿಜ್ಞಾನಿಗಳ ಸಂಖ್ಯೆಯಲ್ಲಿ ಬೆರಳೆಣಿಕೆಯಷ್ಟು ಮಹಿಳೆಯರನ್ನು ಕಾಣಬಹುದಾಗಿದೆ ಹಾಗಾಗಿ ವಿದ್ಯಾಥರ್ಿನಿಯರು ವಿಜ್ಞಾನಿಗಳಾಗಲು ಶ್ರಮವಹಿಸಬೇಕಾದದು ಅಗತ್ಯ ಎಂದು ಭಂಡಾರಿ ಮತ್ತು ರಾಠಿ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಆರ್.ಎಸ್.ವಾಲಿ ಹೇಳಿದರು.

  ಪಟ್ಟಣದ ಪಿ.ಇ.ಟಿ.ಯ ರಾಠಿ ಮತ್ತು ಕಾವಡೆ ಆಂಗ್ಲಮಾಧ್ಯಮ ಪ್ರೌಢ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ 2ನೇ ಬಾರಿ ನಡೆದ ಅಟಲ್ ಇನೊವೇಷನ್ ಫೆಸ್ಟ್ ಅಂತರ ಶಾಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

     ಅವರು ವಿಜ್ಞಾನ ವಸ್ತು ಪ್ರದರ್ಶನಗಳು ವಿದ್ಯಾಥರ್ಿಗಳಲ್ಲಿ ಸೃಜನಶೀಲತೆ, ಕೌಶಲ, ಕ್ರೀಯಾಶೀಲತೆ ಬೆಳೆಸುವುದಲ್ಲದೆ   ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುತ್ತದೆ. ಮಕ್ಕಳು ಇಂತಹ ವಸ್ತು ಪ್ರದರ್ಶನಗಳಲ್ಲಿ ಸಕ್ರೀಯವಾಗಿ ಭಾಗವಹಿಸಬೇಕೆಂದು ಸಲಹೆ ನೀಡಿದರು.

  ಸಂಸ್ಥೆಯ ಗೌರವ ಕಾರ್ಯದಶರ್ಿ ರವೀಂದ್ರ ಪಟ್ಟಣಶೆಟ್ಟಿ, ಶಾಲೆಯ ಚೇರಮನ್ ಅಶೋಕ ಎನ್. ಹೆಗಡಿ ಜಿ.ಎ.ಅಂಗಡಿ ಪೂರ್ವ ಪ್ರಾಥಮಿಕ ಶಾಲೆಯ ಚೇರಮನ್ ಅಮಾತೆಪ್ಪ ಕೊಪ್ಪಳ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಹೆಚ್.ವಿ.ಹೊಕ್ರಾಣಿ, ವಿ.ಎಸ್.ಅಂಗಡಿ ಮತ್ತು ಶಾಲೆಯ ಮುಖ್ಯ ಗುರುಮಾತೆ ಜೆ.ಜೆ.ಲೋಬೋ, ವಿ.ಬಿ.ಹಳ್ಳೂರ, ಸುಜಾತಾ ಕರಡಿಗುಡ್ಡ, ವಿಜ್ಞಾನ ಶಿಕ್ಷಕ ಬಸವರಾಜ ಯಳಮೇಲಿ. ಆರ್.ಎಸ್.ಜಿಲರ್ಿ, ಅಮೃತಾ ಹುನಗುಂದ ಮತ್ತಿತರರಿದ್ದರು.