ಮಾದರಿ ಅಂಗನವಾಡಿ ಕೇಂದ್ರಗಳಿಗಾಗಿ ಶ್ರಮಿಸಿ ಜಿ.ಪಂ. ಅಧ್ಯಕ್ಷರ ಸೂಚನೆ

ಗದಗ 19: ಅಂಗನವಾಡಿ ಮಕ್ಕಳು, ಗಭರ್ೀಣಿಯರು ಹಾಗೂ ಬಾಣಂತಿಯರಿಗೆ ಪೂರೈಕೆ ಮಾಡುವ ಆಹಾರದ ಪೂರೈಕೆಯಲ್ಲಿ ಅಕ್ರಮವೆಸಗಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಿದ್ದಲಿಂಗೇಶ್ವರ ಎಚ್. ಪಾಟೀಲ ಎಚ್ಚರಿಕೆ ನೀಡಿದರು.

ಗದಗ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧ್ಯಕ್ಷರ ಕಚೇರಿಯಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಅಂಗನವಾಡಿ ಮಕ್ಕಳಿಗೆ ಮೊಟ್ಟೆ ಸರಬರಾಜು ಮಾಡುವುದಕ್ಕೆ ಮಧ್ಯವರ್ತೆಗಳನ್ನು ನೇಮಿಸಿಬಾರದು. ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಬೇಕು. ಜನಪ್ರತಿನಿಧಿಗಳೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು. ಇನ್ನು ಅಂಗನಾವಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಣೆ ಕುರಿತಂತೆ ದೂರುಗಳು ಇರದಂತೆ ನಿಗಾವಹಿಸಬೇಕು. 

ಜಿಲ್ಲೆಯಾದ್ಯಾಂತ 1166 ಅಂಗನವಾಡಿ ಕೇಂದ್ರಗಳಿದ್ದು, 863 ಸ್ವಂತ ಕಟ್ಟಡದಲ್ಲಿ ನಡೆಯುತ್ತಿವೆ. ಇನ್ನುಳಿದವುಗಳು ಸರ್ಕಾರಿ ಶಾಲೆ, ಸಮುದಾಯ ಭವನ, ಬಾಡಿಗೆ ಕಟ್ಟಡ, ದೇವಸ್ಥಾನ, ಯುವಕ ಮಂಡಳ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿವೆ. 39 ಅಂಗನವಾಡಿ ಕೇಂದ್ರಗಳು ನಿರ್ಮಾಣ ಹಂತದಲ್ಲಿದ್ದು, 64 ಕೇಂದ್ರಗಳಿಗೆ ನಿವೇಶನವಿದ್ದರೂ ಹೊಸ ಕಟ್ಟಡ ನಿಮರ್ಾಣವಾಗಬೇಕಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದ ಬಹುತೇಕ ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳ ಕೊರತೆಯಿದೆ. ನೆರೆ ಸಂದರ್ಭದಲ್ಲಿ ಜಿಲ್ಲೆಯ 67 ಅಂಗನವಾಡಿ ಕೇಂದ್ರಗಳ ದುರಸ್ಥಿ ಕಾರ್ಯಕ್ಕೆ ಅಂದಾಜು 91.66 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿದರ್ೇಶಕ ಎಚ್.ಎಚ್.ಕುಕನೂರ ತಿಳಿಸಿದರು. ತಾಲೂಕಾ ಶಿಶು ಅಭಿವೃದ್ಧಿ ಅಧಿಕಾರಿಗಳಿಂದ ಅಂಗನವಾಡಿ ಕೇಂದ್ರಗಳ ಸ್ಥಿತಿಗತಿಯ ಕುರಿತು ಜಿ.ಪಂ. ಅಧ್ಯಕ್ಷರು ಸಂಪೂರ್ಣ ಮಾಹಿತಿ ಪಡೆದರು.

ನಿವೇಶನವಿರುವ ಅಂಗನವಾಡಿ ಕೇಂದ್ರಗಳ ಕಟ್ಟಡಕ್ಕಾಗಿ ಪ್ರಸ್ತಾವನೆ ಸಲ್ಲಿಸಬೇಕು. ಸಂಬಂಧಿತ ಶಿಕ್ಷಣಾಧಿಕಾರಿಗಳ ಜೊತೆ ಮಾತನಾಡಿ ಸ್ಥಳೀಯ ಸರ್ಕಾರಿ ಶಾಲೆಯಲ್ಲಿಯೇ ತಾತ್ಕಾಲಿಕ ವ್ಯವಸ್ಥೆಗೆ ಪ್ರಯತ್ನಿಸಲಾಗುವದು. ಜಿಲ್ಲೆಯಲ್ಲಿ ಮಾದರಿ ಅಂಗನವಾಡಿ ಕೇಂದ್ರಗಳನ್ನ ಮಾಡಲು ಎಲ್ಲರೂ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಸಿದ್ದಲಿಂಗೇಶ್ವರ ಎಚ್. ಪಾಟೀಲ್ ಹೇಳಿದರು. 

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ  ಬಿ.ಕಲ್ಲೇಶ್, ತಾಲೂಕಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ನಾಗನಗೌಡ ಎನ್.ಪಿ., ದಸ್ತಗಿರಿಸಾಬ ಮುಲ್ಲಾ, ನೀತಾ ವಾಡ್ಕರ್, ಪವಿತ್ರಾ ದಿನೇಶ್ ಸೇರಿದಂತೆ ಇನ್ನುಳಿದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು