ಕ್ರೀಡೆಗಳಲ್ಲಿ ಮಹಿಳೆಯರು ಹೆಚ್ಚಾಗಿ ಪಾಲ್ಗೊಳ್ಳಲು ಕರೆ

ಲೋಕದರ್ಶನ ವರದಿ

ಬಾಗಲಕೋಟೆ 3: ಕ್ರೀಡೆ ರಾಜ್ಯ, ರಾಷ್ಟ್ರ ಮತ್ತು ಅಂತರ್ರಾಷ್ಟ್ರಮಟ್ಟದಲ್ಲಿ ಹೆಣ್ಣು ಮಕ್ಕಳಿಗೆ ಸ್ಥಾನವನ್ನು ತಂದುಕೊಟ್ಟಿದ್ದು, ವಿದ್ಯಾಥರ್ಿನಿಯರು ಕ್ರೀಡೆಯ ಕಡೆಗೆ ಒಲವನ್ನು ಹೊಂದಬೇಕೆಂದು ಬಸವೇಶ್ವರ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜಿ.ಜಿ.ಕೋರಿ ಹೇಳಿದರು.

   ನಗರದ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ & ವಾಣಿಜ್ಯ ಮಹಾವಿದ್ಯಾಲಯಲ್ಲಿಂದು ಏರ್ಪಡಿಸಿದ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ 2018-19 ನೇ ಸಾಲಿನ ಅಂತರ್ ಮಹಾವಿದ್ಯಾಲಯಗಳ ಹ್ಯಾಂಡಬಾಲ್ ಪಂದ್ಯಾಟ ಮತ್ತು ತಂಡದ ಆಯ್ಕೆಯ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. 

   ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಸ್.ಜೆ.ಒಡೆಯರ ಮಾತನಾಡಿ ಬೇರೆ ಬೇರೆ ಕಾಲೇಜುಗಳಿಂದ ಆಗಮಿಸಿದ ಕ್ರೀಡಾಪಟುಗಳು ಉತ್ತಮ ಆಟವನ್ನು ಆಡಿ ನಿಮ್ಮ ಕಾಲೇಜಿಗೆ ಹಾಗೂ ವಿಶ್ವವಿದ್ಯಾನಿಲಯಕ್ಕೆ ಘನತೆಯನ್ನು ಹೆಚ್ಚಿಸಬೇಕು. ಹಾಗೂ ಕ್ರೀಡೆಯಿಂದ ಹೆಣ್ಣು ಮಕ್ಕಳು ಆತ್ಮ ಸ್ಥೈರ್ಯವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು. 

  ಕಾರ್ಯಕ್ರಮದಲ್ಲಿ ದೈಹಿಕ ನಿದರ್ೇಶಕರಾದ ಎಂ.ವ್ಹಿ.ಬಾಜಪ್ಪನವರ ಉಪಸ್ಥಿರಿದ್ದರು. ಮಹಾವಿದ್ಯಾಲಯದ ಎಲ್ಲ ಸಿಬ್ಬಂದಿ ಹಾಗೂ ವಿದ್ಯಾಥರ್ಿನಿಯರು ಭಾಗವಹಿಸಿದ್ದರು. 

  ಪ್ರಾರಂಭದಲ್ಲಿ ಕುಮಾರಿ ಅಕ್ಕಮಹಾದೇವಿ ಆಡಿನ ಹಾಗೂ ನಿಂಗಮ್ಮ ಪ್ರಾಥರ್ಿಸಿದರು. ಡಾ.ಜಿಆಯ್. ನಂದಿಕೋಲಮಠ ಸ್ವಾಗತಿಸಿ, ಪರಿಚಯಿಸಿದರು. ಎಂ.ವ್ಹಿ.ಬಾಜಪ್ಪನವರ ವಂದಿಸಿದರು. ಎಸ್.ಕೆ. ಹಿರೇಮಠ ನಿರೂಪಿಸಿದರು.