ರಾಯಬಾಗ 10: ಮಹಿಳೆಯರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಸ್ವಾಲಂಬನೆ ಜೀವನ ನಡೆಸಬೇಕೆಂದು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ಬುಧವಾರ ಸಾಯಂಕಾಲ ತಾಲೂಕಿನ ನಂದಿಕುರಳಿ ಗ್ರಾಮದ ಪಂಚಲಿಂಗೇಶ್ವರ ಮಠದ ಆವರಣದಲ್ಲಿ ಹಮ್ಮಿಕೊಂಡಿರುವ ಶರಣ ಸಂಸ್ಕೃತಿ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೃಷಿ, ವ್ಯಾಪಾರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆ ಸೈ ಎನ್ನಿಸಿಕೊಂಡಿದ್ದಾರೆ. ಮಹಿಳೆಯರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಬಲರಾಗಬೇಕೆಂದರು. ನಮ್ಮ ತಂದೆ ಸಚಿವರಾದ ಸತೀಶ ಜಾರಕಿಹೊಳಿಯವರು ಈ ಭಾಗದಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾಗಬಾರದು ಎಂದು ಈಗಾಗಲೇ ಹಿಡಕಲ್ ಜಲಾಶಯದಿಂದ ಕೆನಾಲಗಳಿಗೆ ನೀರು ಬಿಡಿಸಿದ್ದು, ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಿಕೊಂಡು, ನೀರಿನ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ವೀರಭದ್ರ ಸ್ವಾಮೀಜಿಯವರು ಸಾನಿಧ್ಯವನ್ನು ವಹಿಸಿದ್ದರು. ಶಿವಶಂಕರ ಸ್ವಾಮೀಜಿ, ಭೃಮರಾಂಬಿಕಾ ಶಿವಯೋಗಿ, ಬಿಡಿಸಿಸಿ ಅಧ್ಯಕ್ಷ ಅಪ್ಪಾಸಾಬ ಕುಲಗುಡೆ, ಅರ್ಜುನ ನಾಯಿಕವಾಡಿ, ದೀಲೀಪ ಜಮಾದಾರ, ಸತ್ತಾರ ಮುಲ್ಲಾ, ನಿರ್ಮಲಾ ಪಾಟೀಲ, ಗಣೇಶ ಮೊಹಿತೆ, ಶಿವು ಪಾಟೀಲ, ಶ್ರವಣ ಕಾಂಬಳೆ, ಸುನೀಲ ಜಾಧವ, ಸುಭಾಷ ಕೋಟಿವಾಲೆ, ನಿಂಗಪ್ಪ ಬಾನಕರಿ, ಕೇದಾರಿ ಮಾಳಿ, ಸಂತೋಷ ಸಾವಂತ ಸೇರಿ ಅನೇಕರು ಇದ್ದರು.