ಮಹಿಳೆಯರು ಒತ್ತಡದ ಬದುಕಿನಿಂದ ಹೊರಬರಬೇಕು: ಕವಿತಾ

ಲೋಕದರ್ಶನ ವರದಿ

ಗದಗ 09: ದಿನನಿತ್ಯದ ಕೆಲಸ ಕಾರ್ಯಗಳ ಒತ್ತಡದಲ್ಲಿರುವ ಮಹಿಳೆಯರು ಸದೃಡ ಮನಸ್ಸಿಗಾಗಿ ಮನರಂಜನೆ ಹಾಗೂ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವುದು ಅವಶ್ಯವಾಗಿದೆ ಎಂದು ಶ್ರೀ ದುರ್ಗಾದೇವಿ ಶಿಕ್ಷಣ ಸಮಿತಿಯ ನಿರ್ದೇಶಕಿ ಕವಿತಾ ಇಮರಾಪೂರ ಅವರು ಹೇಳಿದರು.  

ನಗರದ ಗಂಗಾಪೂರ ಪೇಟೆಯಲ್ಲಿರುವ ಶ್ರೀ ದುರ್ಗಾದೇವಿ ಶಿಕ್ಷಣ ಸಮಿತಿಯಲ್ಲಿ ಜರುಗಿದ ಪಾಲಕರ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿ, ಪ್ರತಿದಿನ ಮಕ್ಕಳ ಆರೈಕೆ, ಕುಟುಂಬ ನಿರ್ವಹಣೆಯಲ್ಲಿ ಕಾಲ ಕಳೆಯುವ ಮಹಿಳೆಯರು  ಸದೃಡ ಆರೋಗ್ಯ ಹೊಂದಲು ಹಾಗೂ. ಒತ್ತಡದ ಬದುಕನ್ನು ಕಡಿಮೆ ಮಾಡಲು ಇಂತಹ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಬೇಕು ಈ ಕ್ರೀಡಾಕೂಟವ ಮಹಿಳೆಯರ ಬಾಲ್ಯದ ದಿನಗಳನ್ನು ನೆನಪಿಸುವಂತಾಗಿದೆ.  ಕ್ರೀಡಾಕೂಟದಲ್ಲಿ ಸೋಲು ಗೆಲವುದು ಮುಖ್ಯವಲ್ಲ ಎಲ್ಲರೂ ಒಂದಾಗಿ ಮುಕ್ತ ಮನಸ್ಸಿನಿಂದ ಪಾಲ್ಗೊಳ್ಳುವುದು ಮುಖ್ಯವಾಗಿದೆ ಎಂದು ಹೇಳಿದರು. 

ಪಾಲಕರ ಪರವಾಗಿ ಕವಿತಾ ಜಡಿ ಅವರು ಮಾತನಾಡಿ,  ಪ್ರತಿದಿನ ಮನೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ನಮಗೆ ಈ ಕ್ರೀಡಾಕೂಟವು ನಮ್ಮಲ್ಲಿರುವ ಪ್ರತಿಭೆಯನ್ನು ತೋರಿಸಲು ಸಾಕ್ಷಿಯಾಗಿದೆ. ಬರಿ ಮಕ್ಕಳ ಆಟದಲ್ಲಿ ಪಾಲ್ಗೊಂಡು ಸಂತೋಷ ಪಡುತ್ತಿದ್ದ ನಮಗೆ ಈಗ ನಾವೇ ಕ್ರೀಡಾಕೂಟದಲ್ಲಿ ಸ್ಪರ್ಧಾಳುಗಳಾಗಿ ಪಾಲ್ಗೊಂಡಿರುವುದು ಸಂತಸ ತಂದಿದೆ. ಮಕ್ಕಳೊಂದಿಗೆ ಪಾಲಕರು ಕ್ರೀಡಾಕೂಟದಲ್ಲಿ ಪಾಲ್ಗೊಂಡು ಪ್ರತಿಭೆ ತೋರಿಸಲು ಅವಕಾಶ ಕಲ್ಪಸಿದ ಶಾಲಾ ಆಡಳಿತ ಮಂಡಳಿಗೆ ಅಭಿನಂದನೆಗಳು ಎಂದು  ಹೇಳಿದರು.

 ಮುಖ್ಯಶಿಕ್ಷಕಿ ಶೋಭಾ ಸಂಬರಗಿಮಠ ಅವರು ಮಾತನಾಡಿ, ಕುಟುಂಬ ನಿರ್ವಹಣೆ ಹಾಗೂ ಮಕ್ಕಳ ಪಾಲನೆ ಪೋಷಣೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿರುವದರಿಂದ ಅವರ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ ಈ ನಿಟ್ಟಿನಲ್ಲಿ ಮಕ್ಕಳೊಂದಿಗೆ ಪಾಲಕರು ಆಟದಲ್ಲಿ ಪಾಲ್ಗೊಳ್ಳಬೇಕು ಎಂಬ ಉದ್ದೇಶದಿಂದ ಪಾಲಕರ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.  

ಪಾಲಕರ ಕ್ರೀಡಾಕೂಟದಲ್ಲಿ ಶಿಕ್ಷಕಿಯರಾದ  ರೇಖಾ ಅಂಗಡಿ ನೇತೃತ್ವದ ಕಿತ್ತೂರು ರಾಣಿ ಚನ್ನಮ್ಮ ಪಾಲಕರ ತಂಡ, ಮಂಜುಳಾ ಹಿಡ್ಕಿಮಠ ಅವರ ಒನಕೆ ಓಬವ್ವ ಪಾಲಕರ ತಂಡ ಹಾಗೂ ಪ್ರಭಾ  ಶಿರೋಳಕರ ಅವರ ಸಾವಿತ್ರಾಬಾಯಿ ಫುಲೆ ಪಾಲಕರ ತಂಡಗಳು ಏಕ ಮಿನಿಟ್ ಕ್ರೀಡಾಕೂಟದಲ್ಲಿ  ಬಕೇಟ್ನಲ್ಲಿ ಬಾಲು ಹಾಕುವುದು, ಗ್ಲಾಸ್ನಿಂದ ಪಿರಾಮಿಡ್ ರಚಿಸುವುದು ಹಾಗೂ ಮೇಣಬತ್ತಿಗಳನ್ನು ಹಚ್ಚುವ ಕ್ರೀಡೆಯಲ್ಲಿ ಪಾಲಕರು ಸಂತಸದಿಂದ ಪಾಲ್ಗೊಂಡರು.  

 ಮುಖ್ಯ ಶಿಕ್ಷಕಿ ಶೋಭಾ ಸಂಬರಗಿಮಠ, ಹರವಿ, ಪಣಬಂದ, ಅಗಸಿಮನಿ ಅವರುಗಳು ನಿರ್ಣಾಯಕರಾಗಿ ಪಾಲ್ಗೊಂಡಿದ್ದರು.