ಪ್ರತಿಭಾ ಪುರಸ್ಕಾರದ ವೇದಿಕೆಯ ಮಾತು ಸಾಕಾರ: ಸೃಷ್ಟಿ ಸಾಧನೆಗೆ ಲಕ್ಷ್ಮೀ ಹೆಬ್ಬಾಳಕರ್ ಮೆಚ್ಚುಗೆ
Words spoken at the talent award ceremony come to fruition: Lakshmi Hebbalkar praises Srishti's achi
ಬೆಳಗಾವಿ: ಎರಡು ವರ್ಷಗಳ ಹಿಂದೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ವೇದಿಕೆಯಲ್ಲಿ ‘ನಾನು ಡಾಕ್ಟರ್ ಆಗುತ್ತೇನೆ, ಒಃಃಖ ಸೀಟ್ ಪಡೆದೇ ತೀರುತ್ತೇನೆ’ ಎಂದು ಆತ್ಮವಿಶ್ವಾಸದಿಂದ ಹೇಳಿದ್ದ ಪ್ರತಿಭಾವಂತ ವಿದ್ಯಾರ್ಥಿನಿ ಸೃಷ್ಟಿ ನಾರಾಯಣ ಅಪ್ಟೇಕರ್ ಇದೀಗ ತನ್ನ ಮಾತನ್ನು ಸಾಕಾರಗೊಳಿಸಿ ವೈದ್ಯಕೀಯ ಶಿಕ್ಷಣದತ್ತ ಹೆಜ್ಜೆ ಇಟ್ಟಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಎರಡು ವರ್ಷಗಳ ಹಿಂದೆ ಲಕ್ಷ್ಮೀತಾಯಿ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ‘ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮದಲ್ಲಿ ಸುಮಾರು 600 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗಿತ್ತು. ಮುತಗಾ ಗ್ರಾಮದ ಸೃಷ್ಟಿ ನಾರಾಯಣ ಅಪ್ಟೇಕರ್ ಅವರು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.99 ಅಂಕ ಗಳಿಸಿದ್ದಕ್ಕಾಗಿ ಅಂದು ಸನ್ಮಾನ ಸ್ವೀಕರಿಸಿದ್ದರು.
ಸನ್ಮಾನದ ಸಂದರ್ಭದಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಭೇಟಿಯಾಗಿದ್ದ ಸೃಷ್ಟಿ, ‘ನಿಮ್ಮ ಆಶಯದಂತೆ ನಾನು ಡಾಕ್ಟರ್ ಆಗುತ್ತೇನೆ. ಒಃಃಖ ಸೀಟ್ ಪಡೆದೇ ತೀರುತ್ತೇನೆ’ ಎಂದು ದೃಢ ವಿಶ್ವಾಸದಿಂದ ಹೇಳಿದ್ದರು.
ಇದೀಗ ಸೃಷ್ಟಿ ಬಾಗಲಕೋಟೆಯ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ಒಃಃಖ ಸೀಟ್ ಪಡೆದುಕೊಂಡಿದ್ದಾರೆ. ತಮ್ಮ ಸಾಧನೆಯ ಸಂತಸದ ಸುದ್ದಿಯನ್ನು ಹಂಚಿಕೊಂಡು ಕೃತಜ್ಞತೆ ಸಲ್ಲಿಸಲು ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಭೇಟಿಯಾದರು.
ಸೃಷ್ಟಿಯ ಸಾಧನೆಗೆ ಸಂತಸ ವ್ಯಕ್ತಪಡಿಸಿರುವ ಲಕ್ಷ್ಮೀ ಹೆಬ್ಬಾಳಕರ್, ಎರಡು ವರ್ಷಗಳ ಹಿಂದೆ ತಮ್ಮ ಮುಂದೆ ಆತ್ಮವಿಶ್ವಾಸದಿಂದ ಹೇಳಿದ್ದ ಮಾತನ್ನು ಸೃಷ್ಟಿ ಇಂದು ಉಳಿಸಿಕೊಂಡಿದ್ದಾರೆ. ಪ್ರತಿಭೆ, ಪರಿಶ್ರಮ ಮತ್ತು ದೃಢ ಸಂಕಲ್ಪವಿದ್ದರೆ ಯಾವುದೇ ಗುರಿಯನ್ನು ಸಾಧಿಸಬಹುದು ಎಂಬುದಕ್ಕೆ ಸೃಷ್ಟಿ ಉತ್ತಮ ಉದಾಹರಣೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಳೆದ 20 ವರ್ಷಗಳಿಂದ ಶಿಕ್ಷಕರಾಗಿ ಜ್ಞಾನ ದಾಸೋಹ ಮಾಡುತ್ತಿರುವ ಸೃಷ್ಟಿಯ ತಂದೆ ನಾರಾಯಣ ಅಪ್ಟೇಕರ್ ಅವರ ಪರಿಶ್ರಮವೂ ಮಗಳ ಸಾಧನೆಯ ಹಿಂದೆ ಮಹತ್ವದ್ದಾಗಿದೆ. ಸೃಷ್ಟಿ ಹಾಗೂ ಅವರ ತಂದೆಯನ್ನು ಲಕ್ಷ್ಮೀ ಹೆಬ್ಬಾಳಕರ್ ಅಭಿನಂದಿಸಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ, ಗೌರವಿಸಿ, ಅವರ ಉನ್ನತ ಶಿಕ್ಷಣ ಹಾಗೂ ಉಜ್ವಲ ಭವಿಷ್ಯದ ಕನಸುಗಳಿಗೆ ಲಕ್ಷ್ಮೀತಾಯಿ ಫೌಂಡೇಷನ್ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಅವರು ಭರವಸೆ ನೀಡಿದರು.
ಸೃಷ್ಟಿ ಉತ್ತಮ ವೈದ್ಯೆಯಾಗಿ ಬೆಳೆದು ಸಮಾಜದ, ಅದರಲ್ಲೂ ಬಡವರ ಸೇವೆ ಮಾಡುವಂತಾಗಲಿ. ಆಕೆಯ ಮುಂದಿನ ವೈದ್ಯಕೀಯ ಶಿಕ್ಷಣದ ಪಯಣ ಯಶಸ್ವಿಯಾಗಲಿ ಎಂದು ಲಕ್ಷ್ಮೀ ಹೆಬ್ಬಾಳಕರ್ ಶುಭ ಹಾರೈಸಿದರು. ಎರಡು ವರ್ಷಗಳ ಹಿಂದೆ ‘ಪ್ರತಿಭಾ ಪುರಸ್ಕಾರ’ದಲ್ಲಿ ಸನ್ಮಾನಿತಳಾದ ವಿದ್ಯಾರ್ಥಿನಿ ಇಂದು ಒಃಃಖ ಸೀಟ್ ಪಡೆದುಕೊಂಡಿರುವುದು ಕಾರ್ಯಕ್ರಮದ ಆಶಯಕ್ಕೆ ಅರ್ಥಪೂರ್ಣ ಸಾಕ್ಷಿಯಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 