ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು - ಸ್ವಪ್ನಾಲಿ ಹುಕ್ಕೇರಿ

Women should be economically strong - Swapnali Hukkeri

ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು - ಸ್ವಪ್ನಾಲಿ  ಹುಕ್ಕೇರಿ 

 ಮಾಂಜರಿ  21: ಮಹಿಳೆಯರು ಎಲ್ಲ ರಂಗಗಳಲ್ಲಿಯೂ ಸಬಲರಾದಲ್ಲಿ ಇಡೀ ಸಮಾಜವೇ ಸದೃಢವಾಗಿ ಮುಂದುವರಿಯಲು ಸಾಧ್ಯ, ಈ ನಿಟ್ಟಿನಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಲ್ಲಿ ನಮ್ಮ ಸರ್ಕಾರ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸ್ವಪ್ನಾಲಿ ಹುಕ್ಕೇರಿ ಹೇಳಿದರು.  ಅವರು ಇಂದು ಚಿಕ್ಕೋಡಿ ಸದಲಗಾ ಮತಕ್ಷೇತ್ರದ ಖಡಕಲಾಟ, ಹಿರೇಕೋಡಿ ಹಾಗೂ ನೇಜ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಜರುಗಿದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ 202 ಮಹಿಳಾ ಸ್ವ ಸಹಾಯ ಸಂಘಗಳಿಗೆ ಶಾಸಕರಾದ ಗಣೇಶ ಹುಕ್ಕೇರಿ ಅವರ ಧರ್ಮಪತ್ನಿ ಹಾಗೂ ಅನ್ನಪೂರ್ಣೇಶ್ವರಿ ಫೌಂಡೇಶನ್ ಅಧ್ಯಕ್ಷರಾದ ಸ್ವಪ್ನಾಲಿ  ಹುಕ್ಕೇರಿ ಅವರು ತಲಾ ಒಂದು ಲಕ್ಷ ರೂಪಾಯಿ ಮೊತ್ತದ ಚೆಕ್ ವಿತರಣೆ ಮಾಡಿದರು. ಈ ವೇಳೆ ಮಾತನಾಡಿದ ಸ್ವಪ್ನಾಲಿ ಹುಕ್ಕೇರಿ ಅವರು ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾದ ಪ್ರಕಾಶ ಹುಕ್ಕೇರಿ ಹಾಗೂ ಶಾಸಕರಾದ ಗಣೇಶ ಹುಕ್ಕೇರಿ ಅವರ ಪ್ರಯತ್ನದಿಂದ ಸರ್ಕಾರದಿಂದ 4 ಕೋಟಿ ರೂಪಾಯಿ ಮಹಿಳಾ ಸ್ವ ಸಹಾಯ ಸಂಘಗಳಿಗೆ ಮಂಜೂರು ಮಾಡಲಾಗಿದ್ದು, ಸ್ವಾವಲಂಬಿ ಬದುಕಿಗೆ ಸ್ವ-ಉದ್ಯೋಗಗಳನ್ನು ಆಯ್ಕೆ ಮಾಡಿಕೊಂಡು ಉತ್ತಮ ಜೀವನ ಕಟ್ಟಿಕೊಳ್ಳಬೇಕೆಂದು ಹೇಳಿದರು. ಈ ವೇಳೆ ಸುಜಾತಾ ಚೌಗುಲೆ, ವಿದ್ಯಾ ಚಿಂಚಣೆ, ಜೈಬುದ್ದಿನ ತಹಸೀಲ್ದಾರ, ನೀಲಮ ಧಾಮನ್ನವರ, ಅನಿತಾ ಬನಗೆ ವಿಜಯಾ ಮಡ್ಡೆ, ರೂಪಾಲಿ ಕಾಂಬಳೆ, ಗಂಗೂಬಾಯಿ ಕಾಂಬಳೆ ಸೇರಿದಂತೆ ಖಡಕಲಾಟ, ಹಿರೇಕೋಡಿ ಹಾಗೂ ನೇಜ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರು ಹಾಗೂ ಮಹಿಳಾ ಸ್ವ ಸಹಾಯ ಸಂಘಗಳ ಸಾವಿರಾರು ಸದಸ್ಯರು ಉಪಸ್ಥಿತರಿದ್ದರು.