ಮಹಿಳೆಯರು ಸಾಹಿತ್ಯ ಆಸಕ್ತಿ ಬೆಳೆಸಿಕೊಳ್ಳಬೇಕು

ಲೋಕದರ್ಶನ ವರದಿ 

ಯರಗಟ್ಟಿ 12: ಸಮಾಜದಲ್ಲಿ ಮಹಿಳೆಯರು ಎಲ್ಲಾ ರಂಗದಲ್ಲಿ ಮುನ್ನುಗದ್ಗುತ್ತಿದ್ದು ತಮ್ಮ ದೈನಂದಿನ ಕೆಲಸ ಕಾರ್ಯಗಳ ಜೊತೆಗೆ ಬಿಡುವಿನ ಸಮಯದಲ್ಲಿ ಕವನ ಹಾಗೂ ಕಥೆಗಳನ್ನು ಬರೆಯುವ ಹವ್ಯಾಸ ಬೆಳಿಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಹೇಳಿದರು.

ಇಲ್ಲಿನ ಶ್ರೀ.ಸಿ.ಎಮ್.ಮಾಮನಿ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಯರಗಟ್ಟಿ ತಾಲೂಕಾ ಘಟಕ, ಶ್ರೀ.ಸಿ.ಎಮ್.ಮಾಮನಿ ಸಕರ್ಾರಿ ಪ್ರಥಮ ದಜರ್ೆ ಕಾಲೇಜು ಹಾಗೂ ಉದ್ಯೋಗ ಮಾಹಿತಿ ಕೋಶದ ಸಹಬಾಗಿತ್ವದಲ್ಲಿ ನಡೆದ ಸ್ವಾಮಿ ವಿವೇಕಾನಂದರ 157 ನೇ ಜಯಂತೋತ್ಸದಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡುತ್ತಾ ವಿದ್ಯಾಥರ್ಿಗಳು ಈಗಿನಿಂದಲೇ ಕವನಗಗಳು, ಕಥೆಗಳು, ನಾಟಕಗಳನ್ನು ಬರೆಯುವ ಹವ್ಯಾಸ ಬೆಳಿಸಿಕೊಂಡು ಕನ್ನಡ ನಾಡು ನುಡಿಯನ್ನು ಉಳಿಸಿ ಬೆಳಿಸಬೇಕು. ಸಾಹಿತಿಗಳು ತಮ್ಮ ಕೃತಿಗಳನ್ನು ಪ್ರಕಟಣೆ ಮಾಡಲು ಅಸಹಾಯಕರಿದ್ದಲ್ಲಿ ಕಸಾಪದಿಂದ ಧಾನಿಗಳ ಮೂಲಕ ಪ್ರಕಟಣೆ ಮಾಡಿಕೊಡಲಾಗುವುದು ಎಂದರು.

ಶಿಕ್ಷಕ ಡಾ.ಬಾಳಪ್ಪ ಚಿನಗುಡಿ ಮಾತನಾಡುತ್ತಾ ವಿದ್ಯಾಥರ್ಿಗಳು ಮುಂದಿನ ಜೀವನದ ಕುರಿತು ಕನಸುಗಳನ್ನು ಕಟ್ಟಿಕೊಂಡು ಸ್ವಾಮಿ ವಿವೇಕಾನಂದರ ವಾಣಿಗಳನ್ನು ಮೆಲಕು ಹಾಕುತ್ತಾ ತಮ್ಮಲ್ಲಿ ಹುದಗಿರುವ ಪ್ರಜ್ವಲ ಶಕ್ತಿಯನ್ನು ಹೊರಹಾಕಿ ಸಾಧನೆ ಮಾಡಿದಾಗ ಜಗತ್ತೆ ನಿಮ್ಮನ್ನು ನೋಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಖ್ಯಾತ ಸಂಶೋದಕ ಚಿದಾನಂದ ಮೂತರ್ಿ ಅವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಅಪರ್ಿಸಲಾಯಿತು. ಮಹಾವಿದ್ಯಾಲಯದ ಗ್ರಂಥಾಲಯದಲ್ಲಿ ಗ್ರಂಥ ಪ್ರದರ್ಶನ ನಡೆಯಿತು. ಲೇಖಕಿ ಶಮಾ ಜಮಾದಾರ ಅವರ 'ಬಿಂಬ' ಕವಿತೆಗಳು ಹಾಗೂ  ಗಜಲಗಳ ಸಂಕಲನ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು. ರಾಜ್ಯ ಮಟ್ಟದ ವಿವಿಧ ಸ್ಪಧರ್ೆಗಳಲ್ಲಿ ವಿಜೇತರಾದ ವಿದ್ಯಾಥರ್ಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಕಾಲೇಜು ಪ್ರಾಚಾರ್ಯ ಡಾ. ಈರಣ್ಣ ಭೂಸ್ಥಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅಥಿತಿಗಳಾಗಿ ನಿವೃತ್ತ ಶಿಕ್ಷಕರಾದ ಎಸ್.ಎಸ್.ಕುರಬಗಟ್ಟಿಮಠ, ಆರ್.ಎಲ್.ಜುಗನವರ, ಎ.ಕೆ.ಜಮಾದಾರ, ತಮ್ಮಣ್ಣ ಕಾಮನ್ನವರ, ಡಾ.ವಿಶ್ವನಾಥ ತಾಂಶಿ, ಮಲ್ಲಿಕಾಜರ್ುನ ಚಟ್ಟಿ, ಶಿವುಕುಮಾರ ಜಕಾತಿ, ಸದಾಶಿವ ಗುಡಗುಂಟಿ, ಕಾಲೇಜು ಸಿಬ್ಬಂದಿ ವರ್ಗ ಹಾಗೂ ವಿದ್ಯಾಥರ್ಿಗಳು, ಕಸಾಪ ಸದಸ್ಯರು ಉಪಸ್ಥಿತರಿದ್ದರು. ಕಸಾಪ ತಾಲೂಕಾಧ್ಯಕ್ಷ ರಾಜೇಂದ್ರ ವಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಉಪನ್ಯಾಸಕಿ ವಿಜಲಕ್ಷ್ಮೀ ಬದ್ದಿ ಸ್ವಾಗತಿಸಿದರು, ಉಪನ್ಯಾಸಕರಾದ ರಾಜಶೇಖರ ಬಿರಾದಾರ ನಿರೂಪಿಸಿದರು, ಗುರುಪ್ರಸಾದ ಗಣೇಶ್ಕರ ವಂದಿಸಿದರು.