ಲೋಕದರ್ಶನ ವರದಿ
ಬೆಳಗಾವಿ ,29: ತಾರತಮ್ಯದ ಸಮಾಜದಲ್ಲಿ ಸತ್ಯ ಹೇಳುವುದು ಕಷ್ಟ ಮಹಿಳೆಯರನ್ನು ಅಗೋಚರವಾಗಿಕಾಡುವ ಮತ್ತುಕಾಣುವ ಸ್ಥಿತಿ ಭಾರತದಲ್ಲಿ ನಿಮರ್ಾಣವಾಗಿದೆಅಂತಹ ಸಂದರ್ಭದಲ್ಲಿ ಮಹಿಳಾ ಸಂಘಟನೆಗಳು ಇಂದಿನ 21 ಶತಮಾನದಲ್ಲಿತುಂಬಾತೀಕ್ಣವಾಗಿಧ್ವನಿಯೆತ್ತಿದೆ. ಅಂಬೇಡ್ಕರ ನುಡಿದಂತೆರಾಷ್ಟ್ರದ ಪ್ರಗತಿಯನ್ನುಗುರುತಿಸುವುದು ಆ ರಾಷ್ಟ್ರದ ಮಹಿಳೆಯರ ಪ್ರಗತಿ ಮೇಲೆ ನಿಂತಿದೆದೇಶದಲ್ಲಿ ಮಹಿಳಾ ಸಬಲೀಕರಣಕ್ಕೆ ಮುಕ್ತ ಅವಕಾಶ ನೀಡಿದೆದೇಶದಲ್ಲಿ ಅತೀ ಹೆಚ್ಚು ಆಡಳಿತ ನೀಡಿದ ಹೆಮ್ಮೆ ಮಹಿಳೆಯಾಗಿ ಇಂದಿರಾಗಾಂಧಿಯವರಿಗೆ ಸಲ್ಲುವುದು.ಮಾಯಾವತಿ ಸ್ವತಂತ್ರ ಪಕ್ಷಕಟ್ಟಿದರು, ಸಾವಿತ್ರಿಬಾಯಿ ಪುಲೇ ದೇಶದ ಪ್ರಥಮ ಶಿಕ್ಷಕಿ ಎನ್ನುವುದು ಅಷ್ಟೆ ಸತ್ಯ.ಇದರೊಂದಿಗೆ ಸಾಕಷ್ಟು ಸವಾಲುಗಳನ್ನು ಮಹಿಳೆ ಎದುರಿಸಬೇಕಾಗಿದೆ,
ತಳಹದಿಯ ರಾಜಕಾರಣದಲ್ಲಿ ಮತಗಳು ಅತಿಮುಖ್ಯ ಹಾಗಾಗಿ ಮಹಿಳೆ ತನ್ನರಾಜಕೀಯ ಸಂಘಟನೆ, ಭಾಗವಹಿಸುವಿಕೆ ಅರಿವನ್ನು ವಿಸ್ತರಿಸಿಕೊಂಡರೆ ಪ್ರಜಾಪ್ರಭುತ್ವಕ್ಕೆ ಹೆಚ್ಚು ಬಲ ಬರುತ್ತದೆ.ಎಂದು ಮೈಸೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ.ಜೆ. ಸೋಮಶೇಖರಅಭಿಪ್ರಾಯ ವ್ಯಕ್ತಿ ಪಡಿಸಿದರು.ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಭವನದಲ್ಲಿರಾಜ್ಯಶಾಸ್ತ್ರಅಧ್ಯಯನ ವಿಭಾಗದವು ಐ.ಸಿ.ಎಸ್.ಎಸ್.ಆರ್.ನವದೆಹಲಿ ಪ್ರಾಯೋಜಕತ್ವದ "ರಾಜಕೀಯ ಪಾಲ್ಗೊಳ್ಳೂವಿಕೆ, ಸಜ್ಜು ಗೊಳಿಸುವುದು ಮತ್ತು ಸಂಘಟನೆಯಿಂದ ಮಹಿಳೆಯರ ಸಬಲೀಕರಣ" ಎಂಬ ವಿಷಯಣದಕುರಿತು ಆಯೋಜಿಸಿದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ರಂಗರಾಜ ವನದುರ್ಗ ಮಾತನಾಡಿ ಮಹಿಳೆಯರಿಗೆ ಯಾವರೀತಿ ಸಬಲೀಕರಣ ಅಗತ್ಯ ಯಾವ ಕ್ಷೇತ್ರದಲ್ಲಿ ಸಬಲೀಕರಣ ಅಗತ್ಯ ಎನ್ನುವ ಆಯಾಮ ಸ್ಪಷ್ಟವಾಗಬೇಕಾಗಿದೆ ಇಂದಿನ ದಿನಮಾನದಲ್ಲಿ ಸಾಂಸ್ಕೃತಿಕ ರಾಜಕಾರಣದಲ್ಲಿ ಮಹಿಳೆಯರ ಸಬಲೀಕರಣ ಅಗತ್ಯವಾಗಿದೆ ಧರ್ಮ, ಪುರುಷದೈವಾಧಿಕಾರದಲ್ಲಿ ಮಹಿಳೆಯರ ಸಬಲೀಕರಣ ಸಾಧ್ಯವಾಗಿಲ್ಲ. ರಾಜಕಾರಣದಲ್ಲಿ ಬಡ, ಗ್ರಾಮೀಣ ಮಹಿಳೆಯರಿಗೆ ಅವಕಾಶ ನೀಡಬೇಕು ಈ ನಿಟ್ಟಿನಲ್ಲಿ ವಿಚಾರ ಸಂಕಿರಣ ಮಹಿಳಾ ಸಬಲೀಕರಣದ ಬೇರೆ ಬೇರೆ ಆಯಾಮಗಳಲ್ಲಿ ಆಗಬೇಕಾಗಿದೆಎಂದರು.
ಕೊಲ್ಹಾಪುರ ಶಿವಾಜಿ ವಿಶ್ವವಿದ್ಯಾಲಯದ ಪ್ರೊ. ಭಾರತೀ ಪಾಟೀಲ ದಿಕ್ಸೂಚಿ ಭಾಷಣ ಮಾಡುತ್ತಾ ಪ್ರಸ್ತುತ21 ನೇ ಶತಮಾನದಲ್ಲಿ ಮಹಿಳೆಯು ಎಲ್ಲಾ ಕ್ಷೇತ್ರಗಳಲ್ಲು ಭಾಗವಹಿಸಿ ರಾಜಕೀಯವಾಗಿಆಥರ್ಿಕವಾಗಿ ಸಬಲೀಕರಣವನ್ನು ಸಾಧಿಸುತ್ತಿದ್ದಾಳೆ ಆದ್ದರಿಂದ ಮಹಿಳಾ ಪ್ರಾತಿನಿಧ್ಯವಿಲ್ಲದ ಕ್ಷೇತ್ರವನ್ನು ಊಹಿಸಲು ಸಾಧ್ಯವಿಲ್ಲಾ ಎಂದು ಅಭಿಪ್ರಾಯಪಟ್ಟರು, ಬೆಂಗಳೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ವೀಣಾದೇವಿ, ತುಮಕೂರ ವಿಶ್ವವಿದ್ಯಾಲಯದ ಪ್ರೊ.ಬಸವರಾಜು ಜಿ, ಮೈಸೂರು ವಿಶ್ವವಿದ್ಯಾಲಯದರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ರಾಮಚಂದ್ರಪ್ಪಜಿ.ಟಿ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾಥರ್ಿಕಲ್ಯಾಣ ವಿಭಾಗದ ಅಧಿಕಾರಿ ಪ್ರೊ.ಕೆ. ಬಿ. ಚಂದ್ರಿಕಾ ಉಪಸ್ಥಿತರಿದ್ದರು. ಪ್ರೊ.ಕಮಲಾಕ್ಷಿತಡಸದ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ. ಪ್ರಕಾಶಕಟ್ಟಿಮನಿ, ಡಾ.ಹನುಮಂತಪ್ಪ. ಡಿ.ಜಿ. ಪಾಲ್ಗೊಂಡಿದ್ದರು. ವಿಚಾರ ಸಂಕಿರಣದ ಸಂಘಟನಾ ಕಾಯರ್ಾದಶರ್ಿ ಡಾ.ರಮೇಶ ಎಂ. ಎನ್. ಸ್ವಾಗತಿಸಿದರು, ರವಿಕುಮಾರ ಬಿ.ಕೆ ವಂದಿಸಿದರು ವಿನಿಯಾ ಮತ್ತು ನಿಂಗಪ್ಪಾ ನಿರೂಪಿಸಿದರು.