ಮಹಿಳೆಯರು ಸ್ವಾವಲಂಬಿಗಳಾಗಲು ಸ್ವ ಉದ್ಯೋದಲ್ಲಿ ತೋಡಗಿಸಿಕೊಳ್ಳಬೇಕು

ಡಾಕ್ಟರ್ ರಾಧಾ ಕುಲಕರ್ಣಿ ಮತ್ತು ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಕುಮಾರಿ ಯೋಗಿನೆ ಅಕ್ಕನವರು ಪಾಲ್ಗೊಂಡಿದ್ದರು

ಮಹಿಳೆಯರು ಸ್ವಾವಲಂಬಿಗಳಾಗಲು ಸ್ವ ಉದ್ಯೋದಲ್ಲಿ ತೋಡಗಿಸಿಕೊಳ್ಳಬೇಕು 

ಕೊಪ್ಪಳ 25: ಮಹಿಳೆಯರ ಸಬಲೀಕರಣದಿಂದ ಸಮಾಜ ಮತ್ತು ಕುಟುಂಬ ಸುಧಾರಣೆ ಗೊಳ್ಳುತ್ತದೆ ಮಹಿಳೆಯರು ಸ್ವಾಲಂಬಿಗಳಾಗಿ ಜೀವನ ಸಾಗಿಸಲು ಅವರಿಗೆ ಪ್ರೇರಣೆ ಮತ್ತು ಉತ್ತೇಜನ ನೀಡುವ ಸದುದ್ದೇಶದಿಂದ ಹೊಲಿಗೆ ಯಠರ ಮಷೀನ್ ದೇಣಿಗೆ ಯಾಗಿ ನೀಡಲಾಗಿದೆ ಎಂದು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ಹೇಳಿದರು.  

ಅವರು ಕೊಪ್ಪಳ ನಗರದ ಬ್ರಹ್ಮ ಕುಮಾರಿ ಈಶ್ವರಿ ವಿಶ್ವವಿದ್ಯಾಲಯ ದಲ್ಲಿ ಮಹಿಳೆಯರಿಗೆ ಅನುಕೂಲವಾಗಲು ಹೊಲಿಗೆ ಯಂತ್ರ ತರಬೇತಿ ಪಡೆಯಲು ಹೊಲಿಗೆ ಯಂತ್ರ ಮಷೀನ್ ವನ್ನು ತಮ್ಮ ಮತ್ತು ಕ್ಲಬ್ಬಿನ ಹಿರಿಯ ಕಾರ್ಯಕಾರಿ ಸದಸ್ಯರಾದ ಡಾಕ್ಟರ್ ರಾಧಾ ಕುಲಕರ್ಣಿ ಅವರ ವತಿಯಿಂದ ಹೊಲಿಗೆ ಯಂತ್ರ ನೀಡಿದ ಬಳಿಕ ಏರಿ​‍್ಡಸಿದ ಸರಳ ಸಾಂಕೇತಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. 

 ಮಹಿಳೆಯರ ಸಬಲೀಕರಣಕ್ಕಾಗಿ ಹೊಲಿಗೆ ಯಂತ್ರವನ್ನು ನೀಡುವ ಮೂಲಕ ಅರ್ಥಪೂರ್ಣ ಕೊಡುಗೆ ನೀಡಲಾಗಿದೆ, ಯುವ ಸಬಲೀಕರಣ ವಿಶೇಷವಾಗಿ ಮಹಿಳೆಯರ ಸಬಲೀಕರಣ ಸದುದ್ದೇಶ ದಂತೆ ಮಹತ್ವದ ಹೆಜ್ಜೆ ಇಟ್ಟಿದೆ ಪ್ರಾಯೋಗಿಕವಾಗಿ ಕೌಶಲ್ಯವನ್ನು ವೃದ್ಧಿಸಲು ಇದು ಅತ್ಯಂತ ಸಹಕಾರಿಯಾಗಿದೆ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಉತ್ತೇಜಿಸುವ ಕೆಲಸ ವಾಗಿದೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ಬಡ ಮಹಿಳೆಯರಲ್ಲಿ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಕಾರ್ಯಕಾರಿ ಮಂಡಳಿ ಹಿರಿಯ ಸದಸ್ಯರಾದ ಡಾಕ್ಟರ್ ರಾಧಾ ಕುಲಕರ್ಣಿ ಮತ್ತು ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಕುಮಾರಿ ಯೋಗಿನೆ ಅಕ್ಕನವರು ಪಾಲ್ಗೊಂಡಿದ್ದರು