ಲಕ್ನೋ, ಆಗಸ್ಟ್ 20 ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ವಲಯದ ಎಲ್ಲ ಜಿಲ್ಲೆಗಳಲ್ಲಿ ಸೆಪ್ಟಂಬರ್ 12 ರಿಂದ 20ರವರೆಗೆ ಭಾರತೀಯ ಸೇನೆಯ ಮಹಿಳಾ ಮಿಲಿಟರಿ ಪೊಲೀಸ್ ಯೋಧರ ಮುಕ್ತ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಎರಡೂ ರಾಜ್ಯ ಗಳಿಂದ ಸುಮಾರು 4,458 ಮಹಿಳಾ ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಲಕ್ನೋದಲ್ಲಿರುವ ಸೇನಾ ಕೇಂದ್ರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ನೇಮಕಾತಿಗೆ ಅಗತ್ಯವಿರುವ ಆರ್ಹತೆ, ಮಾನದಂಡ, ಶೈಕ್ಷಣಿಕ ಆರ್ಹತೆ ಹಾಗೂ ನಡೆಸಲಾಗುವ ಸರಣಿ ಪರೀಕ್ಷೆಗಳ ವಿವರ ಮತ್ತಿತರ ಅಂಶಗಳು ಸೇನೆಯ ಅಧಿಕೃತ ವೆಬ್ ಸೈಟ್ ನಲ್ಲಿ ಲಭ್ಯವಿದೆ. ನೇಮಕಾತಿ ಸಂಬಂಧ ಅಭ್ಯರ್ಥಿಗಳನ್ನು ವಂಚಿಸುವ ವ್ಯಕ್ತಿಗಳ ಬಗ್ಗೆ ಎಚ್ಚರವಹಿಸುವಂತೆ ಸಲಹೆ ನೀಡಲಾಗಿದ್ದು, ಮಾಧಕ ಪದಾರ್ಥ ಬಳಸದಂತೆ, ಒಂದೊಮ್ಮೆ ಇಂತಹ ಚಟುವಟಿಕೆಯಲ್ಲಿ ತೊಡಗಿರುವುದು ಸಾಬೀತಾದರೆ ವಜಾಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.